More

    ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

    ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್ ಸಮೀಪದ ಏಳೂವರೆ ಹಳ್ಳದ ಕಲ್ಲಂಡ ಎಂಬಲ್ಲಿ ಶನಿವಾರ ಸ್ನಾನಕ್ಕೆ ಇಳಿದಿದ್ದ ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ ಎಂಬುವರ ಪುತ್ರ ವಿವೇಕ್(17) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

    ಉಜಿರೆಯ ಪದವಿ ಪೂರ್ವ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು, ಶನಿವಾರ ಮಧ್ಯಾಹ್ನ ನಂತರ ಕಾಲೇಜಿಗೆ ರಜೆ ಇದ್ದುದರಿಂದ ಆರೇಳು ಮಂದಿ ಸ್ನೇಹಿತರ ಜತೆ ಎರ್ಮಾಯಿ ಫಾಲ್ಸ್‌ಗೆ ಹೋಗಿ, ತೊಟ್ಲಾಯಿ ಗುಂಡಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಸಮಯ ಈ ಘಟನೆ ನಡೆದಿದೆ.

    ತೊಟ್ಲಾಯಿ ಗುಂಡಿಯಲ್ಲಿ ಫಾಲ್ಸ್‌ಗೆ ಬರುವ ಮಂದಿ ಸ್ನಾನಕ್ಕೆ ಇಳಿಯುವುದು ಸಾಮಾನ್ಯ. 2019ರ ನೆರೆಯ ಬಳಿಕ ಈ ಗುಂಡಿಯಲ್ಲಿ ಹೂಳು ತುಂಬಿದ್ದು, ಅಷ್ಟೊಂದು ಆಳ ಇರಲಿಲ್ಲ. ಆದರೆ ಈ ವರ್ಷದ ಮಳೆಗೆ ಹೂಳು ಕೊಚ್ಚಿಕೊಂಡು ಹೋಗಿ ಗುಂಡಿ ಆಳವಾಗಿದೆ. ಇಲ್ಲಿ ಸ್ನಾನ ಮಾಡುವಾಗ ಪ್ರವಾಸಿಗರು ಬೊಬ್ಬೆ ಹೊಡೆಯುವುದು, ಕಿರುಚಾಟ ಇತ್ಯಾದಿ ಸಾಮಾನ್ಯ. ಇದರಿಂದ ಸ್ಥಳೀಯರು ಹೆಚ್ಚಾಗಿ ಗಮನ ಹರಿಸುವುದಿಲ್ಲ. ಶನಿವಾರ ಕೂಡ ಇದೇ ರೀತಿ ಆಗಿತ್ತು. ಸ್ಥಳೀಯರು ಮುನ್ನೆಚ್ಚರಿಕೆಯನ್ನೂ ಲೆಕ್ಕಿಸದೆ ಪ್ರವಾಸಿಗರು ಕೆಲವೊಮ್ಮೆ ವಾಗ್ವಾದ ನಡೆಸಿ ನೀರಿಗಿಳಿಯುತ್ತಾರೆ ಎಂದು ಪರಿಸರದ ಮಂದಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts