More

    ಸುಖೋಯ್ ಖರೀದಿಸಿದ್ದು ದೇವೇಗೌಡರು

    ಬೆಂಗಳೂರು: ಐದು ರಫೇಲ್ ಯುದ್ಧ ವಿಮಾನಗಳ ಬೆಂಗಾವಲಿಗೆ ಹೋಗಿದ್ದು ಎರಡು ಸುಖೋಯ್-30 ಯುದ್ಧ ವಿಮಾನಗಳು. ಈ ಸಂಖ್ಯೆಯೇ ಸುಖೋಯ್ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿ. ಒಬ್ಬ ಪ್ರಧಾನಿಗೆ 10ಜನ ಅಂಗರಕ್ಷಕರು ಇರುವ ಈ ಕಾಲದಲ್ಲಿ ಐದು ಆಧುನಿಕ ವಿಮಾನಗಳಿಗೆ ಎರಡು ವಿಮಾನಗಳು ಬೆಂಗಾವಲು ಸಾಕು ಎಂದರೆ ರಫೆಲ್ ಗಿಂತ ಹೆಚ್ಚಿನ ಸಾಮರ್ಥ್ಯ ಸುಖೋಯ್ ಗಿದೆ ಎಂದರ್ಥ.

    ಈ ಸುಖೋಯ್ ವಿಮಾನದ ಮೂಲ ಹುಡುಕುತ್ತ ಹೋದಾಗ ಗೊತ್ತಾದ ಸತ್ಯವೊಂದು ಕೇವಲ ಕನ್ನಡಿಗರಷ್ಟೇ ಅಲ್ಲದೆ ಇಡೀ ಭಾರತವೇ ಹೆಮ್ಮೆ ಪಡುವಂತಿದೆ. ಸುಖೋಯ್ ಎಂಬ ಸಶಕ್ತ ಹಾಗೂ ಅತ್ಯಾಧುನಿಕ ಯುದ್ಧ ವಿಮಾನವನ್ನು ಭಾರತ ವಾಯುಸೇನೆಗೆ ಖರೀದಿಸಿದ್ದು ನಮ್ಮ ಹೆಮ್ಮೆಯ ಕನ್ನಡಿಗ ದೇವೇಗೌಡರು. ಇದೆ ರಾಜ್ಯದಲ್ಲಿ ಹುಟ್ಟಿ ನಮ್ಮ ನಾಯಕರ ಸಾಧನೆಗಳು ಗೊತ್ತಿರದೆ, ನಮ್ಮ ಸ್ವಂತಿಕೆ ಹಾಗೂ ಶ್ರೇಷ್ಠತೆ ಮರೆತು ಅವರನ್ನೇ ತೆಗಳಿ ಪರ ರಾಜ್ಯದ ಭಕ್ತರಾಗಿರುವವರಿಗೆ ಈ ವಿಷಯವನ್ನು ನೆನಪಿಸಲಾಗಿದೆ.

    ಇದನ್ನೂ ಓದಿ: LIVE| ಭಾರತಕ್ಕೆ ಪಂಚ ಬ್ರಹ್ಮಾಸ್ತ್ರ: ಅಂಬಾಲ ವಾಯುನೆಲೆಗೆ ಬಂದಿಳಿದ ರಫೇಲ್ ರಣಧೀರ!

    ಸುಖೋಯ್ ಯುದ್ಧ ವಿಮಾನ ಖರೀದಿ ಒಪ್ಪಂದದ ಫೋಟೋ ಟ್ಯಾಗ್ ಮಾಡಿ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಏನೇ ಆಗಲಿ ಸುಖೋಯ್ ಯುದ್ಧ ವಿಮಾನ ಖರೀದಿ ಆದದ್ದು ಕನ್ನಡಿಗ ದೇವೇಗೌಡರು ಪ್ರಧಾನಿ ಆದಾಗ ಎಂಬುದು ನಾಡಿನ ಹೆಮ್ಮೆಯ ಸಂಗತಿ.

    ವಾಯುಪಡೆಗೆ ಭೀಮಬಲ; ರಫೇಲ್ ಕಂಡರೆ ಶತ್ರುಗಳಿಗೂ ಭಯ, ಚೀನಾ ಮತ್ತು ಪಾಕಿಸ್ತಾನಕ್ಕೆ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts