More

    ಬೋಸ್ ಬದುಕು ಯುವಕರಿಗೆ ಸ್ಫೂರ್ತಿ

    ಇಳಕಲ್ಲ: ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಸ್ವಾಭಿಮಾನ ಬೆಳೆಸುವಂತಹ ಶಿಕ್ಷಣ ರೂಪಿಸಬೇಕಾಗಿದೆ. ನೇತಾಜಿ ಸುಭಾಷಚಂದ್ರ ಬೋಸ್‌ರ ಬದುಕು ಯುವ ಜನತೆಗೆ ಸ್ಫೂರ್ತಿಯಾಗಿದೆ ಎಂದು ವಿಜಯಕುಮಾರ ಹಿರೇಮಠ ಹೇಳಿದರು.

    ನಗರದ ವಿಜಯಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಸುಭಾಷಚಂದ್ರ ಬೋಸ್‌ರ ಜನ್ಮದಿನಾಚರಣೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಪರಾಕ್ರಮ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

    ವಿದ್ಯಾರ್ಥಿಗಳು ನೇತಾಜಿ ಬೋಸ್‌ರ ಆದರ್ಶಗಳನ್ನು ಪಾಲಿಸಿ ದೇಶದ ಕೀರ್ತಿಪತಾಕೆ ಭಾನೆತ್ತರಕ್ಕೆ ಹಾರಿಸುವಂತಾಗಲಿ ಎಂದರು.
    ಪ್ರಾಚಾರ್ಯ ಡಾ.ಜಿ.ಮಲ್ಲಯ್ಯ ಅಧ್ಯಕ್ಷತೆ ವಹಿಸಿ, ರಾಷ್ಟ್ರಪ್ರೇಮ, ಸ್ವಾಭಿಮಾನ, ಪ್ರಾಮಾಣಿಕತೆ ಮೊದಲಾದ ಉನ್ನತ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸ್ವಚ್ಛ, ಸುಂದರ ಬಲಿಷ್ಠ ಭಾರತದ ಶಿಲ್ಪಿಗಳಾಗಿ ಎಂದು ಸಲಹೆ ನೀಡಿದರು.

    ಡಾ.ಎಂ.ಜಿ. ಬಂಗಾರಿ, ಡಾ.ಎಂ.ಎಸ್. ಮಿರ್ಜೇಕರ, ಡಾ.ಸದಾಶಿವ ದೊಡಮನಿ, ಡಾ. ಎಸ್.ಜಿ. ಸಜ್ಜಲಗುಡ್ಡ, ಪ್ರೊ.ಕೆ.ಎಸ್. ಗಾಣಿಗೇರ, ಡಾ.ಎಸ್.ಪಿ. ಅಮೀನಗಡ, ಪ್ರೊ.ಬಿ.ಎಸ್. ವಾಲಿಕಾರ, ಪ್ರೊ.ವಸಂತಕುಮಾರ ಕಡ್ಲಿಮಟ್ಟಿ, ಡಾ.ರಮೇಶ ಮಾಳಗಿ, ಡಾ. ಮಹದೇಗೌಡ, ಪ್ರೊ.ಐಶ್ವರ್ಯ ಜೀರಗಿ, ಪ್ರೋ.ರೋಹಿಣಿ ಪೋಳ, ಪ್ರೊ.ರಾಜೇಶ್ವರಿ ಕುಂಬಾರ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಅನ್ನಪೂರ್ಣ ಚಳಗೇರಿ ಪ್ರಾರ್ಥಿಸಿದರು. ರವಿಕುಮಾರ ಕುರ್ನಾಲ ಸ್ವಾಗತಿಸಿ ಪರಿಚಯಿಸಿದರು. ವೀರೇಶ ಪಾಟೀಲ ಹಾಗೂ ಪೂಜಾ ಸಾಕಾ ನಿರೂಪಿಸಿದರು. ಸಹ ಕಾರ್ಯಕ್ರಮಾಧಿಕಾರಿ ವಿಜಯಕುಮಾರ ತುಂಬದ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts