More

    ಸೋನಿಯಾ ಗಾಂಧಿ ನಿವಾಸದ ಎದುರು ಧರಣಿ ನಡೆಸಲು ನಿರ್ಧರಿಸಿದ ಎಸ್​​ಎಡಿ ಅಧ್ಯಕ್ಷ

    ನವದೆಹಲಿ: ಶಿರೋಮಣಿ ಅಕಾಲಿ ದಳ್​ದ ಅಧ್ಯಕ್ಷ ಸುಖ್​ಬೀರ್​ ಸಿಂಗ್​ ಬಾದಲ್​ ಅವರು ಆಗಸ್ಟ್​ 11ರಂದು ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿವಾಸದ ಹೊರಗೆ ಧರಣಿ ನಡೆಸಲು ನಿರ್ಧರಿಸಿದ್ದಾರೆ.

    ಪಂಜಾಬ್​ನಲ್ಲಿ ನಡೆಯುತ್ತಿರುವ ಕಳ್ಳಭಟ್ಟಿ ದುರಂತಕ್ಕೆ ಕಾಂಗ್ರೆಸ್​ ಕಾರಣ. ಅಲ್ಲಿನ ಮದ್ಯದ ದಂಧೆಯಲ್ಲಿ ಪಕ್ಷದ ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿರುವ ಅವರು, ಅಮರಿಂದರ್​ ಸಿಂಗ್​ ರಾಜೀನಾಮೆಗೆ ನಾವು ಧರಣಿ ಮೂಲಕ ಆಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇವೇಗೌಡರೇ, ನೀವು ಕ್ಷಮೆ ಕೇಳುವುದು ನಮಗೆ ಮುಜುಗರ… ಎಂದ ಜೆಡಿಎಸ್​ ಕಾರ್ಯಕರ್ತ

    ಕಳ್ಳಭಟ್ಟಿಯಿಂದಾಗಿ ಈಗಾಗಲೇ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇಷ್ಟಾದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿಲ್ಲ. ಹಾಗಾಗಿ ಮುಖ್ಯಮಂತ್ರಿಯ ರಾಜೀನಾಮೆ ಪಡೆಯಲು ಕಾಂಗ್ರೆಸ್ ಹೈಕಮಾಂಡ್​ನ್ನು ಆಗ್ರಹ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಹಾಗೇ, ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್ ಸಿಂಗ್​ ಈಗಾಗಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಳ್ಳಭಟ್ಟಿ ದಂಧೆಯ ಆರೋಪಿಗಳು ಪಾರಾಗಲು ಬಿಡುವುದಿಲ್ಲ. ಅವರಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ‘ಭಾಭ್​ ಜಿ’ಹಪ್ಪಳ ಕರೊನಾ ವಿರುದ್ಧ ಹೋರಾಡುತ್ತದೆ ಎಂದಿದ್ದ ಕೇಂದ್ರ ಸಚಿವರಿಗೂ ಸೋಂಕು; ಏಮ್ಸ್​ಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts