More

    ಸುಪ್ರೀಂಕೋರ್ಟ್​ನಲ್ಲಿ ಆರ್​ಎಸ್​ಎಸ್​ಗೆ ಗೆಲುವು: ತಮಿಳುನಾಡು ಸರ್ಕಾರಕ್ಕೆ ಮುಖಭಂಗ

    ನವದೆಹಲಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ನೇತೃತ್ವದ ಡಿಎಂಕೆ ಸರ್ಕಾರದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್​ ತಮಿಳುನಾಡಿನಲ್ಲಿ ಸಮಾವೇಶ ಮತ್ತು ಪಥಸಂಚಲನ ನಡೆಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​)ಕ್ಕೆ ಅನುಮತಿ ನೀಡಿ ಮಂಗಳವಾರ (ಏ.11) ಆದೇಶ ಹೊರಡಿಸಿದೆ.

    ಅರ್ಜಿ ವಜಾ
    ರಾಜ್ಯದಲ್ಲಿ ಹಿಂದಿ ಮಾತನಾಡುವ ಕಾರ್ಮಿಕರಲ್ಲಿ ಭೀತಿಯನ್ನು ಉಂಟುಮಾಡಿದ ವದಂತಿಗಳನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಪಥಸಂಚಲನ ನಡೆಸಲು ಆರ್‌ಎಸ್‌ಎಸ್‌ಗೆ ಅನುಮತಿ ನೀಡಿವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಡಿಎಂಕೆ ಸರ್ಕಾರ ಪ್ರಶ್ನಿಸಿತ್ತು. ಆದರೆ, ಡಿಎಂಕೆ ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದೆ.

    ಇದನ್ನೂ ಓದಿ: ಸೊಂಟ ಹಿಡಿದು ನಿತಂಬ ಮುಟ್ಟಿದರು: ಸದ್ದುಗುಂಟೆಪಾಳ್ಯ SI ವಿರುದ್ಧ ಸರಣಿ ಟ್ವೀಟ್​ ಮಾಡಿ ಮಹಿಳೆ ಕಣ್ಣೀರು

    ಅನುಮತಿ ನಿರಾಕರಣೆ
    ಅಜಾದಿ ಕಾ ಅಮೃತ್ ಮಹೋತ್ಸವ ಮತ್ತು ಗಾಂಧಿ ಜಯಂತಿಯಂದು ಪಥಸಂಚಲನ ಹಾಗೂ ಸಮಾವೇಶ ನಡೆಸಲು ಆರ್​ಎಸ್​ಎಸ್​ ಕಳೆದ ಅಕ್ಟೋಬರ್ ತಿಂಗಳಲ್ಲಿ ತಮಿಳುನಾಡು ಸರ್ಕಾರದ ಅನುಮತಿಯನ್ನು ಕೋರಿತ್ತು. ಆದರೆ, ಸರ್ಕಾರ ಅನುಮತಿಯನ್ನು ನಿರಾಕರಿಸಿತ್ತು. ಬಳಿಕ ಆರ್​ಎಸ್​ಎಸ್​ ಮದ್ರಾಸ್​ ಹೈಕೋರ್ಟ್​ ಮೆಟ್ಟಿಲೇರಿತ್ತು.

    ಆರ್​ಎಸ್​ಎಸ್​ ಗೆಲುವು
    ಕಳೆದ ನವೆಂಬರ್​ನಲ್ಲಿ ಹೈಕೋರ್ಟ್​ನ ಏಕಸದಸ್ಯ ಪೀಠ ಆರ್​ಎಸ್​ಎಸ್​ ಪರವಾಗಿ ಷರತ್ತುಬದ್ಧ ತೀರ್ಪು ನೀಡಿತು. ಒಳಗಾಂಣ ಮತ್ತು ಸುತ್ತುವರಿದ ಪ್ರದೇಶಗಳಲ್ಲಿ ಮಾತ್ರ ಪಥಸಂಚಲನ ಮತ್ತು ಸಮಾವೇಶ ನಡೆಸಲು ಅನುಮತಿ ನೀಡಿತು. ಇದನ್ನು ಪ್ರಶ್ನೆ ಮಾಡಿ ಸರ್ಕಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಇದೀಗ ಆದೇಶ ಹೊರಬಿದ್ದಿದ್ದು, ಉನ್ನತ ನ್ಯಾಯಾಲಯದಲ್ಲೂ ಆರ್​ಎಸ್ಎಸ್​ಗೆ ಗೆಲುವಾಗಿದೆ. (ಏಜೆನ್ಸೀಸ್​)

    ಕರ್ನಾಟಕದಲ್ಲಿ ಟಿಕೆಟ್​ ನೀಡಲು ಗುಜರಾತ್​ ಮಾದರಿಯನ್ನು ಅನುಸರಿಸುತ್ತಾ ಬಿಜೆಪಿ ಹೈಕಮಾಂಡ್?

    ನಾಯಿ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ; ಹತ್ಯೆಗೆ ಸಾಥ್ ನೀಡಿದ ಆರೋಪದ ಮೇಲೆ ಪತ್ನಿಯೂ ಅಂದರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts