More

    ತಾಳೆ ಬೆಳೆಗಾರರಿಗೆ ಸಹಾಯಧನ

    ಸಿದ್ದಾಪುರ: 2023-24ನೇ ಸಾಲಿನ ಕೇಂದ್ರ ಪುರಸ್ಕೃತ ಖಾದ್ಯ ತೈಲ ಅಭಿಯಾನದಡಿ ತಾಳೆ ಬೆಳೆಯಲು ಆಸಕ್ತಿ ಇರುವ ತಾಲೂಕಿನ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

    ನೀರಾವರಿ ವ್ಯವಸ್ಥೆ ಹೊಂದಿರುವ ಹಾಗೂ ಕನಿಷ್ಠ ಒಂದು ಎಕರೆ ಪ್ರದೇಶಲ್ಲಿ ತಾಳೆ ಬೆಳೆ ಅಭಿವೃದ್ಧಿಗೊಳಿಸಿದ ರೈತರಿಗೆ ಗರಿಷ್ಠ 11600 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಇದರೊಂದಿಗೆ 4 ವರ್ಷ ತಾಳೆಯಲ್ಲಿ ಅಂತರಬೆಳೆ ಕೃಷಿ ಹಾಗೂ ರಸಗೊಬ್ಬರ ಖರೀದಿಗೆ ಪ್ರತ್ಯೇಕವಾಗಿ ಸಹಾಯಧನ ಪ್ರತಿ ವರ್ಷ ಪಡೆಯಬಹುದಾಗಿದೆ. ತಾಳೆ ಬೆಳೆಯಲ್ಲಿ ಹನಿ ನೀರಾವರಿ ಅಳವಡಿಕೆ ಹಾಗೂ ಯಾಂತ್ರೀಕರಣ ಕುರಿತು ಸಹಾಯಧನವನ್ನು ಮಾರ್ಗಸೂಚಿಯಂತೆ ಪಡೆಯಬಹುದಾಗಿದೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts