More

    ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಳ್ಳಬೇಕು- ಕು.ಸತ್ಯಮ್ಮ

    ಮಸ್ಕಿ: ವಿದ್ಯಾರ್ಥಿಗಳು ಸಂಕೋಚ ಸ್ವಾಭಾವವನ್ನು ಬಿಟ್ಟು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಗುರಿ ಸಾಧಿಸಬೇಕು ಎಂದು ಯಾದಗಿರಿಯ ತಹಸೀಲ್ದಾರ ಕು.ಸತ್ಯಮ್ಮ ಹೇಳಿದರು.

    ಇದನ್ನೂ ಓದಿ: ವಿದ್ಯಾರ್ಥಿಗಳು ಪರಿಸರ ಸಂರಕ್ಷಣಗೆ ಮುಂದಾಗಿ : ಉದ್ಯಮಿ ಹರಪಳ್ಳಿ ರವೀಂದ್ರ ಸಲಹೆ

    ಪಟ್ಟಣದ ಶ್ರೀಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಪ್ರಾರಂಭಗೊಂಡ ಕಲಾ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.

    ಜೀವನದಲ್ಲಿ ಬರುವ ಕಷ್ಟಗಳಿಗೆ ಅಂಜದೆ ಅವುಗಳನ್ನು ಮೆಟ್ಟಿ ಸುಂದರ ಜೀವನವನ್ನು ರೂಪಿಸುವ ಕಲೆಯನ್ನು ಕರಗತ ಮಾಡಿಕೊಂಡು ಯಶಸ್ಸನ್ನು ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ಶಾಲಾ ಕಾಲೇಜುಗಳಲ್ಲಿ ಕಲಿಯುವ ಶಿಕ್ಷಣಕ್ಕಿಂತ ಸಮಾಜದಲ್ಲಿ ಬೆರೆತಾಗ ಸಿಗುವ ಶಿಕ್ಷಣ ಬಹಳ ಮುಖ್ಯ. ವಿದ್ಯಾರ್ಥಿಗಳು ಸಮಾಜದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಚಿಕಿತ್ಸಿಕ ಬುದ್ದಿಯನ್ನು ಬೆಳಸಿಕೊಳ್ಳಬೇಕೆಂದರು.

    ಸಂಸ್ಥೆಯ ಉಪಾಧ್ಯಕ್ಷ ಎನ್.ಶಿವಕುಮಾರ ಮಾತನಾಡಿ, 21ನೇ ಶತಮನದಲ್ಲಿ ಭಾರತ ಜಗತ್ತಿನ ಮುಂಚೂಣಿ ರಾಷ್ಟ್ರವಾಗುತ್ತಿದೆ. ಚಂದ್ರಯಾನ 3 ಯಶಸ್ವಿಯಿಂದ ಭಾರತ ಪ್ರಪಂಚದ 4ನೇ ಪ್ರಮುಖ ದೇಶವಾಗಿದ್ದು, ಚಂದ್ರನ ದಕ್ಷೀಣ ಭಾಗಕ್ಕೆ ಕಾಲಿಟ್ಟ ಮೊದಲ ದೇಶವಾಗಿದೆ ನಾವೆಲ್ಲರೂ ಅಭಿಮಾನ ಪಡಬೇಕು ಎಂದರು.

    ಯಾದಗಿರಿಯ ತಹಸೀಲ್ದಾರ ಆಗಿ ತರಬೇತಿ ಅವಧಿಯಲ್ಲಿರುವ ಸತ್ಯಮ್ಮ ಮೂಲತಃ ಸಿಂಧನೂರು ತಾಲೂಕಿನ ಗಿಣಿವಾರ ಗ್ರಾಮದವರು. ಹಳ್ಳಿಯ ಕನ್ನಡ ಮಾದ್ಯಮದಲ್ಲಿ ಓದಿ ಉನ್ನತ ಸ್ಥಾನ ಪಡೆದಿರುವುದನ್ನು ವಿದ್ಯಾರ್ಥಿಗಳು ಮಾದರಿಯಾಗಿಟ್ಟುಕೊಂಡು ಜೀವನದಲ್ಲಿ ಗುರಿ ಸಾಧಿಸುವಂತೆ ತಿಳಿಸಿದರು.

    ಪ್ರಚಾರ್ಯ ವೀರೇಶ ಹೂಗಾರ, ಜೆ.ಆರ್.ಎಂ.ಶಾಲೆಯ ಮುಖ್ಯಗುರು ಸಿದ್ದಾರಡ್ಡಿ ಗಿಣಿವಾರ, ಆಡಳಿತ ಮಂಡಳಿಯ ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಹಳ್ಳಿ, ನಿರ್ದೆಶಕರಾದ ಪ್ರಕಾಶ ಮಸ್ಕಿ, ಸೋಮಶೇಖರ ಸಜ್ಜನ್, ಭರತರಾಜ ದೇಶಮುಖ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts