More

    ಕೇರಳಿಗರಲ್ಲಿ ಆತ್ಮಹತ್ಯೆ ಮನೋಭಾವ ಹೆಚ್ಚಿಸುತ್ತಿರುವ ಕರೊನಾ ವೈರಾಣು

    ತಿರುವನಂತಪುರ: ಕೋವಿಡ್​-19 ಸೋಂಕು ತಗುಲಿದೆ ಎಂದ ಕೂಡಲೇ ಎದೆಗುಂದುವವರೇ ಹೆಚ್ಚು. ಸೂಕ್ತ ಚಿಕಿತ್ಸೆ ಸಿಗದೆ ಬದುಕುಳಿಯುವುದೇ ಕಷ್ಟವೇನೋ ಎಂಬ ಮನೋಭಾವ ಎಲ್ಲರಲ್ಲೂ ಮೂಡುತ್ತಿದೆ. ಆದರೆ, ಆ ರೀತಿ ಯಾವುದೇ ಆತಂಕ ಪಡಬೇಕಾಗಿಲ್ಲ. ಇತರೆ ಸೋಂಕುಗಳಂತೆ ಇದಕ್ಕೂ ಲಭ್ಯ ಇರುವ ಚಿಕಿತ್ಸೆ ಪಡೆದರೂ ಸಂಪೂರ್ಣ ಗುಣಮುಖರಾಗಬಹುದು ಎಂದು ಜಾಗೃತಿ ಮೂಡಿಸುತ್ತಿದ್ದರೂ ಜನರು ಕೇಳದಾಗಿದ್ದಾರೆ.

    ಕೆಲವರು ಸೋಂಕು ತಗುಲಿತು ಎಂದ ಮಾತ್ರಕ್ಕೇ ಸಾಮಾಜಿಕ ನಿಂದನೆಗೆ ಒಳಗಾಗುವ ಭೀತಿಯಲ್ಲಿ ಆತ್ಮಹತ್ಯೆಯಂಥ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ. ಈ ರೀತಿ ಕೆಲವರು ಸತ್ತಿದ್ದಾರೆ ಕೂಡ. ಇನ್ನು ಕೆಲವರು ಆತಂಕದಿಂದಲೇ ಹೃದಯಾಘಾತಕ್ಕೆ ಒಳಗಾಗಿ ಸಾಯುತ್ತಿದ್ದಾರೆ.

    ಆದರೆ, ಕೇರಳದಿಂದ ಬಂದಿರುವ ಸುದ್ದಿ ತುಸು ಆತಂಕವನ್ನುಂಟು ಮಾಡುವಂತಿದೆ. ಈ ಭಾಗದಲ್ಲಿ ಕರೊನಾವೈರಾಣು ಪಿಡುಗು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿವೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವವರ ಅಂಕಿಅಂಶಗಳ ವಿಶ್ಲೇಷಣೆಯಿಂದ ಈ ವಿಷಯ ಖಚಿತಪಟ್ಟಿದೆ. ಮುಂಬರುವ ದಿನಗಳಲ್ಲಿ ಇದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಕಾಡುವ ಸಾಧ್ಯತೆ ಇದೆ ಎಂದು ಮನಗಂಡಿರುವ ಅಲ್ಲಿನ ವೈದ್ಯರು ಇದೀಗ ಆತ್ಮಹತ್ಯೆ ತಡೆಗೆ ಸಮಗ್ರಹವಾದಿ ಬಹುವಲಯಗಳ ತಂತ್ರಗಾರಿಕೆ ರೂಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

    ಒಂದಂತೂ ಸ್ಪಷ್ಟ. ಆತ್ಮಹತ್ಯೆಗಳು ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಲಿವೆ. ಮಾರ್ಚ್​ 25ರಿಂದ 66 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಹೊರತುಪಡಿಸಿ, ಕೋವಿಡ್​-19 ಪಿಡುಗು ಹೆಚ್ಚಾದ ನಂತರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಪ್ರಮಾಣ ತುಂಬಾ ಹೆಚ್ಚಾಗಿದೆ. ಈ ಅಂಕಿಅಂಶಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆದರೆ, ಅವು ಎದೆನಡುಗಿಸುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ನಿಮಗೂ ಬಾಹ್ಯಾಕಾಶ ವಿದ್ಯಮಾನದ ಕುತೂಹಲ ಇದೆಯೇ? ಇಲ್ನೋಡಿ ಬೆರಗು ಮೂಡಿಸುವ ಬಣ್ಣದ ಚಿಟ್ಟೆ !

    ಕೋವಿಡ್​-19 ಪಿಡುಗಿನಿಂದ ಆರೋಗ್ಯ ಮೇಲಾಗುವ ಪರಿಣಾಮದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಆದರೆ, ಸೋಂಕಿನ ಹರಡುವಿಕೆಯಿಂದಾಗಿ ವ್ಯಕ್ತಿಯ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಮೇಲಾಗುವ ಪರಿಣಾಮವನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿಲ್ಲ. ಈ ಅಂಶವನ್ನು ನಿರ್ಲಕ್ಷಿಸಿರುವುದೇ ಆತ್ಮಹತ್ಯೆ ಮನೋಭಾವ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ.

    ಯಾರಿಗಾದರೂ ಸೋಂಕು ತಗುಲಿತು ಎಂದರೆ ಅವರನ್ನು ಸಾಮಾಜಿಕವಾಗಿ ಏಕಾಂಗಿಯನ್ನಾಗಿ ಮಾಡಲಾಗುತ್ತದೆ. ಇದು ಆತ್ಮಹತ್ಯೆ ಪ್ರವೃತ್ತಿ ಹೆಚ್ಚಳಕ್ಕೆ ಕಾರಣವಾಗಿದೆ. ಸ್ವತಃ ಹಾನಿ ಮಾಡಿಕೊಳ್ಳುವಂಥ ಹತಾಶ ಮನೋಭಾವ ಮತ್ತು ಖಿನ್ನತೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಅವುಗಳನ್ನು ನಿರ್ವಹಿಸುವ ಬಗ್ಗೆ ತಂತ್ರಗಾರಿಕೆ ಹೊಂದುವುದು ಅವಶ್ಯವಾಗಿದೆ ಎಂದು ತಿರುವನಂತಪುರದ ಮಾನಸಿಕ ಆರೋಗ್ಯ ಕೇಂದ್ರದ ಡಾ. ಟಿ. ಸಾಗರ್​ ಹೇಳುತ್ತಾರೆ.

    ಯಾರಿಗಾದರೂ ಕರೊನಾವೈರಾಣು ಸೋಂಕು ತಗುಲಿದೆ ಎಂದು ಗೊತ್ತಾಗುತ್ತಲೇ ಆ ವ್ಯಕ್ತಿಯಲ್ಲಿ ನೇತ್ಯಾತ್ಮಕ ಭಾವನೆಗಳು ಮೂಡಲಾರಂಭಿಸುತ್ತವೆ. ಈ ಕಾಯಿಲೆಗೆ ಯಾವುದೇ ರೋಗನಿರೋಧಕ ಚುಚ್ಚುಮದ್ದ ಇಲ್ಲ ಎಂಬುದರಿಂದ ಮೊದಲುಗೊಂಡು ಹಲವು ಕಾರಣಗಳಿಗಾಗಿ ಆ ವ್ಯಕ್ತಿ ನೇತ್ಯಾತ್ಮಕವಾಗಿ ಯೋಚಿಸಲು ಆರಂಭಿಸುತ್ತಾನೆ. ಔಷಧ ಇದ್ದರೆ ಮಾತ್ರವೇ ರೋಗ ಗುಣವಾಗುತ್ತದೆ ಎಂಬುದು ತುಂಬಾ ಜನರ ನಂಬಿಕೆಯಾಗಿರುತ್ತದೆ. ಯಾವುದೇ ಕಾಯಿಲೆಯನ್ನು ಗುಣಪಡಿಸುವ ನಿಟ್ಟಿನಲ್ಲಿ ಔಷಧದ ಜತೆಗೆ ಆ ವ್ಯಕ್ತಿಯ ಮನೋಬಲವೂ ಮುಖ್ಯ ಎಂಬುದನ್ನು ಅವರು ಮರೆಯುತ್ತಿದ್ದಾರೆ. ಇನ್ನು ಕೆಲವರಿಗೆ ಸಾಮಾಜಿಕವಾಗಿ ಪ್ರತ್ಯೇಕಗೊಳ್ಳುವ ಅಥವಾ ಶಂಕಾಸ್ಪದ ನೋಟಗಳು ಇಲ್ಲವೇ ಒರಟಾದ ಮಾತುಗಳು ತುಂಬಾ ನೋವನ್ನುಂಟು ಮಾಡಿ ನೇತ್ಯಾತ್ಮಕ ಆಲೋಚನೆಗಳಿಗೆ ಕಾರಣವಾಗುತ್ತವೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

    ಈ ಎಲ್ಲ ಕಾರಣಗಳಿಗಾಗಿ ಕೋವಿಡ್​-19 ಸಂಬಂಧಿತ ಆತ್ಮಹತ್ಯೆ ಮನೋಭಾವವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸೋಂಕಿಗೆ ಒಳಗಾದವರಿಗೆ ಸೂಕ್ತ ಮಾನಸಿಕ ಮಾರ್ಗದರ್ಶನ ಕೊಡಲು ಬಹುಮುಖೀಯ ತಂತ್ರಗಾರಿಕೆ ಹೊಂದುವುದು ಅವಶ್ಯ ಎಂದು ಪ್ರತಿಪಾದಿಸುತ್ತಾರೆ.

    ಗಂಭೀರ್​ ಮೆಚ್ಚಿದ ವಿರಾಟ್​ ಕೊಹ್ಲಿಯ ಬೆಸ್ಟ್​ ಇನಿಂಗ್ಸ್​ ಯಾವುದು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts