More

  ಪಾಕ್​ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳು ಮತ್ತೆ ಅರೆಸ್ಟ್: ಪೊಲೀಸ್​ ಜೀಪಿನ ಮೇಲೆ ಚಪ್ಪಲಿ, ಬೂಟು ಎಸೆದ ಹಿಂದೂಪರ ಕಾರ್ಯಕರ್ತರು

  ಹುಬ್ಬಳ್ಳಿ: ಹುಬ್ಬಳ್ಳಿಯ ಖಾಸಗಿ ಇಂಜಿನಿಯರಿಂಗ್​ ಕಾಲೇಜೊಂದರಲ್ಲಿ ಪಾಕ್​ ಪರ ಘೋಷಣೆ ಕೂಗಿದ್ದ ಮೂವರು ದೇಶ ದ್ರೋಹಿ ವಿದ್ಯಾರ್ಥಿಗಳನ್ನು ಪೊಲೀಸರು ಮತ್ತೊಮ್ಮೆ ಅರೆಸ್ಟ್​ ಮಾಡಿದ್ದು ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

  ಕಾಶ್ಮೀರ ಮೂಲದವರಾದ ಅಮಿರ್​, ಬಾಸಿಬ್​ ಮತ್ತು ತಾಲಿಬ್​ ತಮ್ಮ ಹಾಸ್ಟೆಲ್​ ರೂಮಿನಲ್ಲಿ ಕುಳಿತುಕೊಂಡು ಪಾಕಿಸ್ತಾನ ಪರವಾಗಿ ಘೋಷಣೆ ಕೂಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ದೇಶದೊಳಗಿದ್ದು ದೇಶದ್ರೋಹಿ ಚಿಂತನೆ ನಡೆಸುತ್ತಿದ್ದ ಅವರನ್ನು ಮೊನ್ನೆ ಪೊಲೀಸರು ಬಂಧಿಸಿದ್ದರು. ಆದರೆ ನಿನ್ನೆ(ಫೆ.16) ಸಿಆರ್​ಪಿಸಿ ಬಾಂಡ್​ ಮೇಲೆ ಅವರನ್ನು ಬಿಡುಗಡೆ ಮಾಡಿದ್ದಾಗಿ ಪೊಲೀಸ್​ ಕಮಿಷನರ್​ ತಿಳಿಸಿದ್ದರು.

  ದೇಶದ್ರೋಹಿಗಳನ್ನು ಬಿಡುಗಡೆ ಮಾಡಿದ್ದರ ಕುರಿತಾಗಿ ರಾಜ್ಯದ ಜನರು ಭಾರೀ ಪ್ರಮಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆ ಅವರನ್ನು ಮತ್ತೆ ಬಂಧಿಸಲಾಗಿದ್ದು ಇಂದು ಗೋಕುಲ್​ ರೋಡ್​ನ ಪೊಲೀಸರು ಆರೋಪಿಗಳನ್ನು ಮ್ಯಾಜಿಸ್ಟ್ರೇಟ್​ ಎದುರು ಹಾಜರುಪಡಿಸಿದ್ದರು.

  ಆರೋಪಿಗಳು ಕೋರ್ಟ್​ನಿಂದ ಹೊರಬರುತ್ತಿದ್ದಂತೆಯೇ ಹಿಂದೂಪರ ಕಾರ್ಯಕರ್ತರ ಆರೋಪಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ವಕೀಲರು ಸಹ ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಪರ ಕಾರ್ಯಕರ್ತರು ಆರೋಪಿಗಳಿದ್ದ ಪೊಲೀಸ್​ ವಾಹನಕ್ಕೆ ಚಪ್ಪಲಿ, ಬೂಟು ಎಸೆದು ಹಲ್ಲೆಗೆ ಯತ್ನಿಸಿದ್ದಾರೆ.

  ದೇಶ ದ್ರೋಹ ಪ್ರಕರಣದಡಿ ಬಂಧಿತರಾಗಿರುವ ಮೂವರನ್ನು ಮಾರ್ಚ್​ 2ರವರೆಗೆ ನ್ಯಾಯಾಂಗ ಬಂಧನದಲ್ಲಿಡುವುದಾಗಿ ತಿಳಿಸಲಾಗಿದೆ, ನ್ಯಾಯಾಧೀಶೆ ಶ್ರೀಮತಿ ಪುಷ್ಪಾವತಿ ಜೋಗೊಜಿ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶ ಹೊರಡಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts