More

    ಸಿಇಟಿ, ನೀಟ್ ಉಚಿತ ತರಗತಿ ಸಮಾರೋಪ

    ಹುಬ್ಬಳ್ಳಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಇಲ್ಲಿನ ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಆಯೋಜಿಸಿದ್ದ ಉಚಿತ ಸಿಇಟಿ, ನೀಟ್ ತರಗತಿಗಳ ಸಮಾರೋಪ ಸಮಾರಂಭ ಬುಧವಾರ ಜರುಗಿತು.

    13 ಜಿಲ್ಲೆಗಳ 243 ವಿದ್ಯಾರ್ಥಿಗಳು ತರಗತಿಯಲ್ಲಿ ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ನರ ವಿಜ್ಞಾನ ತಜ್ಞ ಡಾ. ವಿಜಯ ಮಹಾಂತೇಶ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದಿದ್ದೇವೆ ಎಂಬ ಹಿಂಜರಿಕೆ ಬಿಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆ ಅಪಾರವಾದದ್ದು ಎಂದರು.

    ಪರಿಷತ್ ಪ್ರಾಂತ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ ಮಾತನಾಡಿ, ರಾಜ್ಯದ 16 ಕೇಂದ್ರಗಳಲ್ಲಿ ಉಚಿತ ತರಬೇತಿಯನ್ನು ನಡೆಸಿದು, 4,456 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ತಿಳಿಸಿದರು.

    ಮುಂದಿನ ದಿನಗಳಲ್ಲಿ ಕಟ್ಟ ಕಡೆಯ ವಿದ್ಯಾರ್ಥಿಗೂ ಈ ತರಬೇತಿ ದೊರೆಯುವಂತೆ ಮಾಡುವ ಉದ್ದೇಶ ವಿದ್ಯಾರ್ಥಿ ಪರಿಷತ್ ಹೊಂದಿದೆ ಎಂದು ಹೇಳಿದರು.

    ಎಬಿವಿಪಿ ರಾಷ್ಟಿ್ರಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ವಿರೇಶ ಬಾಳಿಕಾಯಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯ ಭಯವನ್ನು ಹೋಗಲಾಡಿಸಿಕೊಂಡು, ಉತ್ತಮ ರೀತಿಯಲ್ಲಿ ಪರೀಕ್ಷೆ ಎದುರಿಸುವಂತೆ ಸಲಹೆ ನೀಡಿದರು.

    ಉಪನ್ಯಾಸಕರಾದ ತಿಮ್ಮರೆಡ್ಡಿ , ಪ್ರಕಾಶ ಕರಿಗೌಡರ, ಕಾವ್ಯ ಅವರನ್ನು ಹಾಗೂ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಸಂಚಾಲಕರಾದ ಸಿದಾರ್ಥ , ಮೋನೇಶ, ಅಮೃತ, ಜ್ಯೋತಿ, ವಿದ್ಯಾ , ನಾಗರಾಜ, ರಮೇಶ ಹಾಗೂ ಇತರರು ಉಪಸ್ಥಿತರಿದ್ದರು.

    ನಗರ ಅಧ್ಯಕ್ಷ ವಿಠ್ಠಲ ವಾಘ್ಮೂೕಡೆ ಸ್ವಾಗತಿಸಿದರು. ನವೀನ್ ನಿರೂಪಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಣಿಕಂಠ ಕಳಸ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts