More

    ಡೀಪ್‌ಫೇಕ್ ಕಡಿವಾಣಕ್ಕೆ ಶೀಘ್ರವೇ ನಿಯಮಾವಳಿ

    ನವದೆಹಲಿ: ಸಾಕಷ್ಟು ವಿವಾದ ಹಾಗೂ ಸಮಸ್ಯೆಯನ್ನು ಸೃಷ್ಟಿಸಿರುವ ಡೀಪ್‌ಫೇಕ್‌ಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳಲು ಮುಂದಾಗಿದೆ ಇದಕ್ಕಾಗಿ ಶೀಘ್ರದಲ್ಲೇ ಹೊಸ ನಿಯಮಾವಳಿಗಳನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಸಂವಹನ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ.

    ತಂತ್ರಜ್ಞಾನದ ದುರುಪಯೋಗ ತಡೆಯಲು ಮತ್ತು ಡೀಪ್‌ಫೇಕ್‌ಗಳಿಗೆ ಕಡಿವಾಣ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ದೃಢ ಸಂಕಲ್ಪ ಮಾಡಿದೆ. ಈ ಹಿನ್ನೆಲೆಯಲ್ಲಿ ಡೀಪ್‌ಫೇಕ್‌ ಕುರಿತು ಅವರು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ (ಸಾಮಾಜಿಕ ಮಾಧ್ಯಮ ವೇದಿಕೆ) ಕಂಪನಿಗಳು ಮತ್ತು ಮಧ್ಯಸ್ಥಗಾರರೊಂದಿಗೆ ಸಭೆ ನಡೆಸಿದೆ. ಸಚಿವ ಅಶ್ವಿನಿ ವೈಷ್ಣವ್​ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.

    ಹೆಚ್ಚುತ್ತಿರುವ ಡೀಪ್‌ಫೇಕ್‌ ಘಟನೆಗಳ ಕುರಿತು ಮಾತನಾಡಿದ ಸಚಿವ ವೈಷ್ಣವ್, ಡೀಪ್‌ಫೇಕ್‌ಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಸ್ಪಷ್ಟವಾದ ಕಾರ್ಯತಂತ್ರದ ಅಗತ್ಯವಿದೆ ಎಂಬುದನ್ನು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಕಂಪನಿಗಳು ಒಪ್ಪಿಕೊಂಡಿವೆ ಎಂದು ಹೇಳಿದರು. ಈ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಅನುಸರಣೆಗಾಗಿ ಮುಂದಿನ ಸಭೆಯನ್ನು ಡಿಸೆಂಬರ್ ಮೊದಲ ವಾರದಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದರು.
    ಜನರನ್ನು ಗುರಿಯಾಗಿಸಲು, ಅದರಲ್ಲೂ ಜನಪ್ರಿಯ ವ್ಯಕ್ತಿಗಳ ಚಿತ್ರ, ವಿಡಿಯೋ, ಧ್ವನಿಗಳನ್ನು ನಕಲು ಮಾಡಿ ಡೀಪ್‌ಫೇಕ್‌ಗಳನ್ನು ರಚಿಸಲು ಕೃತಕ ಬುದ್ಧಿಮತ್ತೆ ಬಳಕೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಸಭೆ ಜರುಗಿದೆ.

    ಡೀಪ್‌ಫೇಕ್‌ಗಳಲ್ಲಿ ವ್ಯಕ್ತಿಗಳ ತಪ್ಪು ನಿರೂಪಣೆ ಮೂಲಕ ಹಾನಿಕಾರಕ ವಿಷಯಗಳನ್ನು ಹರಡಲು ಕೃತಕ ಬುದ್ಧಿಮತ್ತೆ ಬಳಸುವುದರಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವಂತೆ ಕೂಡ ಪ್ರಧಾನಿ ಮೋದಿ ಮಾಧ್ಯಮದವರನ್ನು ಒತ್ತಾಯಿಸಿದ್ದರು.
    ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಡೀಪ್‌ಫೇಕ್‌ಗಳು ಅಥವಾ ತಪ್ಪು ಮಾಹಿತಿಯು ಇಂಟರನೆಟ್​ಲ್ಲಿರುವ 120 ಕೋಟಿ ಭಾರತೀಯರ ಸುರಕ್ಷತೆ ಮತ್ತು ನಂಬಿಕೆಗೆ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹೊಸ ಕಾನೂನು ಜಾರಿ ಸೇರಿದಂತೆ ಅಗತ್ಯ ಚೌಕಟ್ಟನ್ನು (ಫ್ರೇಮ್​ ವರ್ಕ್​) ರಚಿಸುವುದಾಗಿ ಭರವಸೆ ನೀಡಿದ್ದಾರೆ.

    ಏನಿದು ಡೀಪ್​ಫೇಕ್​?:
    ಒಬ್ಬ ವ್ಯಕ್ತಿಯ ಹೋಲಿಕೆಯನ್ನು ಮನವರಿಕೆಯಾಗುವ ರೀತಿಯಲ್ಲಿ ಇನ್ನೊಬ್ಬರಿಗೆ ಬದಲಾಯಿಸುವುದು. ಒಬ್ಬ ವ್ಯಕ್ತಿಯ ಫೋಟೋ, ವಿಡಿಯೋ, ಧ್ವನಿಯನ್ನು ಇನ್ನೊಬ್ಬರ ವ್ಯಕ್ತಿಯೊಂದಿಗೆ ಸುಲಭವಾಗಿ ಗೊತ್ತಾಗದ ರೀತಿಯಲ್ಲಿ ಜೋಡಿಸಿ ನಕಲು ಸೃಷ್ಟಿಸುವುದು. ಡೀಪ್‌ಫೇಕ್‌ಗಳು ಆಳವಾದ ಉತ್ಪಾದಕ ವಿಧಾನಗಳ ಮೂಲಕ ಮುಖದ ನೋಟವನ್ನು ಕುಶಲತೆಯಿಂದ ನಿರ್ವಹಿಸುತ್ತವೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್​ ಇಂಟಲಿಜೆನ್ಸ್) ಮೂಲಕ ದೃಶ್ಯ ಮತ್ತು ಆಡಿಯೋ ವಿಷಯ ತಿರುಚಲಾಗುತ್ತದೆ. ದೀಪ್‌ಫೇಕ್‌ಗಳಿಂದ ಉಂಟಾಗುವ ದೊಡ್ಡ ಅಪಾಯವೆಂದರೆ ಸುಳ್ಳು ಮಾಹಿತಿ ಹರಡುವ ಸಾಮರ್ಥ್ಯ. ಉದಾಹರಣೆಗೆ, 2022ರಲ್ಲಿ ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರು ತಮ್ಮ ಸೇನೆಗೆ ಶರಣಾಗುವಂತೆ ಹೇಳುವ ಡೀಪ್‌ಫೇಕ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts