More

    ಭಾರತಕ್ಕೆ ಜಾವೆಲಿನ್​ ಥ್ರೋನಲ್ಲೇ ಮತ್ತೊಂದು ಚಿನ್ನದ ಪದಕ! ವಿಶ್ವ ದಾಖಲೆ ರಚಿಸಿದ ಸುಮಿತ್​ ಅಂತಿಲ್​

    ಟೋಕಿಯೋ: ಕೆಲವು ದಿನಗಳ ಹಿಂದೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್​ ಚೋಪ್ರ ಅವರು ಭಾರತಕ್ಕೆ ಚಿನ್ನದ ಪದಕ ಗೆದ್ದುತಂದಿದ್ದರು. ಇದೀಗ ಅಲ್ಲೇ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ 2020ರಲ್ಲಿ ಇಂದಿನ ಪುರುಷರ ಜಾವೆಲಿನ್​ ಎಸೆತ ಎಫ್​64 ಅಂತಿಮ ಸ್ಪರ್ಧೆಯಲ್ಲಿ ಭಾರತದ ಸುಮಿತ್​ ಅಂತಿಲ್​ ಅಪ್ರತಿಮ ಆಟ ಪ್ರದರ್ಶಿಸಿ, ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

    ಮೊದಲನೇ ಎಸೆತದಲ್ಲೇ ವಿಶ್ವ ದಾಖಲೆ ನಿರ್ಮಿಸಿದ ಸುಮಿತ್​, ನಂತರದ ಪ್ರಯತ್ನಗಳಲ್ಲಿ ತಮ್ಮ ಹಿಂದಿನ ದಾಖಲೆಗಳನ್ನು ತಾವೇ ಮುರಿದು ಗಮನ ಸೆಳೆದರು. ಮೊದಲನೇ ಪ್ರಯತ್ನದಲ್ಲಿ 66.95ಮೀಟರ್​ ದೂರ ಎಸೆತ ಸಾಧಿಸಿ ಪ್ಯಾರಾಲಿಂಪಿಕ್ಸ್​​ನಲ್ಲಿ ವಿಶ್ವದಾಖಲೆ ಮಾಡಿದರು. ನಂತರ ಎರಡನೇ ಪ್ರಯತ್ನದಲ್ಲಿ 68.08ಮೀಟರ್​ ದೂರ ಎಸೆದರು, ಐದನೇ ಪ್ರಯತ್ನದಲ್ಲಿ 68.55 ಮೀಟರ್ ದೂರ ಎಸೆದು ದಾಖಲೆ ಸಾಧಿಸಿದರು. ಇದರೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

    ಇದನ್ನೂ ಓದಿ: ದೇಶ-ವಿದೇಶದ ಚಿತ್ರೋತ್ಸವಗಳಲ್ಲಿ ‘ಅವಲಕ್ಕಿ’ ಘಮ

    ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಇಂದು ಬೆಳಿಗ್ಗೆ ಅವನಿ ಲೇಖಾರ ಅವರು ಶೂಟಿಂಗ್​ನಲ್ಲಿ ಚಿನ್ನ ಗೆದ್ದು ಇತಿಹಾಸ ರಚಿಸಿದ್ದರು. ಜಾವೆಲಿನ್​ ಥ್ರೋ ಎಫ್​46 ವಿಭಾಗದಲ್ಲಿ ದೇವೇಂದ್ರ ಝಾಝರಿಯ ಎರಡನೇ ಸ್ಥಾನ ಪಡೆದು ರಜತ ಪದಕ ಗೆದ್ದಿದ್ದರು. ಇದೀಗ ಮತ್ತೊಂದು ಚಿನ್ನದ ಪದಕವನ್ನು ಸುಮಿತ್​ ಅಂತಿಲ್​ ಅವರು ಎಫ್​64 ವಿಭಾಗದ ಜಾವೆಲಿನ್​ ಥ್ರೋನಲ್ಲೇ ಪಡೆದಿರುವುದು ವಿಶೇಷವಾಗಿದೆ. (ಏಜೆನ್ಸೀಸ್)

    ಪ್ಯಾರಾಲಿಂಪಿಕ್ಸ್​: ವಿನೋದ್​ಕುಮಾರ್​ ಕೈತಪ್ಪಿದ ಕಂಚಿನ ಪದಕ

    ಗೂನು ಬೆನ್ನು ನಿವಾರಣೆಗೆ ಈ ಯೋಗಾಸನ ಸಹಕಾರಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts