More

    ಸೂಕ್ತ ದಾಖಲೆಯೊಂದಿಗೆ ಆಟೋ ಚಲಾಯಿಸಿ: ಪಿಎಸ್‌ಐ ಎಂ.ಧನಂಜಯ ಸೂಚನೆ

    ಕೂಡ್ಲಿಗಿ: ಆಟೋ ಚಾಲಕರು ಕಡ್ಡಾಯವಾಗಿ ಆಟೋಗಳ ನೋಂದಣಿ ಮಾಡುವ ಜತೆಗೆ ಚಾಲನ ಪರವಾನಗಿಯನ್ನು ಪಡೆದಿರಬೇಕು ಎಂದು ಕೂಡ್ಲಿಗಿ ಠಾಣೆ ಪಿಎಸ್‌ಐ ಎಂ.ಧನಂಜಯ ತಿಳಿಸಿದರು.


    ಪಟ್ಟಣದ ಚಿದಂಬರೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಫಡೆರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್‌ಯಿಂದ ಆಯೋಜಿಸಿದ್ದ ಆಟೋ ಚಾಲಕರಿಗೆ ಕಾನೂನು ಅರಿವು ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಗಾರದಲ್ಲಿ ಮಾತಾನಾಡಿದರು.

    ಡ್ರೈವರ್ ಲೈಸನ್ಸ್ ಇಲ್ಲದೆ ಓಡಿಸುವುದು ಕಾನೂನಿನ ಅಡಿಯಲ್ಲಿ ಅಪರಾಧ

    ಆಟೋಗಳಿಗೆ ನೋಂದಣಿ, ಡ್ರೈವರ್ ಲೈಸನ್ಸ್ ಇಲ್ಲದೆ ಓಡಿಸುವುದು ಕಾನೂನಿನ ಅಡಿಯಲ್ಲಿ ಅಪರಾಧವಾಗುತ್ತದೆ. ಆದ್ದರಿಂದ ವಾಹನಗಳ ಸೂಕ್ತ ದಾಖಲೆ, ವಾಹನ ಲೈಸನ್ಸ್, ಚಾಲಕನ ಪರವಾನಗಿ ಹಾಗೂ ವಿಮೆಯನ್ನು ಮಾಡಿಸಿಕೊಂಡು ಆಟೋ ಓಡಿಸಬೇಕು. ಇದರಿಂದ ನಿಮ್ಮಗಳ ಸುರಕ್ಷತೆ ಜತೆ ಪ್ರಯಾಣಿಕರು ಸಹ ಸುರಕ್ಷಿತರಾಗಿರುತ್ತಾರೆ. ಅಕಸ್ಮಾತ್ ಅಪಘಾತ ಸಂಭಂದಿಸಿದಲ್ಲಿ ವಿಮೆ ಇದ್ದರೆ, ಅದನ್ನು ಕ್ಲೈಮ್ ಮಾಡಿ ಪರಿಹಾರ ನೀಡಲು ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ನೀವು ಭರಿಸಬೇಕಾಗುತ್ತದೆ. ಆಟೋ ಚಾಲಕರ ದುಡಿಮೆ ಸಂಸಾರ ಸಾಗಿಸಲು ಸಾಲುವುದಿಲ್ಲ. ಆ ಕಾರಣಕ್ಕೆ ಕಡ್ಡಾಯವಾಗಿ ವಾಹನಗಳ ಸೂಕ್ತ ದಾಖಲೆಗಳೊಂದಿಗೆ ರಸ್ತೆ ಮೇಲೆ ಓಡಿಸಬೇಕು ಎಂದರು.

    ಇದನ್ನೂ ಓದಿ: ಮಹಿಳೆಯನ್ನು 400 ಮೀಟರ್ ದೂರ ಎಳೆದೊಯ್ದ ಆಟೋರಿಕ್ಷಾ; ಘಟನೆಯ ವಿಡಿಯೋ ವೈರಲ್!

    ಅನುಮಾನಸ್ಪದ ವ್ಯಕ್ತಿಗಳಿದ್ದರೆ ಮಾಹಿತಿ ಕೊಡಿ

    ಪ್ರಯಾಣಿಕರನ್ನ ಕರೆದೊಯ್ಯುವಾಗ ಅವರ ಚಲನ,ವಲನದ ಬಗ್ಗೆ ಗಮನವಿರಲಿ. ಅನುಮಾನಸ್ಪದ ವ್ಯಕ್ತಿಗಳಿದ್ದರೆ ಮಾಹಿತಿ ಕೋಡಿ ಇಲ್ಲವಾದಲ್ಲಿ ನೀವು ತೊಂದರೆ ಅನುಭವಿಸಬೇಕಾಗುತ್ತದೆ. ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಮಿತಿಮೀರಿ ಬ್ಯಾಗ್ ಹಾಗೂ ಮಕ್ಕಳನ್ನು ಕರೆದುಕೊಂಡು ಹೋಗದಿರಿ ಅಲ್ಲದ ರಸ್ತೆಗಳಲ್ಲಿ ಸಂಚಾರ ಮಾಡುವಾಗ ಸಹ ಸವಾರರಿಗೆ ಅನುಕೂಲ ಕಲ್ಪಿಸಿಕೊಡಿ,ಮಿತಿ ಮೀರಿದ ವೇಗ ಒಳ್ಳೆಯದಲ್ಲ, ಪ್ರಯಾಣಿಕರ ಜತೆ ಉತ್ತಮ ಭಾಂಧವ್ಯ ಹೊಂದಿ ಅವರ ನಂಬಿಕೆ ಜತೆ ಅವರನ್ನ ಸುರಕ್ಷಿತವಾದ ಜಾಗ ತಲುಪಿಸಿ. ಒಟ್ಟಾರೆ ಆಟೋ ಚಾಲಕರು ಕಾನೂನುಗಳನ್ನು ಗೌರವಿಸಿ ಇದರಿಂದ ಪೋಲಿಸರ ಕರ್ತವ್ಯಕ್ಕೂ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.


    ಕಾನೂನು ಸಲಹೆಗಾರ ಹಾಗೂ ವಕೀಲ ಸಿ.ವಿರುಪಾಕ್ಷಪ್ಪ ವಾಹನದ ಹಾಗೂ ಚಾಲಕರ ಪರವಾನಗಿ ಇಲ್ಲದೆ ಇದ್ದರೆ ಕಾನೂನಿನ ತೊಂದರೆ ಬಗ್ಗೆ ಮಾಹಿತಿ ನೀಡಿದರು. ಫಡೆರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ಜಿಲ್ಲಾಧ್ಯಕ್ಷ ಸಂತೋಷ ಕಲ್ಮಠ, ಕಜಾಪ ಅಧ್ಯಕ್ಷ ಕೆ.ಎಂ.ವೀರೇಶ್, ಕಸಾಪ ಅಧ್ಯಕ್ಷ ವೀರೇಶ್ ಅಂಗಡಿ, ಫಡೆರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ಹುಸೇನ್, ತಾಲೂಕು ಅಧ್ಯಕ್ಷ ಮಂಜು ಮಯೂರ, ಕಾರ್ಯದರ್ಶಿ ಜೆ. ಕುಮಾರಸ್ವಾಮಿ, ಯೂನಿಯನ್ ಸದಸ್ಯರಾದ ನಲ್ಲಮುತ್ತಿ ದುರುಗೇಶ್, ಇಸ್ಮಾಯಿಲ್, ರಮೇಶ್, ಮಲ್ಲಿಕಾರ್ಜುನ, ರೆಡ್ಡಿ ಇದ್ದರು.
    16ಕೂಡ್ಲಿಗಿ1
    ಫಡೆರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ಜಿಲ್ಲಾಧ್ಯಕ್ಷ ಸಂತೋಷ ಕಲ್ಮಠ, ಉಪಾಧ್ಯಕ್ಷ ಹುಸೇನ್, ಕಾನೂನು ಸಲಹೆಗಾರ ಸಿ.ವಿರುಪಾಕ್ಷಪ್ಪ, ಕಜಾಪ ಅಧ್ಯಕ್ಷ ಕೆ.ಎಂ.ವೀರೇಶ್, ಆಟೋಚಾಲಕರ ಸಂಘದ ತಾಲೂಕು ಅಧ್ಯಕ್ಷ ಮಂಜು ಮಯೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts