More

    ಪಿಎಫ್ಐ, ಎಸ್ ಡಿಪಿಐ ಜತೆ ಕಾಂಗ್ರೆಸ್ ಆಂತರಿಕ ಒಪ್ಪಂದವೇನು?: ಬಿಜೆಪಿ ರಾಷ್ಟ್ರೀಯ ವಕ್ತಾರ

    ಬೆಂಗಳೂರು: ದೇಶ ವಿದ್ರೋಹಿ ಕೃತ್ಯದಲ್ಲಿ ಭಾಗಿಯಾದ ಪಿಎಫ್ಐ, ಸಮಾಜಘಾತುಕರಿಗೆ ಆಸರೆ ನೀಡುತ್ತಿರುವ ಎಸ್.ಡಿ.ಪಿ.ಐ ಜತೆಗೆ ಕಾಂಗ್ರೆಸ್ ಒಳ ಒಪ್ಪಂದವೇನು ? ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಪ್ರಶ್ನಿಸಿದ್ದು, ಕಾಂಗ್ರೆಸ್ ಪಕ್ಷದ ಮೃದು ಧೋರಣೆ, ಪರೋಕ್ಷ ಬೆಂಬಲವು ಈ ಪ್ರಶ್ನೆ ಹುಟ್ಟಿ ಹಾಕಿದೆ ಎಂದೂ ಹೇಳಿದ್ದಾರೆ.

    ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಎನ್ ಐಎ ತನಿಖೆಯಿಂದ ಪಿಎಫ್ ಐ ಕರಾಳ ಮುಖ ಬಯಲಾಗಿದೆ. ಪಿಎಫ್ ಐ ಅನ್ನು, ಕೇಂದ್ರ ಸರ್ಕಾರ ನಿಷೇಧಿಸಿದ ಬಳಿಕ ಆ ಸಂಘಟನೆಯ ಕಾರ್ಯಕರ್ತರು ಎಸ್ ಡಿಪಿಐನ ಆಸರೆ ಪಡೆದಿರುವುದು ಮಾಧ್ಯಮವೊಂದರ ತನಿಖಾ ವರದಿ ಬಯಲುಗೊಳಿಸಿದೆ.

    “ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಿಎಫ್ಐ ಎಸ್.ಡಿ.ಪಿ.ಐ ಮೇಲಿನ ಪ್ರಕರಣಗಳನ್ನು ಹಿಂಪಡೆದದ್ದು!”

    ಈ ನಡುವೆ ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಕರಣದ ಆರೋಪಿಗೆ ಅಮಾಯಕ ಎಂದು ಸರ್ಟಿಫಿಕೇಟ್ ನೀಡಿ, ಡಿಜಿಪಿಯನ್ನೇ ಪ್ರಶ್ನಿಸಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಿಎಫ್ ಐ, ಎಸ್.ಡಿ.ಪಿ.ಐ ಮೇಲಿನ ಕೇಸ್ ಗಳನ್ನು ಹಿಂಪಡೆದು, ನೂರಾರು ಜನರನ್ನು ಬಿಡುಗಡೆ ಮಾಡಿದರು. ಬಡವರು, ಅಮಾಯಕ ಮುಸ್ಲಿಮರನ್ನು ತಪ್ಪು ದಾರಿಗೆ ಎಳೆಯುವ ಈ ಸಂಘಟನೆ ಬೆಳೆಯಲು ಕಾಎಣರಾದರು ಎಂದು ಸುಧಾಂಶು ತ್ರಿವೇದಿ ಆರೋಪಿಸಿದರು.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುತ್ತದೆ ಕರ್ನಾಟಕದ ಚುನಾವಣೆ!

    ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಒಂದು ರಾಜ್ಯಕ್ಕೆ ಸೀಮಿತವಲ್ಲ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಬೀರಲಿದೆ. ಬೆಂಗಳೂರು ಜಾಗತಿಕವಾಗಿ ಪ್ರತಿಷ್ಠಿತ ನಗರವಾಗಿದೆ. ಪ್ರಧಾನಿ ಮೋದಿಯವರು ಬಾಹ್ಯ, ಆಂತರಿಕ ಭದ್ರತೆ ಸದೃಢಹಗೊಳಿಸಿದ್ದರೆ, ಮತ್ತೊಂದೆಡೆ ರಾಜಕೀಯ ಲಾಭಕ್ಕಾಗಿ ಓಲೈಸುವ, ಪರೋಕ್ಷವಾಗಿ ಬೆಂಬಲಿಸುವ ರಾಜಕೀಯ ಪಕ್ಷಗಳಿವೆ. ಇಂತಹವರಿಗೆ ತಕ್ಕ ಪಾಠ ಕಲಿಸುವ ತೀರ್ಪು ಜನತಾ ನ್ಯಾಯಾಲಯದಲ್ಲಿದೆ ಎಂದು ಸುಧಾಂಶು ತ್ರಿವೇದಿ ಹೇಳಿದರು.

    ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕೆ ನಾಲ್ವರು ಪೊಲೀಸರ ವರ್ಗಾವಣೆ ಮಾಡಿ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts