More

    Web Exclusive | ಸೈಕಲ್-ಸ್ಕಾಲರ್​ಶಿಪ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು; ಸರ್ಕಾರಿ ಸೌಲಭ್ಯಗಳು ತಲುಪದೆ ಸಂಕಷ್ಟ

    ಅಶೋಕ ನೀಮಕರ್ ಬಳ್ಳಾರಿ

    ಕೋವಿಡ್ ಕಾರಣಕ್ಕೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಏರುಪೇರಾಗಿದ್ದರೂ ಸರ್ಕಾರ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರ ತಲುಪಿಸಿದೆ. ಆದರೆ, ಸ್ಕಾಲರ್​ಶಿಪ್ ಹಾಗೂ ಸೈಕಲ್​ಗಳು ಇನ್ನೂ ವಿದ್ಯಾರ್ಥಿಗಳಿಗೆ ತಲುಪಿಲ್ಲ. ಶಾಲೆಗಳು ಆರಂಭ ಆಗಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಸೈಕಲ್ ಮತ್ತು ಸ್ಕಾಲರ್​ಶಿಪ್ ನಿರೀಕ್ಷೆಯಲ್ಲಿದ್ದಾರೆ.

    ಕಳೆದ ಶೈಕ್ಷಣಿಕ ಸಾಲಿನ ಮಾಹಿತಿಯಂತೆ ರಾಜ್ಯದಲ್ಲಿ 1.04 ಕೋಟಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಪ್ರಸಕ್ತ ವರ್ಷ 10.49 ಲಕ್ಷ ವಿದ್ಯಾರ್ಥಿಗಳು ಎಂಟನೇ ತರಗತಿಗೆ ಪ್ರವೇಶ ಪಡೆದಿದ್ದಾರೆ. ಇವರಿಗೆ ಸೈಕಲ್ ವಿತರಿಸಬೇಕಿದೆ. ಜತೆಗೆ ಸಮವಸ್ತ್ರದ ಹೊಲಿಗೆ ಹಾಗೂ ಇತರ ಶೈಕ್ಷಣಿಕ ವೆಚ್ಚಕ್ಕಾಗಿ ಪಾಲಕರು ಸ್ಕಾಲರ್​ಶಿಪ್​ಗಾಗಿ ಕಾಯುತ್ತಿದ್ದಾರೆ.

    ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 750 ರೂ. ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ 900 ರೂ. ಹಾಗೂ ಒಂಬತ್ತನೇ ತರಗತಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂ. ಸ್ಕಾಲರ್​ಶಿಪ್ ನೀಡಲಾಗುತ್ತಿದೆ.

    ಇದನ್ನೂ ಓದಿ: ಶಾಸಕಿ ಮೇಲೆ ಬಿತ್ತು ಪೊಲೀಸ್ ಕೇಸ್; ಹಲ್ಲೆ ಮಾಡಿದ್ದಕ್ಕೆ ಎಫ್​ಐಆರ್​ 

    ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಒಂದರಿಂದ ಐದನೇ ತರಗತಿವರೆಗೆ ಬಾಲಕರಿಗೆ 750 ರೂ. ಹಾಗೂ ಬಾಲಕಿಯರಿಗೆ 850 ರೂ. ಆರು ಹಾಗೂ ಏಳನೇ ತರಗತಿಗೆ ಬಾಲಕರಿಗೆ 900 ರೂ. ಹಾಗೂ ಬಾಲಕಿಯರಿಗೆ ಒಂದು ಸಾವಿರ ರೂ. ಎಂಟನೇ ತರಗತಿಗೆ ಬಾಲಕರಿಗೆ ಒಂದು ಸಾವಿರ ರೂ. ಬಾಲಕಿಯರಿಗೆ 1100 ರೂ. ಒಂಬತ್ತನೇ ತರಗತಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ 750 ರೂ. ಜತೆಗೆ 10 ತಿಂಗಳವರೆಗೆ ಮಾಸಿಕ 150 ರೂ. ನೀಡಲಾಗುತ್ತಿದೆ.

    ಸ್ಕಾಲರ್​ಶಿಪ್ ಪಡೆಯಲು ವಿದ್ಯಾರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಹೊಂದಿರಬೇಕು. ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಪ್ರಸಕ್ತ ಶೈಕ್ಷಣಿಕ ಸಾಲಿಗೆ ಇನ್ನೂ ಅರ್ಜಿ ಆಹ್ವಾನಿಸಿಲ್ಲ. ಕೋವಿಡ್ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಡ ಪಾಲಕರು ಖಾಸಗಿ ಶಾಲೆಗಳಲ್ಲಿ ಓದುವ ತಮ್ಮ ಮಕ್ಕಳ ಶುಲ್ಕ ಪಾವತಿಗೆ ಪರಾಡುವಂತಾಗಿದೆ. ಇದರಿಂದಾಗಿ ಸರ್ಕಾರ ತ್ವರಿತವಾಗಿ ಸ್ಕಾಲರ್​ಶಿಪ್ ನೀಡಿದರೆ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು! 

    ತಾಂತ್ರಿಕ ಸಮಸ್ಯೆಗಳೂ ಇವೆ: ಸ್ಕಾಲರ್​ಶಿಪ್​ಗಾಗಿ ಪಾಲಕರು ಶಾಲೆಗಳಿಗೆ ಅಲೆಯುತ್ತಿದ್ದಾರೆ. ಶಾಲೆಗಳು ವಿಳಂಬವಾಗಿ ಆರಂಭವಾಗಿರುವುದರಿಂದ ಇನ್ನೂ ಬಂದಿಲ್ಲ ಎಂದು ಹೇಳಿ ಕಳುಹಿಸಲಾಗುತ್ತಿದೆ. ಸ್ಕಾಲರ್​ಶಿಪ್ ಪಡೆಯುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತಾಂತ್ರಿಕ ಸಮಸ್ಯೆಗಳನ್ನು ಕೂಡ ಎದುರಿಸುತ್ತಿದ್ದಾರೆ. ಆಧಾರ್ ಕಾರ್ಡ್​ನಲ್ಲಿರುವ ದೋಷಗಳಿಂದ ಅನೇಕ ವಿದ್ಯಾರ್ಥಿಗಳು ಸ್ಕಾಲರ್​ಶಿಪ್​ನಿಂದ ವಂಚಿತರಾಗುತ್ತಿದ್ದಾರೆ.

    ಸ್ಕಾಲರ್​ಶಿಪ್​ಗೆ ಆನ್​ಲೈನ್ ವ್ಯವಸ್ಥೆ ಇರುವುದರಿಂದ ನಮ್ಮ ಬಳಿ ಈ ಕುರಿತು ಮಾಹಿತಿ ಇರುವುದಿಲ್ಲ. ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಸೇರಿದಂತೆ ಸಂಬಂಧಿಸಿದ ಇಲಾಖೆಗಳೇ ಸ್ಕಾಲರ್​ಶಿಪ್ ವಿಚಾರವನ್ನು ನಿರ್ವಹಣೆ ಮಾಡುತ್ತವೆ. ಸ್ಕಾಲರ್​ಶಿಪ್ ಸಿಗದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ನಮಗೆ ದೂರುಗಳು ಬಂದಿಲ್ಲ.

    | ಸಿ.ರಾಮಪ್ಪ ಡಿಡಿಪಿಐ ಬಳ್ಳಾರಿ

    ಬ್ಯಾಂಕ್​ ಲಾಕರ್​ನಲ್ಲೂ ಹಣ ಸೇಫ್​ ಅಲ್ಲ!; ಇಲ್ಲಿಟ್ಟ ಹಣ ಏನಾಯ್ತು ನೋಡಿ…

    ಆನೆಗೇ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಕೊನೆಯುಸಿರೆಳೆದ ಆನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts