More

    ಲೋಕಾಯುಕ್ತರ ದಿಢೀರ್ ಭೇಟಿ

    ಸಿಂದಗಿ: ತಾಲೂಕು ಆಡಳಿತ ಸೌಧದಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಗೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಕೆಲವು ಕಡತ ಪರಿಶೀಲಿಸಿದರು.

    ಕರ್ನಾಟಕ ಲೋಕಾಯುಕ್ತ ಕಚೇರಿ ಡಿವೈಎಸ್ಪಿ ಅರುಣಕುಮಾರ ನಾಯಕ ಸುದ್ದಿಗಾರರೊಂದಿಗೆ ಮಾತನಾಡಿ, ಕಚೇರಿಯಲ್ಲಿನ ದಾಖಲೆಗಳನ್ನು ನೀಡಲು ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

    ಉಪನೋಂದಣಾಧಿಕಾರಿ ಎಂ.ಆರ್.ಪಾಟೀಲ ಅವರಿಂದ ಸಂಬಂಧಿಸಿದ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಿ, ವರದಿ ಸಲ್ಲಿಸಿ ವರದಿಯನುಸಾರ ಕ್ರಮ ಜರುಗಿಸುವ ಕೆಲಸ ನಡೆಯುತ್ತದೆ ಎಂದರು.

    ಲೋಕಾಯುಕ್ತ ಎಸ್ಪಿ ಅನಿತಾ ಅದ್ದಣ್ಣವರ, ಡಿವೈಎಸ್ಪಿ ಅರುಣ ನಾಯಕ, ಪೊಲೀಸ್ ಇನ್‌ಸ್ಪೆಕ್ಟರ್ ಆನಂದ ಟಕ್ಕನ್ನವರ, ಆನಂದ ಡೋಣಿ, ಸಿಪಿಸಿ ಎಂ.ಎಚ್.ಇಂಚೂರ, ಸಿಎಚ್‌ಸಿ ಎಸ್.ಐ.ಅಮರಖೇಡ, ಎಂ.ಎಸ್.ತೆಗ್ಗೆಳ್ಳಿ, ಗುರು ಹಡಪದ ಡಬ್ಲೂೃಪಿಸಿ ಅನಿತಾ ಮಂಡಿಗೇರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts