More

    ‘ನಿನ್ ಹೆಂಡ್ತಿ, ಮಗಂಗೆ ಸೋಂಕು ಬಂತು, ನೀನ್ಯಾಕೆ ಇನ್ನೂ ಇಲ್ಲಿದ್ದೀಯಾ..’- ಚುಚ್ಚುಮಾತಿಗೆ ಹೋಯಿತೊಂದು ಪ್ರಾಣ!

    ಬೆಂಗಳೂರು: ಕರೊನಾ ಸೋಂಕು ತಗುಲಿ ಆಸ್ಪತ್ರೆ ಸೇರಿರುವ ಹೆಂಡತಿ ಮತ್ತು ಮಗ ಬೇಗ ಗುಣವಾದರೆ ಸಾಕಪ್ಪ ಎಂದು ಜಪಿಸುತ್ತಿದ್ದ ಗಂಡ, ಅವರಿಬ್ಬರ ಬರುವಿಕೆಗಾಗಿ ಮನೆಯಲ್ಲೇ ಕಾಯುತ್ತಿದ್ದ. ನೊಂದ ಜೀವಕ್ಕೆ ಆತ್ಮಸ್ಥೈರ್ಯ ತುಂಬಬೇಕಿದ್ದ ಅಕ್ಕಪಕ್ಕದ ನಿವಾಸಿಗಳು ವಿಕೃತಿ ಮೆರೆದು ಆ ಜೀವವನ್ನೇ ಬಲಿ ಪಡೆದ ಅಮಾನವೀಯ ಘಟನೆ ಬೆಂಗಳೂರಿನ ಹೆಸರುಘಟ್ಟದಲ್ಲಿ ಸಂಭವಿಸಿದೆ.

    ಕರೊನಾ ಸಂಕಷ್ಟ ಕಾಲ ಹೇಗಿದೆ ಅಂದ್ರೆ ಬಂಧುಗಳನ್ನೂ ಅಪರಿಚಿತರನ್ನಾಗಿಸುತ್ತಿದೆ. ಕುಟುಂಬಸ್ಥರನ್ನೂ ದೂರ ಮಾಡುತ್ತಿದೆ. ‘ನಾವು ರೋಗದ ವಿರುದ್ಧ ಹೋರಾಡಬೇಕೇ ಹೊರತು, ರೋಗಿಯ ವಿರುದ್ಧ ಅಲ್ಲ’ ಎಂದು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನ ಮಾತ್ರ ಮನುಷ್ಯತ್ವ ಮರೆತು ಸ್ವಾರ್ಥಿಯಾಗುತ್ತಿದ್ದಾರೆ ಎಂಬುದಕ್ಕೇ ನಿನ್ನೆ ರಾತ್ರಿ(ಸೋಮವಾರ) ಬೆಂಗಳೂರಿನ ಹೆಸರುಘಟ್ಟ ಕೆರೆಯಲ್ಲಿ ವ್ಯಕ್ತಿಯೊಬ್ಬ ಮರಕ್ಕೆ ನೇಣು ಹಾಕಿಕೊಂಡ ದುರಂತವೇ ಸಾಕ್ಷಿ. ಅಂದಹಾಗೆ ಇದಕ್ಕೆ ಕಾರಣ ನೆರೆಯವರ ಕಿರುಕುಳ.

    ಇದನ್ನೂ ಓದಿರಿ ವಿವಾಹಿತ ಮಹಿಳೆ ಜತೆ ಪರಾರಿಯಾಗಿದ್ದ ಯುವಕ ಪೊಲೀಸ್ ಠಾಣೆಯಲ್ಲೇ ಸ್ಯಾನಿಟೈಸರ್ ಕುಡಿದ..!

    ಏನಿದು ಘಟನೆ?: ದೊಡ್ಡಬಳ್ಳಾಪುರದ ಕಾಸುನಗರದ ನಾಗರಾಜು ಅವರ ಪುತ್ರ ಬೆಂಗಳೂರಿನಲ್ಲಿ ವಾಸವಿದ್ದ. ಇತ್ತೀಚೆಗೆ ಮಗನ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತ್ತು. ಆತನನ್ನು ನೋಡಿಕೊಳ್ಳಲೆಂದು ನಾಗರಾಜು ಪತ್ನಿ ಬೆಂಗಳೂರಿಗೆ ಬಂದಿದ್ದರು. ಆಸ್ಪತ್ರೆಯಲ್ಲಿ ಕರೊನಾ ಪರೀಕ್ಷೆ ಮಾಡಿಸಿದ್ದು, ಮಗನಿಗೆ ಪಾಸಿಟಿವ್​ ಬಂದಿತ್ತು. ಆ ನಂತರ ತಾಯಿಗೂ ಸೋಂಕು ದೃಢಪಟ್ಟಿದ್ದರಿಂದ ಆಕೆಯನ್ನು ದೊಡ್ಡಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗರಾಜು ಮತ್ತು ಮತ್ತೊಬ್ಬ ಪುತ್ರನನ್ನು ಕ್ವಾರಂಟೈನ್​ ಮಾಡಲಾಗಿತ್ತು.

    ಪತ್ನಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯನ್ನು ನಾಗರಾಜು ಅವರ ಮನೆಯನ್ನು ಸೀಲ್​ಡೌನ್​ ಮಾಡುವಾಗ ಅಕ್ಕಪಕ್ಕದ ಮನೆಯವರು ಗಲಾಟೆ ಮಾಡಿದ್ದರು. ‘ನಿಮ್ಮಿಂದ ನಮಗೆಲ್ಲಾ ಸಮಸ್ಯೆ ಆಗ್ತಿದೆ’ ಎಂದು ಚುಚ್ಚುಮಾತು ಆಡಿದ್ದರು ಎನ್ನಲಾಗಿದೆ. ನೆರೆಯರ ವರ್ತನೆಯಿಂದ ಬೇಸತ್ತ ನಾಗರಾಜು ನಿನ್ನೆ(ಸೋಮವಾರ) ಬೆಳಗ್ಗೆ ಮನೆಯಿಂದ ಹೊರ ಬಂದವರು ರಾತ್ರಿ ಹೆಸರುಘಟ್ಟದ ಕೆರೆಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸತ್ತಿದ್ದಾರೆ ಎನ್ನಲಾಗಿದೆ. ಮೃತರ ಹೆಂಡತಿ ಮತ್ತು ಮಗ ಆಸ್ಪತ್ರೆಯಲ್ಲೇ ಇದ್ದಾರೆ.

    ಸಪ್ತಗಿರಿ ಆಸ್ಪತ್ರೆಯಲ್ಲಿ ಮೃತದೇಹಕ್ಕೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು. ವರದಿ ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

    ‘ಅಪ್ಪ.. ಯಾವ ಕಾಲೇಜಿಗೆ ಸೇರಿಸುತ್ತಿದ್ದೆ?’ ಎಂದ ಮಗ ಬಾರದ ಲೋಕಕ್ಕೆ ಸೇರಿಯೇಬಿಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts