More

  ವಿಧ್ಯಾರ್ಥಿಗಳು ಓದಿನತ್ತ ಚಿತ್ತ ಹರಿಸಿ

  ಅಳವಂಡಿ: ಜೀವನದಲ್ಲಿ ಯಶಸ್ಸು ಗಳಿಸಲು ಜ್ಞಾನ ಅತಿ ಅವಶ್ಯ ಇದನ್ನು ಕಲಿಕೆ ಎಂಬ ಅಸ್ತ್ರದ ಮೂಲಕ ಪಡೆದುಕೊಳ್ಳಬೇಕು ಎಂದು ಶ್ರೀಮರುಳಾರಾದ್ಯ ಶಿವಾಚಾರ್ಯ ಹೇಳಿದರು.

  ಇದನ್ನೂ ಓದಿ: ವಿಧ್ಯಾರ್ಥಿಗಳು ಸಂವಿಧಾನ ಬಗ್ಗೆ ತಿಳಿಯಲಿ

  ಗ್ರಾಮದ ಮಾತೋ ಶ್ರೀಸಿದ್ದಮ್ಮ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ನೇಹ ಸಮ್ಮೇಳನದಲ್ಲಿ ಭಾನುವಾರ ಮಾತನಾಡಿದರು.
  ವಿಧ್ಯಾರ್ಥಿಗಳು ಧನಾತ್ಮಕ ಚಿಂತನೆಯಿಂದ ಓದಿನತ್ತ ಚಿತ್ತ ಹರಿಸಿ ಜೀವನದಲ್ಲಿ ಸಾಧನೆ ಮಾಡಿ.

  ಇತ್ತೀಚಿಗೆ ಮೋಬೈಲ್ ಬಳಕೆ ಅತಿಯಾಗುತ್ತಿದೆ ಇದು ಮಕ್ಕಳ ಶಿಕ್ಷಣಕ್ಕೆ ಪೆಟ್ಟು ಕೊಡುತ್ತಿದೆ, ಅದರಲ್ಲಿ ಕೆವಲ ಪಠ್ಯ ವಿಷಯಗಳ ಬಗ್ಗೆ ಮಾತ್ರ ಗಮನಹರಿಸಿ ಎಂದರು. ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ಮಕ್ಕಳನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

  ಸಿಆರ್‌ಪಿ ವಿಜಯಕುಮಾರ ಟಿಕಾರೆ, ಪ್ರಮುಖರಾದ ವಿನೋದಾದೇವಿ ಇನಾಮದಾರ, ಡಾ,ಸಿದ್ದಲಿಂಗಸ್ವಾಮಿ ಇನಾಮದಾರ, ನಾಗರಾಜ ಶೆಟ್ಟರ್, ಬಸವರಾಜ ತಳಕಲ್, ಅನ್ವರ ಗಡಾದ, ವೀಣಾ ತಿಗರಿಮಠ, ಈಶಪ್ಪ ಜೋಳದ, ಹುಸೇನ ಬೆಟಗೇರಿ, ಮುದ್ದಮ್ಮ ಕರಡಿ, ಮುಖ್ಯ ಶಿಕ್ಷಕ ಅಶೋಕ ಬಂಡಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts