More

    video/ ಕಾವೇರಿ ಮಾತೆಗೆ ಕೈ ಮುಗಿದು ನದಿಗೆ ಹಾರಿದ ಮಹಿಳೆ! ಆತ್ಮಹತ್ಯೆಗೆ ಯತ್ನಿಸಿದ ದೃಶ್ಯ ವೈರಲ್

    ಮಡಿಕೇರಿ: ಮೂರ್ನಾಡಿನ ಬಲಮುರಿಯಲ್ಲಿ ಮೈದುಂಬಿ ಹರಿಯುತ್ತಿರುವ ಕಾವೇರಿಗೆ ಕೈಮುಗಿದ ಮಹಿಳೆಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡಿನ ನಿವಾಸಿ ಮುನಿಯಮ್ಮ ಆತ್ಮಹತ್ಯೆಗೆ ಯತ್ನಿಸಿದವರು. ಸೋಮವಾರ ಸಂಜೆ ಮಳೆ ಸುರಿಯುತ್ತಿದ್ದರೂ ಬಲಮುರಿ ಬಳಿಯ ಸೇತುವೆಯ ಮೇಲೆ ನಿಂತ ಮುನಿಯಮ್ಮ, ಸುಮಾರು 20 ಸೆಕೆಂಡ್​ಗಳ ಕಾಲ ಕೈ ಮುಗಿದು ನಮಸ್ಕರಿಸಿ ನಂತರ ಸೇತುವೆಯಿಂದ ಸ್ವಲ್ಪ ಕೆಳಗೆ ಇಳಿದು, ಅಲ್ಲಿಂದ ನದಿಗೆ ಹಾರಿದ್ದಾರೆ. ಅನತಿ ದೂರದಲ್ಲಿ ಕುಳಿತಿದ್ದ ಯುವಕನೊಬ್ಬಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್​ ಮಾಡಿದ್ದು, ವೈರಲ್​ ಆಗಿದೆ.

    ಇದನ್ನೂ ಓದಿರಿ ಹೆಂಡತಿ-ಮಗನಿಗೆ ಕರೊನಾ ಸೋಂಕು ತಗುಲಿದ್ದಕ್ಕೆ ಗಂಡನನ್ನೇ ಬಲಿ ಪಡೆದ ನೆರೆಯವರು!

    ಉಕ್ಕಿ ಹರಿಯುವ ಕಾವೇರಿ ನದಿಗೆ ಹಾರಲು ಮುನಿಯಮ್ಮ ಹಾರಲು ಮುಂದಾಗುತ್ತಿದ್ದಂತೆ ಸೇತುವೆ ಬಳಿ ಆಟೋ ಸಂಚರಿಸಿತ್ತಿತ್ತು. ಆಟೋ ಮರೆಯಾಗುತ್ತಿದ್ದಂತೆ ದೇವರಿಗೆ ಕೈಮುಗಿದು ನೀರಿಗೆ ಹಾರಿದ್ದಾಳೆ. ಇದೇ ವೇಳೆ ಮೇಲ್ಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ಸೇತುವೆಯಲ್ಲಿ ನಿಂತಿದ್ದ ಯುವಕರು ಮಹಿಳೆ ನದಿಗೆ ಹಾರುವುದನ್ನು ವಿಡಿಯೋ ಮಾಡಿದ್ದಾರೆ.
    ಮಹಿಳೆ ನದಿಗೆ ಹಾರುತ್ತಿದ್ದಂತೆ ಬಲಮುರಿ ದೇವಾಲಯದ ಸಮೀಪದಲ್ಲೇ ಇದ್ದ ಸ್ಥಳೀಯರಾದ ಸೂರಜ್​ ಮತ್ತು ಕಿರಣ್​ ಎಂಬುವರು ರಕ್ಷಣೆಗೆ ಧಾವಿಸಿದ್ದಾರೆ. ಮಹಿಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದಂತೆ ನದಿ ದಡದಲ್ಲಿ ಒಂದು ಕಿ.ಮೀ. ವರೆಗೂ ಯುವಕರು ಓಡಿದ್ದಾರೆ. ಬಳಿಕ ಹಗ್ಗದ ಸಹಾಯದಿಂದ ಮುನಿಯಮ್ಮಳನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಗಂಡ ಮತ್ತು ಮಗನೊಂದಿಗೆ ವಾಸವಿರುವ ಮುನಿಯಮ್ಮ ಮುನಿಯಮ್ಮ ಕೂಲಿ ಕೆಲಸ ಮಾಡುತ್ತಾರೆ. ಆತ್ಮಹತ್ಯೆಗೆ ಕಾರಣ ಏನೆಂದು ಗೊತ್ತಾಗಿಲ್ಲ. ಆದರೆ, ತನ್ನ ತಾಯಿ ಮದ್ಯ ಸೇವಿಸಿದ್ದು. ಕುಡಿದ ಅಮಲಿನಲ್ಲಿ ನದಿಗೆ ಹಾರಿದ್ದಾರೆಂದು ಆಕೆಯ ಪುತ್ರ ಹೇಳಿದ್ದಾನೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೇವರಿಗೆ ಕೈ ಮುಗಿದು ಸಾಯಲು ಕಾವೇರಿ ನದಿಗೆ ಧುಮುಕಿದಳು!

    ದೇವರಿಗೆ ಕೈ ಮುಗಿದು ಸಾಯಲು ಕಾವೇರಿ ನದಿಗೆ ಧುಮುಕಿದಳು!ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಉಕ್ಕಿ ಹರಿಯುತ್ತಿರುವ ಕಾವೇರಿ ನದಿಗೆ ಜಿಗಿದ ದೃಶ್ಯ ವೈರಲ್​ ಆಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಲಮುರಿಯ ಕಾವೇರಿ ಹೊಳೆಗೆ ಮಳೆ ನಡುವೆಯೂ ಬಂದ ಮೂರ್ನಾಡು ಗ್ರಾಮದ ಮಹಿಳೆ, ದೇವರಿಗೆ ಕೈ ಮುಗಿದು ನದಿಗೆ ಧುಮುಕಿದ್ದಾಳೆ. ಮಹಿಳೆಯನ್ನು ಸ್ಥಳೀಯರಾದ ಸೂರಜ್, ಕಿರಣ್ ಹಾಗೂ ಚಂದ್ರಶೇಖರ್ ಐತಾಳ್ ರಕ್ಷಿಸಿದ್ದಾರೆ. #KaveriRiver #AttemptSuicide #Madikeri #Kodagu

    Posted by Vijayavani on Tuesday, July 21, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts