More

    ತಾಲೂಕು ಕಚೇರಿಗೆ ಶಾಸಕರ ದಿಢೀರ್ ಭೇಟಿ

    ಆಲೂರು: ಅಗತ್ಯ ದಾಖಲೆಗಳಿಗಾಗಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜುನಾಥ್ ತಾಲೂಕು ಕಚೇರಿಗೆ ಗುರುವಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


    ಸೂಕ್ತ ಸಮಯದಲ್ಲಿ ದಾಖಲೆ ನೀಡದೆ ಜನರಿಗೆ ಸತಾಯಿಸುತ್ತಿದ್ದೀರಾ? ಜನಪ್ರತಿನಿಧಿಯಾಗಿ ನನಗೆ ನಿತ್ಯವೂ ಸಾರ್ವಜನಿಕರಿಂದ ಕರೆಬರುತ್ತಿದೆ. ಏನು ಮಾಡುತ್ತಿದ್ದೀರಿ? ಒಂದೋ ಕೆಲಸ ಮಾಡಿಸಿ, ಇಲ್ಲದಿದ್ದರೆ ಕೆಲಸ ಮಾಡದವರನ್ನು ತೆಗೆದುಹಾಕಿ ಎಂದು ಹೆಚ್ಚುವರಿ ತಹಸೀಲ್ದಾರ್ ಪೂರ್ಣಿಮಾ ಅವರನ್ನು ತರಾಟೆಗೆತ್ತಿಕೊಂಡರು. ಕಚೇರಿಯಲ್ಲಿ ಇಷ್ಟು ಜನ ಇದ್ದರೂ ತಿಂಗಳುಗಟ್ಟಲೆ ಏಕೆ ಸತಾಯಿಸುತ್ತಿದ್ದೀರಿ? ಕಡತ ಯಾಕೆ ವಿಲೇವಾರಿ ಆಗುತ್ತಿಲ್ಲ? ಕಾರಣ ಕೊಡಿ ಎಂದು ಪ್ರಶ್ನೆ ಮಾಡಿದರು.


    ಪ್ರತಿದಿನ ಸಾರ್ವಜನಿಕರ ಕೆಲಸದಲ್ಲಿ ವಿಳಂಬದ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಯಾವುದೇ ನೆಪ ಹೇಳದೆ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನಿಗದಿತ ಕಾಲಮಿತಿಯಲ್ಲಿ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಶಾಸಕರು ಇದೇ ವೇಳೆ ತಾಕೀತು ಮಾಡಿದರು.
    ಕಚೇರಿಯ ಪ್ರಮುಖ ವಿಭಾಗಗಳಿಗೆ ತೆರಳಿದ ಶಾಸಕರು ರೆಕಾರ್ಡ್ ರೂಮಿನಲ್ಲಿ ಇದ್ದ ರಿಜಿಸ್ಟರ್ ಪುಸ್ತಕ ಪರಿಶೀಲಿಸಿದರು. ರೈತರ ದಾಖಲೆಗಳು ರೆಕಾರ್ಡ್ ರೂಮ್‌ನಲ್ಲಿ ಇರಬೇಕು. ರೈತರಿಗೆ ಸಂಬಂಧಪಟ್ಟ ದಾಖಲೆಗಳು ಇಲ್ಲಿ ಇಲ್ಲದಿದ್ದರೆ ರೆಕಾರ್ಡ್ ರೂಮ್ ಏಕೆ ಬೇಕು? ನೀವು ಇಲ್ಲಿ ಕೂತು ಕಾಲ ಕಳೆಯುತ್ತಿದ್ದೀರಾ ಎಂದು ಗುಡುಗಿದರು.


    ರೈತರ ಅಗತ್ಯ ದಾಖಲೆ ಪ್ರಮಾಣ ಪತ್ರಗಳನ್ನು ಹುಡುಕಿ ಸಕಾಲದಲ್ಲಿ ಕಲ್ಪಿಸುವಂತೆ ಮತ್ತು ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ಶೀಘ್ರ ತಲುಪಿಸುವ ಕೆಲಸವಾಗಬೇಕು. ಸರ್ಕಾರದ ಆಡಳಿತವೈಖರಿಗೆ ಜನರು ಮೆಚ್ಚುಗೆ ಸೂಚಿಸುವಂತಹ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಿದರು.
    ಶಿರಸ್ತೇದಾರ ಅಶೋಕ್, ಸಿಬ್ಬಂದಿ ಮಂಜುನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜ್, ಬೈರಾಪುರ ಗ್ರಾಮ ಪಂಚಾಯಿತಿ ಸದಸ್ಯ ರುದ್ರೇಗೌಡ, ಮುಖಂಡರಾದ ಲೋಕೇಶ್, ಅಜಿತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts