More

    ಇಂದು ಗಾಂಧಿ ಪ್ರತಿಮೆಗೆ ಮನವಿ ಸಲ್ಲಿಕೆ

    ಮೂಡಿಗೆರೆ: ಜನತಾದರ್ಶನದಲ್ಲಿ ನಾವು ನೀಡಿದ ಮನವಿಗೆ ಈವರೆಗೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಹಾಗೂ ಉತ್ತರ ದೊರಕಿಲ್ಲ. ಜ.9ರಂದು ಚಿಕ್ಕಮಗಳೂರು ಡಿಸಿ ಕಚೇರಿ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಮನವಿ ಸಲ್ಲಿಸಿ, ಆನಂತರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಂಜುನಾಥ ಗೌಡ ಹೇಳಿದರು.

    ಕಳೆದ ವರ್ಷ ಸೆ.9ರಂದು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಮ್ಮುಖದಲ್ಲಿ ಆಯೋಜಿಸಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ಕಂದಾಯ ನ್ಯಾಯಾಲಯದಲ್ಲಿ ಶೀಘ್ರ, ಶಾಸನಬದ್ಧ ಹಾಗೂ ಪರಿಣಾಮಕಾರಿ ನ್ಯಾಯ ಸಿಗುತ್ತಿಲ್ಲ, ಸರ್ಕಾರದ ಸುತ್ತೋಲೆ ಪಾಲನೆ ಮಾಡುತ್ತಿಲ್ಲವೆಂದು ಆಕ್ಷೇಪಿಸಲಾಗಿತ್ತು. ಜನತಾ ದರ್ಶನದಲ್ಲಿ ನೀಡಿದ ಮನವಿಯನ್ನು ತಹಸೀಲ್ದಾರರು ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ. ಆದರೆ ಡಿಸಿ ಅವರು ತಮ್ಮ ಮನವಿಯನ್ನು ಇತ್ಯರ್ಥಗೊಳಿಸಲು ಇಟ್ಟಿರುವುಗಾಗಿ ತಿಳಿಸಿದ್ದರು. ಈವರೆಗೂ ಯಾವ ಉತ್ತರವೂ ಬಂದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಭೂಕಂದಾಯ ನಿಯಮದ ಪ್ರಕಾರ ಕಂದಾಯ ನ್ಯಾಯಾಲಯದಲ್ಲಿ ಇರುವ ಪ್ರಕರಣ 6 ತಿಂಗಳಲ್ಲಿ ಇತ್ಯರ್ಥಪಡಿಸಬೇಕೆಂಬ ನಿಯಮವಿದೆ. ಆದರೆ ಅದು ನಡೆಯುತ್ತಿಲ್ಲ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಮಂತ್ರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಮಾತ್ರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಉಪಯೋಗ ಆಗಬೇಕೆಂದು ಸರ್ಕಾರ ನಡೆಸುತ್ತಿರುವ ಜನತಾದರ್ಶನ ಕಾರ್ಯಕ್ರಮಕ್ಕೆ ಅರ್ಥವಿಲ್ಲದಂತಾಗಿದೆ. ಹಾಗಾಗಿ ಆಡಳಿತ ವ್ಯವಸ್ಥೆ ಗಾಂಧೀಜಿ ಪ್ರತಿಮೆ ಮುಂದೆ ಅಳಲು ಹೇಳಿಕೊಂಡು, ಉತ್ತರ ಸಿಗುವವರೆಗೂ ಉಸ್ತುವಾರಿ ಸಚಿವರ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ ಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts