More

    VIDEO: ನೆಚ್ಚಿನ ನಟನೊಂದಿಗೆ ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ತೋಳನ್ನು ಮುಟ್ಟಿದ ಯುವ ಅಭಿಮಾನಿ; ಕಿರಿಕಿರಿಗೆ ಒಳಗಾಗಿ ಕೈತೆಗೆಯುವಂತೆ ಸೂಚಿಸಿದ ಸುನೀಲ್ ಶೆಟ್ಟಿ

    ಮುಂಬೈ: ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಬಾಲಿವುಡ್​ ನಟ ಸುನೀಲ್​ ಶೆಟ್ಟಿಯವರು, ಸೆಲ್ಫೀ ತೆಗೆದುಕೊಳ್ಳಲು ತುಂಬ ಸಮೀಪ ಬಂದ ಅಭಿಮಾನಿಗಳಿಂದ ಕಿರಿಕಿರಿಗೆ ಒಳಗಾಗಿದ್ದಾರೆ.

    ಅದು ಶಾಲೆಯೊಂದರಲ್ಲಿ ನಡೆಯುತ್ತಿದ್ದ ಸಮಾರಂಭ. ನಟ ಸುನೀಲ್​ ಶೆಟ್ಟಿ ಕೂಡ ಅದರಲ್ಲಿ ಭಾಗವಹಿಸಿದ್ದರು. ಅವರನ್ನು ನೋಡುತ್ತಿದ್ದಂತೆ ಕೆಲವು ಅಭಿಮಾನಿಗಳು ಬಂದು ಸೆಲ್ಫೀ ತೆಗೆದುಕೊಳ್ಳಲು ಮುಂದಾದರು. ಅದರಲ್ಲೊಬ್ಬ ಯುವಕ ಸುನೀಲ್​ ಶೆಟ್ಟಿ ಕುಳಿತುಕೊಂಡಿದ್ದ ಆಸನದ ಹಿಂದೆ ಹೋಗಿ ನಿಂತ. ತುಂಬ ಹತ್ತಿರದಿಂದ ಬಾಗಿ ಅವರ ತೋಳನ್ನು ಹಿಡಿದ. ತಕ್ಷಣವೇ ಕಿರಿಕಿರಿಗೆ ಒಳಗಾದ ಸುನೀಲ್​ ಶೆಟ್ಟಿ, ಕೈತೆಗೆಯುವಂತೆ ಹೇಳಿದರು.

    ಆ ಯುವಕ ಕೈತೆಗೆದ. ಅಷ್ಟರಲ್ಲಿಯೇ ಸುನೀಲ್​ ಶೆಟ್ಟಿ ಜತೆಗಿದ್ದ ಅವರ ಸಹಚರರು ಅವನನ್ನು ಆಚೆಗೆ ಕಳಿಸಿದರು. ಅದಾದ ಬಳಿಕ ಇನ್ನೋರ್ವರು ಸ್ವಲ್ಪ ವಯಸ್ಸಾದವರು ಬಂದು ಸುನೀಲ್​ ಶೆಟ್ಟಿಯವರ ಪಕ್ಕ, ಸನಿಹದಲ್ಲೇ ಮೊಣಕಾಲೂರಿ ಕುಳಿತು ಸೆಲ್ಫೀ ತೆಗೆದುಕೊಳ್ಳಲು ಯತ್ನಿಸಿದರು. ಅವರ ಬಳಿ ಕೂಡ ಸುನೀಲ್​ ಶೆಟ್ಟಿ, ಸ್ವಲ್ಪ ದೂರ ಹೋಗಿ ಎಂದು ಹೇಳಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಅವರನ್ನೂ ಸಹ ಆಚೆ ಕಳಿಸಲಾಯಿತು.

    ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಕೆಲವರು ಸುನೀಲ್​ ಶೆಟ್ಟಿ ನಡೆಯನ್ನು ಖಂಡಿಸಿದ್ದಾರೆ. ಆದರೆ ಇನ್ನೂ ಕೆಲವರು ಬೆಂಬಲಿಸಿದ್ದಾರೆ. ಯುವಕ ತೋಳು ಮುಟ್ಟಿದ್ದು ಏನು ತಪ್ಪು? ಅಷ್ಟು ಓವರ್ ಆಗಿ ಯಾಕೆ ಪ್ರತಿಕ್ರಿಯೆ ತೋರಬೇಕಿತ್ತು ಎಂದು ಒಂದಷ್ಟು ಕಾಮೆಂಟ್​ಗಳು ವ್ಯಕ್ತವಾಗಿದೆ.

    ಆದರೆ ಮತ್ತೊಂದಷ್ಟು ಜನರು, ತಪ್ಪಿಲ್ಲ. ಅಪರಿಚಿತರು ಮುಟ್ಟಿದರೆ ನಾವಾದರೂ ಸಹಿಸಿಕೊಳ್ಳುತ್ತೀವಾ? ಸುನೀಲ್​ ಶೆಟ್ಟಿ ಸೆಲೆಬ್ರಿಟಿ ಎಂಬ ಕಾರಣಕ್ಕೆ ಅವರು ಹಾಗೆ ಮಾಡಿದ್ದು ತಪ್ಪು ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
    ಒಟ್ಟಿನಲ್ಲಿ ಸುನೀಲ್​ ಶೆಟ್ಟಿ ಅಭಿಮಾನಿಗಳೊಂದಿಗೆ ವರ್ತಿಸಿದ ರೀತಿಗೆ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts