More

    ವಿದ್ಯಾರ್ಥಿನಿ ಆತ್ಮಹತ್ಯೆ: ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕ, ಕ್ರಮ ಕೈಗೊಳ್ಳದ ಮುಖ್ಯಶಿಕ್ಷಕಿ ಬಂಧನ

    ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಶಿಕ್ಷಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳೆನ್ನಲಾದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಸಾವಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಸದರಿ ವಿಜ್ಞಾನ ಶಿಕ್ಷಕನನ್ನು ಹಾಗೂ ಶಾಲೆಯ  ಮುಖ್ಯ ಶಿಕ್ಷಕಿಯನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದಾರೆ.

    ಕೊಯಮತ್ತೂರಿನ ಖಾಸಗಿ ಶಾಲೆಯೊಂದರ 31 ವರ್ಷದ ಭೌತಶಾಸ್ತ್ರ ಶಿಕ್ಷಕನು ಮೃತ 12ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಕೆಲವು ತಿಂಗಳ ಹಿಂದೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಅದೇ ಶಿಕ್ಷಕ ಇನ್ನೂ ಇಬ್ಬರು ಹುಡುಗಿಯರಿಗೆ ಲೈಂಗಿಕ ಕಿರುಕುಳ ಕೊಟ್ಟಿರುವುದನ್ನು ಸೂಚಿಸುವ ವಾಟ್ಸಾಪ್​ ಚಾಟ್​ಗಳು ಮತ್ತು ಆಡಿಯೋ ಸಂಭಾಷಣೆ ಮಂಗಳವಾರ ವೈರಲ್​ ಆಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂಬಂಧಪಟ್ಟ ಶಿಕ್ಷಕನ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ವಾರಾಂತ್ಯದ ಲಾಕ್​ಡೌನ್; ವಾಯು ಮಾಲಿನ್ಯ ಕಡಿವಾಣಕ್ಕೆ ದೆಹಲಿ ಸರ್ಕಾರ ಸಲಹೆ

    ಕೈಬರಹದಲ್ಲಿರುವ ಪತ್ರವೊಂದು, ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣದಲ್ಲಿ ಇನ್ನೂ ಇಬ್ಬರ ಪಾತ್ರವಿದೆ ಎಂಬ ಶಂಕೆ ಮೂಡಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿ ದೂರು ನೀಡಿದಾಗ ಸೂಕ್ತ ಕ್ರಮ ಕೈಗೊಳ್ಳದ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಕೂಡ ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

    “ಕೆಲವರ ವಿಕೃತ ನಡವಳಿಕೆಯಿಂದಾಗಿ ಒಬ್ಬ ವಿದ್ಯಾರ್ಥಿಯ ಜೀವ ಹೋಗಿದೆ. ಶಾಲೆಗಳು ಲೈಂಗಿಕ ಶೋಷಣೆ ನಡೆಯದಂತೆ ಎಚ್ಚರ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮಹಿಳೆಯರ ಸುರಕ್ಷತೆಯನ್ನು ಕಾಪಾಡುತ್ತೇವೆ” ಎಂದು ರಾಜ್ಯದ ಸಿಎಂ ಎಂ.ಕೆ.ಸ್ಟಾಲಿನ್​ ಹೇಳಿದ್ದಾರೆ. (ಏಜೆನ್ಸೀಸ್)

    ವಿರಾಟ್​​ ಕೊಹ್ಲಿ ಪುತ್ರಿಗೆ ರೇಪ್​ ಬೆದರಿಕೆ ಹಾಕಿದ್ದವ ಪೊಲೀಸ್​ ವಶಕ್ಕೆ

    VIDEO| ಆಹಾ! ಹೊಸ ‘ದೃಷ್ಟಿ’ ಸಿಕ್ಕಿದ ಈ ಪೋರಿಯ ಸಂತಸ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts