More

    ಸಮಾಜ ಕಟ್ಟಲು ಎನ್‌ಎಸ್‌ಎಸ್ ಶಿಬಿರ ಪೂರಕ; ಶಿವಾನಂದ ಸ್ವಾಮೀಜಿ

    ರಾಣೆಬೆನ್ನೂರ: ಯುವಕರಿಗೆ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಹಾಗೂ ಸ್ವಚ್ಛಂದ ಸಮಾಜ ಕಟ್ಟುವುದಕ್ಕೆ ಎನ್‌ಎಸ್‌ಎಸ್ ಶಿಬಿರವು ಪೂರಕವಾಗಿದೆ ಎಂದು ಶಿವಾನಂದ ಶಾಖಾ ಮಠದ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.
    ತಾಲೂಕಿನ ಸುಣಕಲ್ಲಬಿದರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್‌ನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
    ವಿದ್ಯಾರ್ಥಿಗಳು ತಮ್ಮ ತಮ್ಮ ಮನೋಭಾವನೆ ಬದಲಾಯಿಸಿಕೊಂಡು ಧನಾತ್ಮಕವಾಗಿ ಚಿಂತಿಸಬೇಕು. ಎಲ್ಲರಲ್ಲೂ ಬೆರೆತು ದೇಶದ ಅಭಿವೃದ್ಧಿ ಕಡೆಗೆ ಸಾಗೋಣ ಎನ್ನುವ ಮನೋಭಾವ ಹೊಂದಬೇಕು. ಗಾಂಧೀಜಿಯವರ ಚಿಂತನೆಯೆಂತೆ ಗ್ರಾಮಗಳಿಂದ ಸ್ವರಾಜ್ಯವೆಂಬ ಮಾತನ್ನು ಎಲ್ಲರೂ ಸಹಕಾರಗೊಳಿಸಬೇಕು ಎಂದರು.
    ಗ್ರಾಪಂ ಅಧ್ಯಕ್ಷ ಮಾದೇಗೌಡ ಜಾಪಾಳಿ ಅಧ್ಯಕ್ಷತೆ ವಹಿಸಿಕೊಂಡಿದ್ದರು.
    ಎನ್‌ಎಸ್‌ಎಸ್ ಯೋಜನಾಧಿಕಾರಿ ಎಚ್. ಶಿವಾನಂದ, ಗ್ರಾಪಂ ಸದಸ್ಯರಾದ ಭರಮಗೌಡ ಕುಡುಪಲಿ, ಬಸವಣ್ಣೆಪ್ಪ ಎಚ್., ಪ್ರಮುಖರಾದ ರಾಮನಗೌಡ ಕಲ್ಲಬಸವನಗೌಡ್ರ, ಕೊಟ್ರಯ್ಯ ದೇವಗಿರಿಮಠ, ಶಂಕರಗೌಡ ಕುಸಗೂರು, ಶಿವಾನಂದ ಸಂಗಾಪುರ, ಶಿವಕುಮಾರ ಗೋಡಿಹಾಳ, ಅಶೋಕ ಲಮಾಣಿ, ಆರ್. ಪ್ರವೀಣಕುಮಾರ, ಜಗದೀಶ ಕೊರಗರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts