More

    ಕ್ರಮಬದ್ಧ ಅಧ್ಯಯನದಿಂದ ಯಶಸ್ಸು

    ಕಲಘಟಗಿ: ಮನಸ್ಸಿನ ಏಕಾಗ್ರತೆಗೆ ಅಭ್ಯಾಸ ಬಲ ಅತ್ಯಗತ್ಯ. ಬುದ್ಧಿ ಉಪಯೋಗಿಸಿ ಕ್ರಮಬದ್ಧವಾಗಿ ಅಧ್ಯಯನ ಮಾಡಿದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ ಎಂದು ಜಾನಪದ ಕಲಾವಿದ ಎಂ.ಆರ್. ತೋಟಗಂಟಿ ಹೇಳಿದರು.

    ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ವತಿಯಿಂದ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾಪೂರ್ವ ಸಿದ್ಧತೆ ಹೇಗೆ ? ಕುರಿತು ಬುಧವಾರ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬಾಳಿಗೆ ಮೊದಲನೇ ಮಹಡಿಯಂತೆ. ಮಹಡಿಗೆ ಇರುವ ಮೆಟ್ಟಿಲುಗಳನ್ನು ಹತ್ತುವಾಗ ಎಣಿಕೆ ಮುಖ್ಯವಾಗುವುದಿಲ್ಲ. ಹತ್ತುತ್ತೇನೆ ಎಂಬ ಸದೃಢ ನಂಬಿಕೆ ಇರಬೇಕಾಗುತ್ತದೆ. ಆದ್ದರಿಂದ ನಿರ್ಭಯದಿಂದ ಉತ್ತೀರ್ಣರಾಗಿಯೇ ಹೊರಜಗತ್ತಿಗೆ ಚಿಮ್ಮುತ್ತೇನೆ ಎಂಬ ಸಂಕಲ್ಪದಿಂದ ಅಭ್ಯಾಸ ಮಾಡಬೇಕು. ಅಮದಾಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ ಎಂದರು.

    ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಹೇಶ ಹೊರಕೇರಿ ಮಾತನಾಡಿ, ಜೀವನದಲ್ಲಿ ಯಾವ ಕನಸು ಕಾಣಬೇಕೆಂಬುದನ್ನು ಮೊದಲೇ ನಿರ್ಧರಿಸಬೇಕು. ನೀವು ಕಂಡ ಕನಸು ನಾಡಿಗೆ ಸ್ಪೂರ್ತಿದಾಯಕವಾಗಿರಬೇಕು. ಕಷ್ಟಪಟ್ಟು ಓದದೇ ಇಷ್ಟ ಪಟ್ಟು ಓದಬೇಕು ಎಂದರು.

    ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ, ಎಸ್​ಡಿಎಂಸಿ ಅಧ್ಯಕ್ಷ ನಿಂಗಪ್ಪ ಬೆಳ್ಳಿವಾಲ, ಶೌಕತ್ ಶೇಖ್, ಜಯಶ್ರೀ ಚೂರಿ, ಮಹಾಂತೇಶ ನೇಮತಿ, ನಿಂಗಪ್ಪ ಬಡಿಗೇರ, ಶೇಖಪ್ಪ ಕಮ್ಮಾರ, ಎಂ.ಆರ್. ಸನದಿ, ಬಿ.ಎ. ಸಾವಗಾಂವ, ಎಚ್.ವೈ. ದೇಸಾಯಿ, ಆರ್.ಕೆ. ತಟಗಾರ, ಎಸ್.ಸಿ. ಹೊಸಕೇರಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts