More

    IPL 2024 Final: ಸುಲಭ ತುತ್ತಾದ ಸನ್​ರೈಸರ್ಸ್​: 3ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೆಕೆಆರ್

    ಚೆನ್ನೈ: ಇಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಫೈನಲ್ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್​ ನಾಯಕತ್ವದ ಕೋಲ್ಕತ್ತ ನೈಟ್​ ರೈಡರ್ಸ್​ ಫೈನಲ್​ ಪಂದ್ಯದಲ್ಲಿ ಎದುರಾಳಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.ಇದು ಕೋಲ್ಕೊತಾ ಮೂಲದ ತಂಡಕ್ಕೆ 3ನೇ ಟ್ರೋಫಿಯಾಗಿದೆ

    ಇದನ್ನೂ ಓದಿ: ರೀಮಲ್‌ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ 1 ಲಕ್ಷ ಜನರ ಸ್ಥಳಾಂತರ

    ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದಾದ ಬಳಿಕ ಎಸ್‌ಆರ್‌ಎಚ್ ತಂಡ 18.3 ಓವರ್‌ಗೆ 10 ವಿಕೆಟ್ 10 ವಿಕೆಟ್ ನಷ್ಟಕ್ಕೆ 113 ರನ್‌ ಗಳಿಸಿತು. ಈ ಸುಲಭ ಗುರಿ ಬೆನ್ನಟ್ಟಿದ ಕೆಕೆಆರ್ ತಂಡವು 10.3 ಓವರ್‌ಗೆ 2 ವಿಕೆಟ್ ನಷ್ಟಕ್ಕೆ 114 ರನ್‌ ಗಳಿಸುವ ಮೂಲಕ ಭರ್ಜರಿ 8 ವಿಕೆಟ್‌ಗಳ ಗೆಲುವು ದಾಖಲಿಸಿತು.

    IPL 2024 Final: ಸುಲಭ ತುತ್ತಾದ ಸನ್​ರೈಸರ್ಸ್​: 3ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೆಕೆಆರ್

    ಸನ್​​ರೈಸರ್ಸ್​ ಹೈದರಾಬಾದ್​ ನೀಡಿದ ಸಾಧಾರಣ ಟಾರ್ಗೆಟ್‌‌ ಬೆನ್ನಟ್ಟಿದ ಕೆಕೆಆರ್‌ ತಂಡದ ಪರ ವೆಂಕಟೇಶ್‌‌ ಅಯ್ಯರ್ 26 ಎಸೆತದಲ್ಲಿ 3 ಸಿಕ್ಸ್‌ ಮತ್ತು 4 ಫೋರ್‌ ಮೂಲಕ 52 ರನ್‌ ಸಿಡಿಸಿದರೆ, ಗುರ್ಬಾಜ್‌ 39 ರನ್‌ ಹಾಗೂ ಸುನೀಲ್‌ ನರೇನ್‌ 6 ರನ್‌ ಮತ್ತು ನಾಯಕ ಶ್ರೇಯಸ್‌‌ ಅಯ್ಯರ್ 6 ರನ್‌ ಗಳಿಸಿದರು. ಈ ಮೂಲಕ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌‌ ತಂಡವು ಐಪಿಎಲ್‌ 17ನೇ ಸೀಸನ್‌ನ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

    ಆರಂಭದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಹೈದರಾಬಾದ್‌ ತಂಡ ಕೆಕೆಆರ್​ ಬೌಲಿಂಗ್‌ ದಾಳಿ ಎದುರು ರನ್ ಗಳಿಸಲು ಪರದಾಡಿತು. ಯಾವೊಬ್ಬ ಬ್ಯಾಟರ್ ಸಹ 30ರ ಗಡಿ ದಾಟಲಿಲ್ಲ. ಮರ್ಕರಂ 20 ಮತ್ತು ನಾಯಕ ಪ್ಯಾಟ್ ಕಮಿನ್ಸ್ ಗಳಿಸಿದ 24 ರನ್ ವೈಯಕ್ತಿಕ ಗರಿಷ್ಠ ಮೊತ್ತಗಳಾಗಿವೆ.
     
    ಅಭಿಷೇಕ್ ಶರ್ಮಾ(2), ಟ್ರಾವಿಸ್ ಹೆಡ್(0), ರಾಹುಲ್ ತ್ರಿಪಾಠಿ(9), ನಿತೀಶ್ ರೆಡ್ಡಿ(13) ಸೇರಿದಂತೆ ಬಹುತೇಕ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. 20 ಓವರ್‌ ಪೂರ್ಣ ಮಾಡಲು ಸಾಧ್ಯವಾಗದ ಹೈದರಾಬಾದ್ ತಂಡ 18.3 ಓವರ್‌ಗಳಿಗೆ 113 ರನ್‌ ಗಳಿಗೆ ಆಲೌಟ್ ಆಯಿತು.
     
    ಪ್ರತಿಯಾಗಿ ಬ್ಯಾಟ್​ ಮಾಡಿದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ 10.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ. 114 ರನ್ ಬಾರಿಸಿ ಸುಲಭ ಗೆಲವು ತನ್ನದಾಗಿಸಿಕೊಂಡಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್​ (52) ರನ್​ ಬಾರಿಸಿ ಗೆಲವಿಗೆ ಕೊಡುಗೆ ಕೊಟ್ಟರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts