More

    ಸಿಕ್ತು ಕೈತಪ್ಪಿದ ವೈದ್ಯ ಸೀಟು; ಬ್ಯಾಂಕ್​ಗಳ ಎಡವಟ್ಟಿನಿಂದ ಎಚ್ಚೆತ್ತುಕೊಂಡ ಕೆಇಎ

    ಬೆಂಗಳೂರು: ಬ್ಯಾಂಕ್ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಎಡವಟ್ಟಿನಿಂದಾಗಿ, ಶುಲ್ಕ ಕಟ್ಟಿದ್ದರೂ ವೈದ್ಯ ಸೀಟು ಕೈತಪ್ಪಿದ್ದ ವಿದ್ಯಾರ್ಥಿಗಳಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ವಿದ್ಯಾರ್ಥಿಗಳಿಗಾದ ಅನ್ಯಾಯವನ್ನು ವಿಜಯವಾಣಿ ಬಯಲಿಗೆಳೆದ ಬೆನ್ನಲ್ಲೇ ಎಚ್ಚೆತ್ತ ಕೆಇಎ ಆದ ತಪ್ಪನ್ನು ತಿದ್ದಿ್ದೊಂಡು ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ಕೊಟ್ಟಿದೆ.

    ಸಿಕ್ತು ಕೈತಪ್ಪಿದ ವೈದ್ಯ ಸೀಟು; ಬ್ಯಾಂಕ್​ಗಳ ಎಡವಟ್ಟಿನಿಂದ ಎಚ್ಚೆತ್ತುಕೊಂಡ ಕೆಇಎ

    ‘ಬ್ಯಾಂಕ್​ಗಳ ಎಡವಟ್ಟು, ಕೈತಪ್ಪಿದ ವೈದ್ಯ ಸೀಟು’ ಶೀರ್ಷಿಕೆಯಡಿ ಶನಿವಾರ ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟವಾದ ಬಳಿಕ ಕೆಇಎ, ವಿದ್ಯಾರ್ಥಿಗಳ ಬಳಿ ಇದ್ದ ದಾಖಲೆಗಳನ್ನು ಪಡೆದು ಪರಿಶೀಲಿಸಿದೆ. ಇದರಲ್ಲಿ ವಿದ್ಯಾರ್ಥಿಗಳ ತಪ್ಪಿಲ್ಲ. ನಿಗದಿತ ಸಮಯಕ್ಕೆ ಹಣ ಪಾವತಿಸಿದ್ದರೂ ಕೆಇಎ ನೀಡಿರುವ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿಲ್ಲ ಎಂಬ ವಿಚಾರ ತಿಳಿದು ಬಂದಿದೆ. ಇದಕ್ಕೆ ಬ್ಯಾಂಕ್ ವಿಲೀನ ಪ್ರಕ್ರಿಯೆಯಿಂದ ಉಂಟಾಗಿರುವ ತಾಂತ್ರಿಕ ದೋಷ ಕಾರಣವಾಗಿರುವುದು ಸಾಬೀತಾಗಿರುವುದರಿಂದ ಶನಿವಾರ ಸಂಜೆಯವರೆಗೂ ಸುದೀರ್ಘ ಪರಿಶೀಲನೆ ನಡೆಸಿ ಆ ಬಳಿಕ ವಿದ್ಯಾರ್ಥಿಗಳ ಕೈಗೆ ಪ್ರವೇಶಪತ್ರವನ್ನು ನೀಡಿದೆ. ಡಿ.23ರ ಸಂಜೆ 4ಗಂಟೆಯೊಳಗೆ ಕಾಲೇಜಿಗೆ ತೆರಳಿ ಪ್ರವೇಶ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದೆ.

    ಸಿಕ್ತು ಕೈತಪ್ಪಿದ ವೈದ್ಯ ಸೀಟು; ಬ್ಯಾಂಕ್​ಗಳ ಎಡವಟ್ಟಿನಿಂದ ಎಚ್ಚೆತ್ತುಕೊಂಡ ಕೆಇಎ
    ಬ್ಯಾಂಕ್ ಎಡವಟ್ಟಿನಿಂದ ಕೈತಪ್ಪಿದ್ದ ವೈದ್ಯಕೀಯ ಸೀಟನ್ನು ಕೆಇಎ ಮರಳಿ ವಿದ್ಯಾರ್ಥಿಗೆ ನೀಡಿರುವ ಪ್ರವೇಶದ ಆದೇಶದ ಪ್ರತಿ.

    ವೈದ್ಯ ಆಗಬೇಕೆಂಬುದು ನನ್ನ ಮತ್ತು ಕುಟುಂಬದ ಕನಸು. ಆದರೆ, ತಾಂತ್ರಿಕ ದೋಷದಿಂದ ಸೀಟು ಕೈ ತಪ್ಪಿತ್ತು. ಇದರಿಂದ ಗಾಬರಿಯಾಗಿದ್ದೆ. ವಿಜಯವಾಣಿ ವರದಿಯಿಂದ ಎಚ್ಚೆತ್ತು ಕೆಇಎ ನಮ್ಮ ಸಮಸ್ಯೆ ಬಗೆಹರಿಸಿದೆ. ಖುಷಿಯಾಗುತ್ತಿದೆ.

    | ಪುಳಕ ವಿದ್ಯಾರ್ಥಿ

    ಬ್ಯಾಂಕ್ ಸಮಸ್ಯೆಯಿಂದ ಕೈತಪ್ಪಿದ್ದ ಸೀಟನ್ನು ಮರಳಿ ನೀಡಿದ್ದೇವೆ. ಬ್ಯಾಂಕ್​ಗೂ ಈ ವಿಚಾರ ಗಮನಕ್ಕೆ ತಂದಿದ್ದೇವೆ. ತಾಂತ್ರಿಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಪ್ರವೇಶ ಪ್ರಕ್ರಿಯೆ ಚಾಲ್ತಿಯಲ್ಲಿರುವುದರಿಂದ ಬ್ಯಾಂಕ್ ಅನ್ನು ಬದಲು ಮಾಡಲು ಸಾಧ್ಯವಿಲ್ಲ.

    | ವೆಂಕಟರಾಜು ಕಾರ್ಯನಿರ್ವಾಹಕ ನಿರ್ದೇಶಕ, ಕೆಇಎ

    ವಿಜಯವಾಣಿಗೆ ಧನ್ಯವಾದ

    ‘ನಾವು ಮಾಡದ ತಪ್ಪಿಗೆ ಸೀಟು ಕಳೆದುಕೊಳ್ಳಬೇಕಾದ ಸನ್ನಿವೇಶ ಎದುರಾದಾಗ ನಮ್ಮ ನೆರವಿಗೆ ಬಂದಿದ್ದು ವಿಜಯವಾಣಿ. ಪತ್ರಿಕೆಯ ವರದಿಯಿಂದ ನನ್ನ ಮಗಳಿಗೆ ಸೀಟು ಸಿಕ್ಕಿದೆ. ವಿಜಯವಾಣಿಯಲ್ಲಿ ಪ್ರಕಟವಾದ ಒಂದು ವರದಿ ಎಷ್ಟೆಲ್ಲ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿ. ಪತ್ರಿಕೆಯ ಸಹಾಯವನ್ನು ನಾವು ಎಂದಿಗೂ ಮರೆಯುವುದಿಲ್ಲ’ ಎಂದು ಮೊದಲು ಸೀಟು ಕೈತಪ್ಪಿದ್ದ ಮಂಗಳೂರು ಮೂಲದ ವಿದ್ಯಾರ್ಥಿನಿ ತಂದೆ ಧನ್ಯವಾದ ಅರ್ಪಿಸಿದ್ದಾರೆ.

    ಸಮಸ್ಯೆ ಎದುರಾದಾಗ ಕೆಇಎ ಅಧಿಕಾರಿಗಳಿಗೆ ತಿಳಿಸಲು ಮಂಗಳೂರಿನಿಂದ ಬೆಂಗಳೂರಿಗೆ ಬಂದೆವು. ಆದರೆ, ಕಚೇರಿ ಎದುರು ಪೊಲೀಸರು ತಡೆದರು. ಸಂಜೆ ವೇಳೆಗೆ ನಮ್ಮ ಸಮಸ್ಯೆಯನ್ನು ಪತ್ರದ ಮೂಲಕ ಕೆಇಎಗೆ ತಿಳಿಸಿದೆವು. ಶನಿವಾರ ನಮ್ಮ ಸಮಸ್ಯೆ ಕುರಿತು ‘ವಿಜಯವಾಣಿ’ಯಲ್ಲಿ ಸುದ್ದಿ ಪ್ರಕಟವಾಯಿತು. ಆನಂತರ ಕೆಇಎ ಅಧಿಕಾರಿಗಳೇ ನಮಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಎಲ್ಲ ದಾಖಲೆಗಳನ್ನು ಪಡೆದು ಸಂಜೆ ವೇಳೆ ಪ್ರವೇಶಪತ್ರವನ್ನು ನೀಡಿದ್ದಾರೆ. ಇದು ವಿಜಯವಾಣಿಯಿಂದ ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಕೆಲವು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಹ ಸಮಸ್ಯೆ ಎದುರಿಸಿದ್ದರು. ಇವರಿಗೆ ಶುಲ್ಕ ಪಾವತಿಸಲು ನಿಗದಿಪಡಿಸಿದ್ದ ದಿನಾಂಕವನ್ನು ಕೆಇಎ ವಿಸ್ತರಣೆ ಮಾಡಿ ಅನುಕೂಲ ಮಾಡಿಕೊಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts