More

    ಪಿಯುಸಿಯಲ್ಲಿ ಬಯಲಾಜಿ ಇಲ್ಲದಿದ್ದರೂ ನೀಟ್​ ಬರೆಯಬಹುದು!

    ಫಿಸಿಕ್ಸ್ (ಭೌತಶಾಸ್ತ್ರ), ಕೆಮಿಸ್ಟ್ರಿ (ರಸಾಯನಶಾಸ್ತ್ರ) ಮತ್ತು ಮ್ಯಾತ್ಸ್​ (ಗಣಿತ) ಪ್ರಮುಖ ವಿಷಯಗಳಾಗಿ ತೆಗೆದುಕೊಂಡು 10+2 ಪರೀಕ್ಷೆಗಳಲ್ಲಿ (ಪಿಯಸಿ) ತೇರ್ಗಡೆಯಾದವರು ಕೂಡ ಇನ್ನು ಮುಂದೆ ವೈದ್ಯರಾಗಲು ಅವಕಾಶ ದೊರೆತಿದೆ.

    ಡಾಕ್ಟರ್​ ಆಕಾಂಕ್ಷಿಗಳು ಈ ಮೊದಲು ನೀಟ್​ – ಯುಜಿ (NEET- UG) ಪರೀಕ್ಷೆ ಬರೆಯಬೇಕಾದರೆ, ಪಿಯುಸಿ ಅಥವಾ 10+2 ತರಗತಿಯಲ್ಲಿ ಬಯಾಲಜಿ (ಜೀವಶಾಸ್ತ್ರ) ವಿಷಯ ಅಧ್ಯಯನ ಮಾಡುವುದು ಕಡ್ಡಾಯವಾಗಿತ್ತು. ಆದರೆ, ಇನ್ನು ಮುಂದೆ ಬಯಾಲಜಿ ಕಡ್ಡಾಯವಲ್ಲ. ಪಿಯುಸಿಯಲ್ಲಿ ಬಯಾಲಜಿ ವಿಷಯ ತೆಗೆದುಕೊಳ್ಳದವರಿಗೆ ಕೂಡ ಎಂಬಿಬಿಎಸ್ ಪ್ರವೇಶ ಪರೀಕ್ಷೆ ನೀಟ್​-ಯುಜಿ (NEET- UG) ಬರೆಯಲು ಈಗ ಅವಕಾಶ ದೊರೆತಿದೆ.

    ರಾಷ್ಟ್ರೀಯ ವೈದ್ಯಕೀಯ ಆಯೋಗದ (ನ್ಯಾಷನಲ್​ ಮೆಡಿಕಲ್​ ಕೌನ್ಸಿಲ್ NMC) ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, ಬಯಾಲಜಿ ತೆಗೆದುಕೊಳ್ಳದ ವಿದ್ಯಾರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10+2 ಮಟ್ಟದಲ್ಲಿ ಹೆಚ್ಚುವರಿ ವಿಷಯವಾಗಿ ಜೀವಶಾಸ್ತ್ರ ಅಥವಾ ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಜಿ) ಪರೀಕ್ಷೆಯನ್ನು ಪಾಸ್ ಮಾಡಬೇಕು.

    ವೈದ್ಯಕೀಯ ಶಿಕ್ಷಣದ ಅರ್ಹತಾ ಮಾನದಂಡಗಳಲ್ಲಿನ ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳು ಮತ್ತು ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳನ್ನು ಪರಿಹರಿಸಲು ಈ ಸಾರ್ವಜನಿಕ ಸೂಚನೆಯನ್ನು ಎನ್​ಎಂಸಿ ನೀಡಿದೆ.

    ಈ ಹಿಂದೆ, 1997 ರ ಪದವಿ ವೈದ್ಯಕೀಯ ಶಿಕ್ಷಣದ ನಿಯಮಗಳ ಅಡಿಯಲ್ಲಿ, ಎಂಬಿಬಿಎಸ್ ಆಕಾಂಕ್ಷಿ ಅಭ್ಯರ್ಥಿಗಳು 11 ನೇ ಮತ್ತು 12 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ / ಜೈವಿಕ ತಂತ್ರಜ್ಞಾನದಲ್ಲಿ ಎರಡು ವರ್ಷಗಳ ನಿರಂತರ ಅಧ್ಯಯನ ನಡೆಸುವುದು ಕಡ್ಡಾಯವಾಗಿತ್ತು. ರಾಷ್ಟ್ರೀಯ ವೈದ್ಯಕೀಯ ಆಯೋಗವು ಜೂನ್ 2, 2023 ರಿಂದ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ರೆಗ್ಯುಲೇಷನ್ಸ್, 2023 ಪರಿಚಯಿಸಿತು. ಇದರ ನಿಯಮ 11(b) ಪ್ರಕಾರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ/ಜೈವಿಕ ತಂತ್ರಜ್ಞಾನ ಮತ್ತು ಇಂಗ್ಲಿಷ್‌ನೊಂದಿಗೆ 10+2 ಉತ್ತೀರ್ಣರಾದ ಅಭ್ಯರ್ಥಿಗಳು ವೈದ್ಯರಾಗಲು ಅರ್ಹರಾಗಿದ್ದರು.

    ಜೂನ್ 14, 2023ರಂದು ನಡೆದ ಸಭೆಯಲ್ಲಿ, ಎನ್​ಸಿಎಂ ಈ ಹಿಂದಿನ ವಿಧಾನವನ್ನು ಮರುಪರಿಶೀಲಿಸಲು ನಿರ್ಧರಿಸಿತು. ಈಗ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳಿಂದ 12 ನೇ ತರಗತಿಯ ನಂತರ ಹೆಚ್ಚುವರಿ ವಿಷಯಗಳಾಗಿ ಅಗತ್ಯವಿರುವ ವಿಷಯಗಳನ್ನು ಅಧ್ಯಯನ ಮಾಡಬಹುದು. ಈ ಮೂಲಕ ನೀಟ್​ ಯುಜಿ (NEET-UG) ಪರೀಕ್ಷೆ ಬರೆಯಲು ಮತ್ತು ಅರ್ಹತಾ ಪ್ರಮಾಣಪತ್ರಕ್ಕೆ ಅರ್ಹರಾಗಿರುತ್ತಾರೆ ಎಂದು ಹೇಳಿದೆ. ಅರ್ಹತಾ ಪ್ರಮಾಣಪತ್ರದ ಅರ್ಜಿಗಳನ್ನು ಈ ಹಿಂದೆ ತಿರಸ್ಕರಿಸಿದ ಅಭ್ಯರ್ಥಿಗಳಿಗೆ ಕೂಡ ಈ ನಿರ್ಧಾರವು ಪೂರ್ವಭಾವಿಯಾಗಿ ಅನ್ವಯಿಸುತ್ತದೆ.

    ಡೀಪ್‌ಫೇಕ್ ಕಡಿವಾಣಕ್ಕೆ ಶೀಘ್ರವೇ ನಿಯಮಾವಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts