More

    ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಬಂದಿದ್ದ 3 ವಿದ್ಯಾರ್ಥಿಗಳ ಮೃತದೇಹಗಳು ಪತ್ತೆ; ಕಾರಣ ಏನು?

    ರಾಜಸ್ಥಾನ: ಸ್ಪರ್ಧಾತ್ಮಕ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಪೂರ್ವಸಿದ್ಧತಾ ತರಬೇತಿಯನ್ನು ನೀಡುವ ಕೋಚಿಂಗ್ ಸೆಂಟರ್‌ಗಳಿಗೆ ರಾಜಸ್ಥಾನದ ಕೋಟ ಹೆಸರುವಾಸಿ. ಇಲ್ಲಿಗೆ ಸ್ಪರ್ಧಾತ್ಮಕ ಪರೀಕ್ಷೆ ಕೋಚಿಂಗ್ ಪಡೆಯಲು ಬಂದಿದ್ದ ಮೂವರು ವಿದ್ಯಾರ್ಥಿಗಳು ತಾವು ವಾಸಿಸುತ್ತಿದ್ದ ಹಾಸ್ಲ್‌ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲರೂ 16, 17 ಮತ್ತು 18 ವರ್ಷ ವಯಸ್ಸಿನವರು.

    ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಪೈಕಿ ಅಂಕುಶ್ ಮತ್ತು ಉಜ್ವಲ್ ಬಿಹಾರ ಮೂಲದವರಾಗಿದ್ದಾರೆ. ಅದೇ ಹಾಸ್ಟೆಲ್‌ನಲ್ಲಿ ಅಕ್ಕಪಕ್ಕದ ಕೊಠಡಿಗಳಲ್ಲಿ ತಂಗಿದ್ದರು. ಒಬ್ಬ ಎಂಜಿನಿಯರಿಂಗ್ ಕಾಲೇಜು ಪ್ರವೇಶ ಪರೀಕ್ಷೆಗೆ ಓದುತ್ತಿದ್ದರೆ, ಇನ್ನೊಬ್ಬ ವೈದ್ಯಕೀಯ ಕಾಲೇಜು ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಇಲ್ಲಿಯವರೆಗೆ ಯಾವುದೇ ಡೆತ್ ನೋಟ್ ಕೂಡ ಪತ್ತೆಯಾಗಿಲ್ಲ. ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಮೂರನೇ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ನೀಟ್‌ಗೆ ತಯಾರಿ ನಡೆಸುತ್ತಿದ್ದು, ಕೋಟದಲ್ಲಿ ನೆಲೆಸಿದ್ದ. ಪೊಲೀಸರು ವಿದ್ಯಾರ್ಥಿಯನ್ನು ಮಧ್ಯಪ್ರದೇಶದ ನಿವಾಸಿ ಪ್ರಣವ್ ವರ್ಮಾ ಎಂದು ಗುರುತಿಸಿದ್ದಾರೆ.

    “ಭಾನುವಾರ ಸಂಜೆ ಪ್ರಣವ್ ಊಟ ಮಾಡಿ ನಂತರ ತನ್ನ ಕೋಣೆಗೆ ಹೋದ. ಭಾನುವಾರ ರಾತ್ರಿಯೂ ಅವನು ತನ್ನ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದಾನೆ. ರಾತ್ರಿ ವೇಳೆ ನೀರು ಕುಡಿಯಲು ಇನ್ನೊಬ್ಬ ವಿದ್ಯಾರ್ಥಿ ಎಚ್ಚರಗೊಂಡಾಗ, ಪ್ರಣವ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಸ್ಟೆಲ್ ಆವರಣದಲ್ಲಿ ಬಿದ್ದಿರುವುದನ್ನು ನೋಡಿ ಕೂಡಲೇ ಹಾಸ್ಟೆಲ್ ನಿರ್ವಾಹಕರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಅವನನ್ನು ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿ ವೈದ್ಯರು ಅವನು ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ.

    ಕೋಚಿಂಗ್ ಹಬ್ ನಲ್ಲಿ ದೀರ್ಘ ಕಾಲದ ತರಗತಿಗಳು, ದೀರ್ಘ ಅಸೈನ್ ಮೆಂಟ್ ಗಳು ಮತ್ತು ಹಲವಾರು “ಬ್ಯಾಚ್‌ಗಳ” ನಡುವೆ ಸ್ಪರ್ಧೆ ಇರುತ್ತದೆ. ಅತ್ಯಂತ ಸ್ಪರ್ಧಾತ್ಮಕ ಆಂತರಿಕ ಇಪರೀಕ್ಷೆಗಳೂ ರುತ್ತವೆ. ಅವು ಎಷ್ಟೋ ಬಾರಿ ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯವನ್ನು ಕುಂದಿಸುತ್ತವೆ. ಈ ಸ್ಥಳ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಎಷ್ಟು ಪ್ರಸಿದ್ಧವಾಗಿದೆಯೋ, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ವಿಷಯದಲ್ಲೂ ಅಷ್ಟೇ ಕುಖ್ಯಾತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts