More

    ಲಕ್ಷಾಂತರ ರೂ. ಮೌಲ್ಯದ ಸೂರ್ಯಕಾಂತಿ ನೀರಿಗಾಹುತಿ; ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ..

    ಗದಗ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೊ ಮಳೆಯಿಂದಾಗಿ ರೈತರು ತತ್ತರಿಸಿ ಹೋಗಿದ್ದಾರೆ. ಕಟಾವು ಮಾಡಿ ಹಾಕಿದ ಸೂರ್ಯಕಾಂತಿ ರಾಶಿಯಲ್ಲಿ ನೀರು ನುಗ್ಗಿದೆ. ಹತ್ತಕ್ಕೂ ಹೆಚ್ಚು ರೈತರು ಬೆಳೆದ ಬೆಳೆ ಮಳೆಗೆ ಆಹುತಿಯಾಗಿದೆ.

    ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮಕ್ತಂಪೂರ ಗ್ರಾಮದ ಹೊರವಲಯದಲ್ಲಿ ಸೂರ್ಯಕಾಂತಿ ರಾಶಿ ಹಾಕಲಾಗಿತ್ತು. ರಾತ್ರಿ ಸುರಿದ ಭಾರಿ ಮಳೆಯಿಂದ, ಸೂರ್ಯಕಾಂತಿ ರಾಶಿಯಲ್ಲಿ ನೀರು ನುಗ್ಗಿದೆ. ಕಷ್ಟಪಟ್ಟು ಬೆಳೆದ ಸೂರ್ಯಕಾಂತಿ ಬೆಳೆ ನೀರುಪಾಲಾಗಿದ್ದು, ರೈತರು ಕಂಗಾಲಾಗಿದ್ದಾರೆ.

    ಆದರೆ ಹೀಗೆ ಲಕ್ಷಾಂತರ ರೂಪಾಯಿ ಮೌಲ್ಯದ ಸೂರ್ಯಕಾಂತಿ ರಾಶಿ ನೀರಿಗೆ ಆಹುತಿಯಾಗಿ ಹಾಳಾಗಿದ್ದರೂ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಅದನ್ನು ಖಂಡಿಸಿ ಕೃಷಿ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

    ಇಂದಿನ ಯುವಕರಿಗೆ ಹೆಂಡತಿ ಎಂದರೆ ‘ಎಂದೆಂದಿಗೂ ಆಹ್ವಾನಿಸಲಾದ ಚಿಂತೆ’!; ಹೈಕೋರ್ಟ್​

    ಸಂಭಾವನೆ ಪಡೆಯದೆ ಪುಣ್ಯಕೋಟಿ ರಾಯಭಾರಿ ಆದ ಸುದೀಪ್​; ಕಿಚ್ಚನಿಗೆ ಸರ್ಕಾರದಿಂದಲೇ ಬರ್ತ್​ಡೇ ಗಿಫ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts