More

    ಟ್ರೋಲ್‌ಗಳು ಮುಖ್ಯವಲ್ಲ; ಡೆಬ್ಯೂ ರಿಲೀಸ್‌ಗೆ ಎದುರು ನೋಡುತ್ತಿರುವ ಸುಹಾನಾ ಮಾತು

    ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಡಿ.7ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಜೋಯಾ ಅಖ್ತರ್ ನಿರ್ದೇಶನದ ‘ದಿ ಆರ್ಚೀಸ್’ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ರೆಡಿಯಾಗಿದ್ದಾರೆ.

    ಅಷ್ಟೇ ಅಲ್ಲ, ಸುಜಯ್ ೋಷ್ ನಿರ್ದೇಶನದ ಚಿತ್ರದಲ್ಲಿ ಶಾರುಖ್ ಖಾನ್ ಜತೆಗೆ ಅಭಿನಯಿಸಲು ಸುಹಾನಾ ರೆಡಿಯಾಗಿದ್ದಾರೆ ಎನ್ನಲಾಗಿದೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಶಾರುಖ್ ಮತ್ತು ಸುಹಾನ ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ‘ಕಿಂಗ್’ ಎಂದು ಶೀರ್ಷಿಕೆ ಇಡಲಾಗಿದೆಯಂತೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಿರುವ, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 44 ಲಕ್ಷ ಹಿಂಬಾಲಕರನ್ನು ಹೊಂದಿರುವ ಸುಹಾನಾ ಟ್ರೋಲ್‌ಗಳನ್ನು ಸ್ವೀಕರಿಸುವ ಬಗ್ಗೆ, ‘ನಿಜ ಹೇಳಬೇಕೆಂದರೆ, ನನಗೆ ಟ್ರೋಲ್‌ಗಳನ್ನು ಹೇಗೆ ಸ್ವೀಕರಿಸುವುದು, ಹೇಗೆ ನಿಭಾಯಿಸಬೇಕು ಎನ್ನುವುದು ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬರುವಂಥ ಕೆಲವು ಪ್ರತಿಕ್ರಿಯೆಗಳು ಒಳ್ಳೆಯದ್ದಾಗಿರುವುದಿಲ್ಲ. ಅವುಗಳಲ್ಲಿ ಸತ್ವವಿರುವುದಿಲ್ಲ. ಅಂಥವುಗಳನ್ನು ನೋಡಿದಾಗ ಒಳ್ಳೆಯತನ ಎಷ್ಟು ಮುಖ್ಯ ಎನ್ನುವುದು ಅರಿವಿಗೆ ಬರುತ್ತದೆ. ಇಂತಹ ಪ್ರತಿಕ್ರಿಯೆ ಮತ್ತು ಟ್ರೋಲ್‌ಗಳಿಗಿಂತ ನಾನು ನನ್ನ ಸುತ್ತಮುತ್ತಲಿನ ಆತ್ಮೀಯರ ಮಾತುಗಳಿಗೆ ಹೆಚ್ಚು ಬೆಲೆ ನೀಡುತ್ತೇನೆ. ಅವರ ಮಾತುಗಳು ಸತ್ಯ ಎಂದನ್ನಿಸುತ್ತದೆ ನನಗೆ’ ಎಂದು ಹೇಳಿಕೊಳ್ಳುತ್ತಾರೆ.

    ಅಂದಹಾಗೆ, ಈ ವಾರ ರಿಲೀಸ್ ಆಗುತ್ತಿರುವ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಜತೆಗೆ ಜಯಾ ಬಚ್ಚನ್ ಮತ್ತು ಅಮಿತಾಭ್ ಮೊಮ್ಮಗ ಅಗಸ್ತ್ಯ ನಂದ ಹಾಗೂ ಶ್ರೀದೇವಿ ಮತ್ತು ಬೋನಿ ಕಪೂರ್ ಮಗಳು ಖುಷಿ ಕಪೂರ್ ಕೂಡ ಅಭಿನಯಿಸಲಿದ್ದಾರೆ. ಜತೆಗೆ ವೇದಾಂಗ್ ರೈನಾ, ಮಿಹಿರ್ ಅಹುಜಾ, ಜಗ್ಹೆಡ್ ಜಾನ್ಸ್ ಹಾಗೂ ಯುವರಾಜ್ ಮೆಂಡಾ ಮುಖ್ಯ ತಾರಾಗಣದಲ್ಲಿದ್ದಾರೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts