More

    SUCCESS STORY | ಸ್ವ-ಅಧ್ಯಯನದಿಂದ ಸಾಧನೆ ಶಿಖರ ಏರಬಹುದು: ಜಿಲ್ಲಾಧಿಕಾರಿ ಎಂ.ಎಲ್​. ವೈಶಾಲಿ,

    ರುದ್ರಯ್ಯ ಎಸ್​.ಎಸ್​
    ಬೆಂಗಳೂರು

    ಮದುವೆಯಾದ ತಕ್ಷಣ ಜೀವನ ಸೆಟ್ಲ್​ ಆಯ್ತೆಂದು ಸುಮ್ಮನೆ ಕುಳಿತುಕೊಳ್ಳುವವರ ನಡುವೆ ಮದುವೆಯಾಗಿ ಮಗುವಾದ ನಂತರವೂ ವ್ಯಾಸಂಗ ಮಟಕುಗೊಳಿಸದೆ ಸತತ ಅಧ್ಯಯನದಿಂದ 2004ರ ಬ್ಯಾಚ್​ನಲ್ಲಿ 5ನೇ ರ್ಯಾಂಕ್​ ಪಡೆದು ಕೆಎಎಸ್​ ಅಧಿಕಾರಿಯಾದ ಎಂ. ಎಲ್​. ವೈಶಾಲಿ ಅತ್ಯುತ್ತಮ ಕಾರ್ಯನಿರ್ವಹಣೆಯೊಂದಿಗೆ 2013ರಲ್ಲಿ ಐಎಎಸ್​ ಬಡ್ತಿ ಪಡೆದು ಸಾಧನೆ ಮಾಡಿದವರು. ಪ್ರಸ್ತುತ ಗದಗ ಜಿಲ್ಲಾಧಿಕಾರಿಯಾಗಿದ್ದು, ಈ ವಾರದ ಸಂಡೇ ಗೆಸ್ಟ್​ ಸಂದರ್ಶನದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪ ಹಳ್ಳಿಯವರಾದ ಎಂ.ಎಲ್​. ವೈಶಾಲಿ, ಕೃಷಿ ಕುಟುಂಬದ ಹಿನ್ನೆಲೆ ಹೊಂದಿದ್ದು, ತಂದೆ ಲಕ್ಷಣಗೌಡ ಅವರು ಕೃಷಿ ಚಟುವಟಿಕೆ ಮಾಡುತ್ತಿದ್ದರು. ತಾಯಿ ಲಕ್ಷ್ಮಿದೇವಿ ಗೃಹಿಣಿ. ಗಂಡ ಪ್ರಕಾಶ್​ ಉಪನ್ಯಾಸಕರಾಗಿದ್ದಾರೆ. ಸ್ವಂತ ಊರಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ತಾಲೂಕು ಕೇಂದ್ರದಲ್ಲಿ ಪಡೆದಿದ್ದು, ದೂರಶಿಕ್ಷಣ (ಕರೆಸ್ಪಾಂಡೆನ್ಸ್​) ಮೂಲಕ ಕಲಾವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಅಷ್ಟಕ್ಕೆ ನಿಲ್ಲದೇ ಇವರು ಸಾಧನೆ ಮಾಡಿದ್ದು ಇಂದು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ

    ಶೈಕ್ಷಣಿಕ ಸಾಧನೆ

    ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ ಬಂದ ವೈಶಾಲಿ ಪದವಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದರು.

    ಶಿಕ್ಷಕಿಯಾಗಿದ್ದುಕೊಂಡೇ ಕೆಪಿಎಸ್​ಸಿ ತಯಾರಿ

    ವ್ಯಾಸಂಗ ಪೂರ್ಣಗೊಂಡ ನಂತರ ಶಿಕ್ಷಕರ ಆಯ್ಕೆ ಪರೀೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ವೈಶಾಲಿ, ಮಗುವಾದ ನಂತರವೂ ಅಧಿಕಾರಿಯಾಗಬೇಕೆಂಬ ಛಲ ಬಿಡಲಿಲ್ಲ. ಗಂಡನ ಸಹಕಾರದಿಂದ ಗೃಹಕಾರ್ಯ ನಿರ್ವಹಿಸುವುದರೊಂದಿಗೆ ಸತತವಾಗಿ ಕೆಪಿಎಸ್​ಸಿ ಪರೀೆಗೆ ತಯಾರಿ ನಡೆಸಿದ ಪರಿಣಾಮ ಮೊದಲ ಪ್ರಯತ್ನದಲ್ಲಿಯೇ 2004ರ ಬ್ಯಾಚ್​ನಲ್ಲಿ 5ನೇ ರ್ಯಾಂಕ್​ ಪಡೆಯುವುದರೊಂದಿಗೆ ಗುರಿ ಈಡೇರಿಸಿಕೊಂಡರು.

    ಕೊಚಿಂಗ್​ ಪಡೆಯದೆ ಸ್ವ-ಅಧ್ಯಯನ

    ಸ್ವತಃ ಶಿಕ್ಷಕಿಯಾಗಿದ್ದ ವೈಶಾಲಿ ಅವರು, ಕೆಪಿಎಸ್​ಸಿಗೆ ಯಾವುದೇ ಕೊಚಿಂಗ್​ ತೆಗೆದುಕೊಂಡಿಲ್ಲ. ಈಗಿರುವಷ್ಟು ಶೈಕ್ಷಣಿಕ ಆನ್​ಲೈನ್​ ಸಾಮಗ್ರಿಗಳು ದೊರೆಯದ ಕಾಲದಲ್ಲಿಯೂ ಕೆಪಿಎಸ್​ಸಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಸಂಗ್ರಹಿಸಿ ಸ್ವ&ಅಧ್ಯಯನ ನಡೆಸಿದ್ದಾರೆ. ಸಾಧಿಸುವ ಛಲದ ಜತೆಗೆ ಸರಿಯಾದ ಮಾರ್ಗದಲ್ಲಿ ಪ್ರಯತ್ನವಿದ್ದರೆ ಎಂತಹ ಕಠಿಣ ಪರೀೆಗಳನ್ನಾದರೂ ಸ್ವಂತ ಅಧ್ಯಯನದಿಂದ ಎದುರಿಸಿ ಜಯಿಸಬಹುದು ಎನ್ನುತ್ತಾರೆ ಎಂ. ಎಲ್​. ವೈಶಾಲಿ.

    ಸ್ಮರಣೀಯ ಕೆಲಸ

    ಇದುವರೆಗಿನ ಸ್ಮರಣೀಯ ಕೆಲಸ ಯಾವುದು? ಎಂಬ ಪ್ರಶ್ನೆಗೆ, ಶಿವಮೊಗ್ಗ ಏರ್​ಪೋರ್ಟ್​ ಕಾಮಗಾರಿಯಲ್ಲಿ ರಸ್ತೆ ಪಕ್ಕದ ಕಟ್ಟಡಗಳನ್ನು ನೆಲಸಮ ಮಾಡುವುದರೊಂದಿಗೆ ಮಹಿಳಾ ಅಧಿಕಾರಿಯಿಂದ ಇದು ಸಾಧ್ಯವಾಗದ ಕೆಲಸವೆಂದು ಮಾತನಾಡಿಕೊಳ್ಳುವವರಿಗೆ ಉತ್ತರಿಸಿದ್ದು, ಜನರ ನಾಡಿಮಿಡಿತ ಅರಿತುಕೊಂಡರೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದು ಉತ್ತರಿಸಿದ ವೈಶಾಲಿ, ಶಿವಮೊಗ್ಗ ತಹಸೀಲ್ದಾರರಾಗಿ ವೃತ್ತಿ ಆರಂಭಿಸಿ ಹಾಸನ, ಮಂಗಳೂರು, ರಾಮನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

    ಅಧಿಕಾರಿಗಳಿಂದ ಸ್ಪೂರ್ತಿ

    ಉನ್ನತ ಹುದ್ದೆಗೆ ಸೇರಲು ಸ್ಪೂರ್ತಿ ಯಾರು? ಎಂಬ ಪ್ರಶ್ನೆಗೆ ಉತ್ತರಿಸಿದ ವೈಶಾಲಿ, ಸರ್ಕಾರಿ ಕಚೇರಿಗಳಿಗೆ ಹೋದಾಗ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ನೋಡಿ ಇದೆರೀತಿ ಅಧಿಕಾರಿಯಾಗಿ ಸಾಮಾಜಿಕ ಸೇವೆ ಮಾಡಬೇಕೆಂದು ಸ್ಪೂರ್ತಿ ಪಡೆದೆ ಎಂದರು.

    ಬಡ್ತಿಯೊಂದಿಗೆ ಗದಗ ಡಿಸಿ

    ವೈಶಾಲಿ ಅವರ ಕಾರ್ಯಕ್ಷಮತೆ ಆಧಾರದ ಮೇಲೆ 2013ನೇ ಬ್ಯಾಚ್​ಗೆ ಅನ್ವಯವಾಗುವಂತೆ ಐಎಎಸ್​ ಹುದ್ದೆಗೆ ಬಡ್ತಿ ಪಡೆದರು. ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿದ್ದ ಅವರು ಶಿವಮೊಗ್ಗದಿಂದ ಗದಗ ಜಿಲ್ಲೆಗೆ ವರ್ಗ ಆಗುವುದರೊಂದಿಗೆ ಮೊದಲ ಬಾರಿಗೆ 2022ರ ಆಗಸ್ಟ್​ 8ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವಿಕರಿಸಿದ್ದಾರೆ.

    ಸ್ಪರ್ಧಾ ವಿದ್ಯಾರ್ಥಿಗಳಿಗೆ ಸಲಹೆ

    ಪ್ರತಿವರ್ಷ ವಿವಿಧ ವಿಶ್ವವಿದ್ಯಾಲದಿಂದ ಲಾಂತರ ವಿದ್ಯಾರ್ಥಿಗಳು ಪದವಿಯೊಂದಿಗೆ ಹೊರಬರುತ್ತಿದ್ದಾರೆ. ಎಲ್ಲರಿಗೂ ಒಂದೊಳ್ಳೆ ಸರ್ಕಾರಿ ಕೆಲಸ ಪಡೆಯಬೇಕೆಂಬ ಹಂಬಲ, ತುಡಿತ ಇದ್ದೆ ಇರುತ್ತದೆ. ಹಾಗಾಗಿ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚಾಗುತ್ತಿದ್ದು, ತಮ್ಮ ಗುರಿಸಾಧನೆಗಾಗಿ ನಿರಂತರ ಓದು, ಆತ್ಮವಿಶ್ವಾಸ ಹೊಂದಿರಬೇಕು ಜತೆಗೆ ಮಾಡಿಯೇ ತಿರುತ್ತೇನೆ ಎಂಬ ಇಚ್ಛಾಶಕ್ತಿ ಎಂದಿಗೂ ಕುಂದಬಾರದು. ಇದಕ್ಕೆ ಪೂರಕವಾದ ಪರಿಸರ ನಾವೇ ನಿರ್ಮಿಸಿಕೊಳ್ಳಬೇಕು ಎಂದು ವೈಶಾಲಿ ಅವರು ಸ್ಪರ್ಧಾತ್ಮಕ ಪರೀೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಸದ್ಯದ ಘಟನೆಗಳ ಅರಿವಿರಲಿ

    ಕೆಪಿಎಸ್​ಸಿ ಮತ್ತು ಯುಪಿಎಸ್​ಸಿ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಪ್ರಚಲಿತ ಟನೆಗಳ ಮೇಲೆ ಅಂದರೆ ರಾಜ್ಯ, ದೇಶ&ವಿದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಭವಿಸುತ್ತಿರುವ ಸನ್ನಿವೇಶಗಳ ಕುರಿತು ಪ್ರಶ್ನೆಗಳನ್ನು ಕೆಳುತ್ತಾರೆ. ಇದಕ್ಕೆ ಪರೀಕ್ಷಾರ್ಥಿಗಳು ವಿಶ್ಲೇಷಣಾತ್ಮಕ ಉತ್ತರ ನೀಡಬೇಕಾಗಿರುತ್ತದೆ. ಆದ್ದರಿಂದ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ನೆನಪಿಟ್ಟುಕೊಳ್ಳಬೇಕೆಂದು ತಿಳಿಸಿದ ವೈಶಾಲಿ ಅವರು, ಸಂದರ್ಶನದಲ್ಲಿ ಅಭ್ಯರ್ಥಿಯ ವರ್ತನೆ ಗಮನಿಸುತ್ತಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts