More

    ಸರ್ವೋಚ್ಚ ನ್ಯಾಯಾಲಯ ಆದೇಶಕ್ಕೆ ಸರ್ಕಾರ ಬದ್ಧ

    ಖಾನಾಪುರ (ಬೆಳಗಾವಿ): ಮಹದಾಯಿ ವಿವಾದ ಕುರಿತಂತೆ ನ್ಯಾಯಾೀಧಿ ಕರಣದ ಅಂತಿಮ ಆದೇಶ ಜುಲೈನಲ್ಲಿ ಹೊರಬರ ಲಿದೆ. ಯೋಜನೆಯಲ್ಲಿ ಕರ್ನಾಟಕದ ಹಕ್ಕು ಇದ್ದರೂ ಸಹ ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲಿಸಿ ಮುಂದುವರಿಯಲು ಸರ್ಕಾರ ಬದ್ಧವಿದೆ. ಅಲ್ಲಿಯವರೆಗೆ ಅನಗತ್ಯ ಸಮಸ್ಯೆ ಸೃಷ್ಟಿಸಬೇಡಿ ಎಂದು ಸಾರ್ವಜನಿಕರಿಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿನಂತಿಸಿದರು.

    ಖಾನಾಪುರ ತಾಲೂಕಿನ ಕಳಸಾ ನಾಲಾ ಪ್ರದೇಶ ಹಾಗೂ ಮಲಪ್ರಭಾ ನದಿ ಉಗಮ ಸ್ಥಾನದ ಬಳಿ ಇರುವ ಮಾಹುಲಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಅಧಿಸೂಚನೆ ಹೊರಡಿಸಿದೆ. ಆ ಸೂಚನೆಯಂತೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಕುಡಿಯುವ ನೀರಿನ ಯೋಜನೆಗೆ ಅನುಮತಿ ಅಗತ್ಯ ಇಲ್ಲ ಎಂದು ತಿಳಿದುಕೊಂಡಿದ್ದೇನೆ. ಆದರೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಕೆಲವು ವಿಷಯಗಳು ವಿಚಾರಣೆಗೆ ಬಾಕಿ ಇವೆ. ಅವುಗಳಲ್ಲಿ ನಮಗೆ ಇರುವ ಕಾನೂನು ತೊಡಕು ನಿವಾರಿಸಿಕೊಂಡು ಮುಂದಿನ ಹೆಜ್ಜೆ ಇಡುತ್ತೇವೆ. ಮಹದಾಯಿ ನದಿಯ ಒಟ್ಟು 188 ಟಿಎಂಸಿ ನೀರಿನಲ್ಲಿ ಕರ್ನಾಟಕದ ಪಾಲು 44 ಟಿಎಂಸಿ ಇದೆ. ಅದಕ್ಕಿಂತ ಹೆಚ್ಚು ಬಂದರೂ ಸಂತೋಷ ಎಂದು ಸಚಿವರು ಹೇಳಿದರು.

    ರಾಜಕೀಯ ಮಾಡಬೇಡಿ

    ಇದು ರಾಜ್ಯದ ಸಮಸ್ಯೆ. ಅದರಲ್ಲಿ ರಾಜಕಾರಣ ಮಾಡಬಾರದು. ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಕೇಂದ್ರ ಸರ್ಕಾರದ ಅಧಿಸೂಚನೆಗೆ ಮುನ್ನ ರಾಜ್ಯ ಸರ್ಕಾರ ಈ ಯೋಜನೆ ಅನುಷ್ಠಾನಕ್ಕೆ ಬಜೆಟ್‌ನಲ್ಲಿ 200 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ, ಇದಕ್ಕೆ ಈಗ 500 ರಿಂದ 1000 ಕೋಟಿ ರೂ. ಅಗತ್ಯತೆ ಇದೆ. ಈ ಸಂಬಂಧ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುವುದಾಗಿ ಸಚಿವ ರಮೇಶ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts