More

    ದೇವೇಗೌಡರೇ, ನೀವು ಕ್ಷಮೆ ಕೇಳುವುದು ನಮಗೆ ಮುಜುಗರ… ಎಂದ ಜೆಡಿಎಸ್​ ಕಾರ್ಯಕರ್ತ

    ಬೆಂಗಳೂರು: ಜೆಡಿಎಸ್​ ಅಧಿಕಾರದಲ್ಲಿದ್ದಾಗ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ, ಕುಟುಂಬ ರಾಜಕಾರಣ, ನಿಷ್ಠಾವಂತ ಕಾರ್ಯಕರ್ತರ ನಿರ್ಲಕ್ಷ್ಯ, ಭಟ್ಟಂಗಿಗಳಿಗೆ ಮಣೆ ಹಾಕುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಜೆಡಿಎಸ್​ ಯುವ ಘಟಕದ ಮಾಜಿ ಕಾರ್ಯಾಧ್ಯಕ್ಷ ಬಿ.ಎಚ್​.ಚಂದ್ರಶೇಖರ್​, ವರಿಷ್ಠರಿಗೆ ನೀಡಿರುವ ಸಲಹೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಇತ್ತೀಚೆಗೆ ದೇವೇಗೌಡರು ಪತ್ರ ಬರೆದು ಮೈತ್ರಿ ಸರ್ಕಾರದಲ್ಲಿ ಪಕ್ಷದ ಕಾರ್ಯಕರ್ತರಿಗಾದ ಅವಮಾನ ಮತ್ತು ಅಪಕೃಪೆ ಸಲುವಾಗಿ ಕ್ಷಮೆ ಕೋರಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ಚಂದ್ರಶೇಖರ್​, ಪ್ರತಿ ಬಾರಿ ನೀವು ಕ್ಷಮೆ ಕೇಳುವುದು ನಮಗೆ ಮುಜುಗರದ ವಿಚಾರ. 2006ರಲ್ಲಿ ಕುಮಾರಸ್ವಾಮಿ ಸರ್ಕಾರ ಪತನವಾದಾಗಲೂ ನೀವು ಇದೇ ರೀತಿ ಕ್ಷಮೆಯಾಚಿಸಿದ್ದೀರಿ. ಅದನ್ನು ಬಿಟ್ಟು ಪಕ್ಷ ಹೀಗೇಕೆ ಆಯಿತ್ತೆನ್ನುವುದನ್ನು ಪರಾಮರ್ಶೆ ಮಾಡಿಕೊಳ್ಳಿ ಎಂದು ನೇರವಾಗಿ ಹೇಳಿದ್ದಾರೆ.

    ಇದನ್ನೂ ಓದಿರಿ ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ, ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ; ಪ್ರಮೋದ್​ ಮುತಾಲಿಕ್​

    ಅಧಿಕಾರ ಬಂದಾಗಲೆಲ್ಲ ಪಕ್ಷದ ಕಾರ್ಯಕರ್ತರನ್ನು ಮರೆಯುವ ಪರಿಸ್ಥಿತಿಯಿಂದ ಹೊರಬಂದು ನಿಷ್ಠಾವಂತರಿಗೆ ಮನ್ನಣೆ ನೀಡಿದರೆ ಮಾತ್ರ ಪಕ್ಷ ರಾಜ್ಯದಲ್ಲಿ ಮತ್ತೆ ಪ್ರಬಲವಾಗುತ್ತದೆ. ಆಗ ನೀವೂ ಪದೇಪದೆ ಕ್ಷಮೆ ಕೋರುವುದೂ ತಪ್ಪುತ್ತದೆ ಎಂದು ಚಂದ್ರಶೇಖರ್​ ಪತ್ರದಲ್ಲಿ ಹೇಳಿದ್ದಾರೆ. ಪಕ್ಷವನ್ನು ಸಂಘಟಿಸಿ ಬೆಳೆಸಬೇಕು ಎಂಬುದು ಕೇವಲ ಮಾತಿಗಷ್ಟೆ. ಏಕೆಂದರೆ ಕುಮಾರಸ್ವಾಮಿ ಅವರೂ ಭಟ್ಟಂಗಿಗಳಿಗೆ ಮಣೆ ಹಾಕುತ್ತಾರೆ. ನೀವು ಕುಟುಂಬ ರಾಜಕಾರಣಕ್ಕೆ ಮೊರೆ ಹೋಗುತ್ತೀರಾ. ಹೀಗಿರುವಾಗ ಪಕ್ಷ ಸಂಘಟನೆ, ನಿಷ್ಠಾವಂತ ಕಾರ್ಯಕರ್ತರ ಗತಿಯೇನು ಎಂದು ಕಾರ್ಯಕರ್ತ ಪ್ರಶ್ನಿಸಿದ್ದಾರೆ.

    ಪ್ರಾದೇಶಿಕ ಪಕ್ಷವಾಗಿ ರಾಜ್ಯಕ್ಕೊಂದು ಹೊಸ ಭವಿಷ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಿದ್ಧವಾದ ಪಕ್ಷ ಜಾತ್ಯತೀತ ಜನತಾದಳ. ಮಾಜಿ ಪ್ರಧಾನಿ ದೇವೇಗೌಡರ ನಾಯಕತ್ವದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮುಖಂಡತ್ವದಲ್ಲಿ ಈ ಪಕ್ಷ ನಾಡಿನಲ್ಲಿ ಮಾಡಿದ ಸಾಧನೆ ಅಪಾರ. ರೈತರ ಅಭಿವೃದ್ಧಿಗಾಗಿ ಜಾರಿಗೆ ತಂದ ಯೋಜನೆಗಳೂ ಶ್ಲಾಘನೀಯ. ಆದರೆ, ಈ ಎಲ್ಲ ಸಾಧನೆಗಳಿಗೂ ಕುಟುಂಬ ರಾಜಕಾರಣ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ ಎಂದು ಹೇಳುವ ಮೂಲಕ ಜೆಡಿಎಸ್​ ವರಿಷ್ಠರು ಆತ್ಮಾವಲೋಕನ ಮಾಡಿಕೊಂಡು ಪಕ್ಷ ಬೆಳೆಸಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.

    ಇದನ್ನೂ ಓದಿರಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಹೊಸ ಮದ್ಯದಂಗಡಿ, ವೈನ್​ಶಾಪ್ ಪ್ರಾರಂಭಿಸಲ್ಲ: ಗೋವಿಂದ ಕಾರಜೋಳ

    ಕಾರ್ಯಕರ್ತರಿಗೆ ನೋವಾಗುವಂತಹ ಹಲವು ನಿರ್ಧಾರಗಳನ್ನು ಪಕ್ಷ ಕೈಗೊಂಡಿದೆ. ಇದಕ್ಕೆ ಕಾರಣವೇನು ಎಂದು ತಿಳಿಯುತ್ತಿಲ್ಲ. ಅಧಿಕಾರವಿದ್ದಾಗ ಪಕ್ಷನಿಷ್ಠರು ನಾಯಕರ ಕಣ್ಣಿಗೆ ಕಾಣಿಸುವುದಿಲ್ಲ. ಪಕ್ಷಕ್ಕಾಗಿ ಬೆವರು ಸುರಿಸಿ ದುಡಿದವರನ್ನು ಕಣ್ಣೆತ್ತಿಯೂ ನೋಡಲ್ಲ. ಅಯೋಗ್ಯರು, ಅಪ್ರಮಾಣಿಕರು, ಭ್ರಷ್ಟರು ಉನ್ನತ ಸ್ಥಾನ ಅಲಂಕರಿಸಿದರು. ಪಕ್ಷಕ್ಕಾಗಿ 25ರಿಂದ30 ವರ್ಷ ದುಡಿದವರನ್ನು ಗುರುತಿಸಲೇ ಇಲ್ಲ. ಅದರ ಬದಲು ಬೆಣ್ಣೆ ಮಾತಿನವರಿಗೆ ಪಕ್ಷದಲ್ಲಿ ಸಾಕಷ್ಟು ಅವಕಾಶಗಳನ್ನು ನೀಡಲಾಗುತದೆ. ಇಂತಹ ಹಲವು ಉದಾಹರಣೆಗಳು ನಿಮ್ಮ ಮುಂದಿವೆ. ಹೀಗಿದ್ದರೂ ಇದರ ಬದಲಾವಣೆಗೆ ನೀವೇಕೆ ಪ್ರಯತ್ನ ಪಡುತ್ತಿಲ್ಲ ಎಂದು ದೇವೇಗೌಡರನ್ನು ಬಿ.ಎಚ್​.ಚಂದ್ರಶೇಖರ್​ ಪ್ರಶ್ನಿಸಿದ್ದಾರೆ.

    Posted by Chandrashekar Banavara on Thursday, August 6, 2020

    ನಮ್ಮದು ಕಾರ್ಯಕರ್ತರ ಪಕ್ಷ. ಅವರ ವಿಶ್ವಾಸವನ್ನೇ ಕಳೆದುಕೊಂಡರೆ ನೀವು ಅಧಿಕಾರ ಹಿಡಿಯುವುದು ಸಾಧ್ಯವೆ? ಕಾರ್ಯಕರ್ತರು ಮತ್ತು ಜನರ ಸಿಟ್ಟಿಗೆ ಗುರಿಯಾದುದಕ್ಕೆ ಮಂಡ್ಯ ಹಾಗೂ ತುಮಕೂರು ಲೋಕಸಭೆ ಚುನಾವಣೆ ಫಲಿತಾಂಶವೇ ಸಾಕ್ಷಿ. ಕೆಲವೊಂದು ಬದಲಾವಣೆಯಿಂದ ಪಕ್ಷ ಸದೃಢಗೊಳ್ಳಲಿ ಎಂಬ ಆಶಯವನ್ನೂ ಚಂದ್ರಶೇಖರ್​ ಬಹಿರಂಗ ಪತ್ರದಲ್ಲಿ ವ್ಯಕ್ಯಪಡಿಸಿದ್ದಾರೆ.

    video/ ಕುಣಿಗಲ್​ ಶಾಸಕರ ಮೇಲೆ ಮಾಧುಸ್ವಾಮಿ ಕೆಂಗಣ್ಣು, ರಣರಂಗವಾಯ್ತು ಕೆಡಿಪಿ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts