More

    ಮತ್ತೆ ಬರುತ್ತಿದ್ದಾನೆ ‘ಖಳನಾಯಕ್’ … ಈ ಬಾರಿ ಚಿತ್ರದಲ್ಲೋ? ವೆಬ್ ಸೀರೀಸ್‌ನಲ್ಲೋ?

    ಸುಭಾಶ್ ಘಾಯ್ ನಿರ್ದೇಶನದ ಯಶಸ್ವಿ ಚಿತ್ರಗಳಲ್ಲೊಂದು ‘ಖಳನಾಯಕ್’. ಸಂಜಯ್ ದತ್, ಮಾಧುರಿ ದೀಕ್ಷಿತ್, ಜಾಕಿ ಶ್ರಾಫ್​ ಮುಂತಾದವರು ಅಭಿನಯಿಸಿದ್ದ ಈ ಚಿತ್ರ 90ರ ದಶಕದಲ್ಲಿ ಬಿಡುಗಡೆಯಾಗಿತ್ತು ಮತ್ತು ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಸೀಕ್ವೆಲ್‌ನ ಕೆಲಸ ಶುರು ಮಾಡಿದ್ದಾಗಿ ನಿರ್ದೇಶಕ ಸುಭಾಶ್ ಘಾಯ್ ಈ ಹಿಂದೆಯೇ ಹೇಳಿಕೊಂಡಿದ್ದರು. ಎರಡು ವರ್ಷಗಳ ಸತತ ಪರಿಶ್ರಮದ ನಂತರ, ಸುಭಾಷ್ ಘಾಯ್ ಕೊನೆಗೂ ‘ಖಳನಾಯಕ್ 2’ ಚಿತ್ರಕಥೆ ಮುಗಿಸಿದ್ದಾರೆ.

    ವಿಷಯ ಅದಲ್ಲ, ಸ್ಕ್ರಿಪ್ಟ್ ಕೆಲಸವನ್ನೇನೋ ಘಾಯ್ ಸಾಹೇಬರು ಮಾಡಿ ಮುಗಿಸಿದ್ದಾರೆ. ಆದರೆ, ಅದನ್ನು ಹೇಗೆ ಮತ್ತು ಎಲ್ಲಿ ಬಿಡುಗಡೆ ಮಾಡಬೇಕು ಎಂಬ ಬಗ್ಗೆ ಅವರು ಇನ್ನೂ ತೀರ್ಮಾನ ಮಾಡಿಲ್ಲ. ಎರಡು ವರ್ಷಗಳ ಹಿಂದೆ, ಅವರು ಸ್ಕ್ರಿಪ್ಟ್ ಕೆಲಸ ಕೈಗೆತ್ತಿಕೊಂಡಾಗ, ಅವರು ಚಿತ್ರ ಮಾಡಬೇಕು ಅಂತಲೇ ತೀರ್ಮಾನಿಸಿದ್ದರು. ಆದರೆ, ಇದೀಗ ಕಾಲ ಸಾಕಷ್ಟು ಬದಲಾಗಿದೆ. ಈಗೇನಿದ್ದರೂ ಓಟಿಟಿಗಳ ಕಾಲ. ಹಾಗಾಗಿ, ಒಂದು ವೆಬ್‌ಸೀರೀಸ್ ಮಾಡಿ ಏಕೆ ಯಾವುದಾದರೂ ಓಟಿಟಿಯಲ್ಲಿ ಬಿಡುಗಡೆ ಮಾಡಬಾರದು ಎಂದು ಕೆಲವರು ಸಲಹೆ ನೀಡಿದ್ದಾರಂತೆ. ಹಾಗಾಗಿ ಅದನ್ನು ಚಿತ್ರ ಮಾಡಬೇಕೋ ಅಥವಾ ವೆಬ್ ಸೀರೀಸ್ ಮಾಡಬೇಕೋ ಎಂಬ ಗೊಂದಲದಲ್ಲಿದ್ದಾರೆ ಘಾಯ್ ಸಾಹೇಬರು.

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ‘‘ಖಳನಾಯಕ್ 2’ ಚಿತ್ರದ ಸ್ಕ್ರಿಪ್ಟ್ ರೆಡಿ ಇದೆ. ಈ ಚಿತ್ರಕಥೆ ಬರೆಯೋದಕ್ಕೆ ಸ್ಫೂರ್ತಿ ಸಂಜಯ್ ದತ್. ಅವರೇ ಒತ್ತಾಯ ಮಾಡಿ ಈ ಕಥೆ ಬರೆಸಿದ್ದಾರೆ. ಲಾಕ್‌ಡೌನ್ ನಂತರ ಚಿತ್ರ ಶುರು ಮಾಡುವ ಯೋಚನೆ ಇದೆ. ಕೆಲವರು ಯಾಕೆ ವೆಬ್ ಸೀರೀಸ್ ಮಾಡಬಾರದು ಎಂಬ ಸಲಹೆ ನೀಡಿರುವುದರಿಂದ, ಇದನ್ನೇ ಕೊಂಚ ಬೆಳೆಸಿ, ಆರು ಗಂಟೆ ಅವಧಿಯ ಡಿಜಿಟಲ್ ಸೀರೀಸ್ ಮಾಡುವ ಸಾಧ್ಯತೆಯೂ ಇದೆ’ ಎನ್ನುತ್ತಾರೆ ಸುಭಾಶ್ ಘಾಯ್.

    ಇದಲ್ಲದೆ, ತಮ್ಮ ನಿರ್ದೇಶನದ ಮೊದಲ ಚಿತ್ರ ‘ಕಾಳೀಚರಣ್’ನ ರೀಮೇಕ್ ಮಾಡುವ ಯೋಚನೆಯೂ ಇದೆಯಂತೆ. ‘ಖಳನಾಯಕ್ 2’ ಮೊದಲು ಬರುತ್ತದೋ ಅಥವಾ ‘ಕಾಳೀಚರಣ್’ ಬರುತ್ತದೋ ಎಂಬುದನ್ನು ಕಾದು ನೋಡಬೇಕಿದೆ.

    ಮಕ್ಕಳೊಂದಿಗೆ ನಿಂತು ಸಿಗರೇಟ್​ ಹಚ್ಚಿದ್ರಾ ಹೃತಿಕ್​​?; ಅಭಿಮಾನಿ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ ಹ್ಯಾಂಡ್ಸಮ್​ ಹೀರೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts