More

    ಬೇರೆ ತಾಲೂಕಿನವರಿಗೆ ಅಧ್ಯಕ್ಷ ಪಟ್ಟ, ಸುಳ್ಯ ತಾಲೂಕು ಮಹಿಳಾ ಮಂಡಲ ಒಕ್ಕೂಟ ಮಹಾಸಭೆಯಲ್ಲಿ ಗದ್ದಲ

    ಸುಳ್ಯ: ಇಲ್ಲಿನ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಮಹಾಸಭೆಯಲ್ಲಿ ಒಕ್ಕೂಟಕ್ಕೆ ಬೇರೆ ತಾಲೂಕಿನವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು.

    ಒಕ್ಕೂಟದ ಉಪಾಧ್ಯಕ್ಷೆ ಸುಬ್ರಹ್ಮಣ್ಯದ(ಕಡಬ ತಾಲೂಕು) ತ್ರಿವೇಣಿ ಪಿ.ದಾಮ್ಲೆ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಸಭೆಯಿಂದ ಸೂಚನೆ ನೀಡಿದಾಗ ಮಾಜಿ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ಪ್ರತಿಕ್ರಿಯಿಸಿ, ಮೊದಲು ನಿರ್ದೇಶಕರ ಆಯ್ಕೆ ನಡೆಸೋಣ. ಬಳಿಕ ಅವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡೋಣ ಎಂದರು.

    ಈ ಹಿಂದೆಯೂ ನಿರ್ದೇಶಕರ ಆಯ್ಕೆ ನಂತರ ನಡೆದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಮಾಡಲಾಗಿತ್ತು. ಅದರಂತೆ ಈ ಬಾರಿಯೂ ನಡೆಯಲಿ ಎಂದರು. ಅಧ್ಯಕ್ಷೆ ಇಂದಿರಾ ರಾಜಶೇಖರ ರೈ ಸಹಿತ ಹಲವು ಸದಸ್ಯರು ಇದಕ್ಕೆ ಸಹಮತ ವ್ಯಕ್ತಪಡಿಸಿದರು.

    ಆದರೆ ಇದನ್ನೊಪ್ಪದ ಮಾಜಿ ಅಧ್ಯಕ್ಷೆ ಹರಿಣಿ ಸದಾಶಿವ ಅವರು, ಈ ಹಿಂದಿನಿಂದಲೂ ಉಪಾಧ್ಯಕ್ಷರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿತ್ತು. ಆದ್ದರಿಂದ ಈ ಬಾರಿ ತ್ರಿವೇಣಿ ಅವರೇ ಅಧ್ಯಕ್ಷರಾಗಲಿ ಎಂದು ಸಲಹೆಯಿತ್ತರು. ಮಾಜಿ ಅಧ್ಯಕ್ಷರಾದ ಚಂದ್ರಾಕ್ಷಿ ಜೆ.ರೈ, ಮಹಾಲಕ್ಷ್ಮೀ ಕೊರಂಬಡ್ಕ, ಜಯನಗರ ಮೈತ್ರಿ ಮಹಿಳಾ ಮಂಡಲ ಅಧ್ಯಕ್ಷೆ ಶಿಲ್ಪಾ ಸುದೇವ್ ಮತ್ತಿತರರು ಈ ಸಲಹೆಯನ್ನು ಬೆಂಬಲಿಸಿದರು.

    ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗುಣವತಿ ಕೊಲ್ಲಂತಡ್ಕ ಇದು ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ. ತ್ರಿವೇಣಿಯವರು ಕಡಬ ತಾಲೂಕಿಗೆ ಸೇರುತ್ತಾರೆ. ಈ ವಿಚಾರದಲ್ಲಿ ಇಲಾಖೆ ಅಧಿಕಾರಿಗಳ ಸಲಹೆ ಪಡೆದು ಮುಂದುವರಿಯೋಣ ಎಂದರು. ಅಧ್ಯಕ್ಷತೆ ವಹಿಸಿದ್ದ ಇಂದಿರಾರಾಜಶೇಖರ್ ಪ್ರತಿಕ್ರಿಯಿಸಿ, ಸಿಡಿಪಿಒ ಅವರು ಈ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ನಾವು ಅವರಲ್ಲಿ ಕೇಳಿದರೂ ಇನ್ನೂ ಸ್ಪಷ್ಟತೆ ನೀಡಿಲ್ಲ ಎಂದರು.
    ಇದರಿಂದ ಅಸಮಾಧಾನಗೊಂಡ ಹಲವರು ಸಭೆಯಿಂದ ಎದ್ದು ಹೊರನಡೆದರು. ಸಭೆಯಲ್ಲಿ ಉಳಿದ ಇತರರು ಉಪಾಧ್ಯಕ್ಷೆ ತ್ರಿವೇಣಿ ಅಧ್ಯಕ್ಷತೆಯಲ್ಲಿ ಸಭೆ ಮುಂದುವರಿಸಿದರು.

    ಅಧ್ಯಕ್ಷರಾಗಿ ತ್ರಿವೇಣಿ: ಅಧ್ಯಕ್ಷರಾಗಿ ತ್ರಿವೇಣಿ ಸುಬ್ರಹ್ಮಣ್ಯ, ಉಪಾಧ್ಯಕ್ಷರಾಗಿ ಮಧುಮತಿ ಬೊಳ್ಳೂರು, ಕಾರ್ಯದರ್ಶಿಯಾಗಿ ಸಂಪಾಜೆಯ ಕಾಂತಿ ಬಿ.ಎಸ್., ಖಜಾಂಚಿಯಾಗಿ ಜಟ್ಟಿಪಳ್ಳದ ಸುನೀತಾ ರಾಮಚಂದ್ರ ಹಾಗೂ 7 ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts