More

    ಐಪಿಎಲ್-14: ಇಂದು ಮುಂಬೈ-ಪಂಜಾಬ್ ನಡುವೆ ಮಹತ್ವದ ಮುಖಾಮುಖಿ

    ಅಬುಧಾಬಿ: ಅರಬ್ ನಾಡಿನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸುವ ಕನಸು ಭಗ್ನಗೊಳ್ಳುವ ಭೀತಿ ಎದುರಿಸುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಂಗಳವಾರದ 2ನೇ ಕಾದಾಟದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸವಾಲು ಎದುರಿಸಲಿದೆ. 2ನೇ ಚರಣದ ಮೊದಲ ಪಂದ್ಯದಲ್ಲಿ ಸೋತರೂ, ಸನ್‌ರೈಸರ್ಸ್‌ ವಿರುದ್ಧದ ಕಳೆದ ಪಂದ್ಯದಲ್ಲಿ ಸಾಧಾರಣ ಮೊತ್ತ ರಕ್ಷಿಸಿಕೊಂಡು ಗೆದ್ದ ವಿಶ್ವಾಸದಲ್ಲಿರುವ ಪಂಜಾಬ್ ತಂಡಕ್ಕೂ ಪ್ಲೇಆಫ್​ ಅವಕಾಶ ಹೆಚ್ಚಿಸಿಕೊಳ್ಳಲು ಗೆಲುವಿನ ಲಯ ಕಾಯ್ದುಕೊಳ್ಳುವುದು ಅನಿವಾರ‌್ಯವಾಗಿದೆ.

    ಉಭಯ ತಂಡಗಳೂ ಟೂರ್ನಿಯಲ್ಲಿ ಇದುವರೆಗೆ ಆಡಿದ 10 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 6ರಲ್ಲಿ ಸೋತಿವೆ. ಈ ಪೈಕಿ ಮುಂಬೈ ತಂಡ ಕಳಪೆ ರನ್‌ರೇಟ್ ಹಿನ್ನಡೆಯನ್ನೂ ಹೊಂದಿದೆ. ಮುಂಬೈ ತಂಡ ಸಿಎಸ್‌ಕೆ, ಆರ್‌ಸಿಬಿ ವಿರುದ್ಧ ರನ್‌ಚೇಸಿಂಗ್‌ನಲ್ಲಿ ಎಡವಿದ್ದರೆ, ಕೆಕೆಆರ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ರಕ್ಷಿಸಿಕೊಳ್ಳಲು ಕೂಡ ವಿಲವಾಗಿತ್ತು. ಪ್ರಮುಖವಾಗಿ ಮಧ್ಯಮ ಕ್ರಮಾಂಕದ ವೈಲ್ಯ ರೋಹಿತ್ ಶರ್ಮ ಬಳಗಕ್ಕೆ ದೊಡ್ಡ ತಲೆನೋವಾಗಿದೆ. ಸೂರ್ಯಕುಮಾರ್, ಇಶಾನ್ ಕಿಶನ್, ಕೃನಾಲ್-ಹಾರ್ದಿಕ್ ಪಾಂಡ್ಯ ಮುಂಬೈ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ರನ್ ಗಳಿಸಿಲ್ಲ.

    ಮುಂಬೈ ತಂಡ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆಡಲಿರುವ ಭಾರತ ತಂಡದ 6 ಆಟಗಾರರನ್ನು ಹೊಂದಿದೆ. ಹೀಗಾಗಿ ಈ ಆಟಗಾರರು ಉತ್ತಮ ಲಯದಲ್ಲಿ ಮುಂದುವರಿಯದಿದ್ದರೆ ಟೀಮ್ ಇಂಡಿಯಾದ ಅಭಿಮಾನಿಗಳಿಗೂ ಇದು ಚಿಂತೆಯ ವಿಷಯವಾಗಲಿದೆ. ವೇಗಿಗಳಾದ ಬುಮ್ರಾ, ಬೌಲ್ಟ್, ಮಿಲ್ನೆ ಪರಿಣಾಮಕಾರಿ ಎನಿಸಿದ್ದರೂ, ಸ್ಪಿನ್ ಬೌಲಿಂಗ್‌ನಲ್ಲಿ ರಾಹುಲ್ ಚಹರ್-ಕೃನಾಲ್ ಪಾಂಡ್ಯ ನಿರಾಸೆ ಮೂಡಿಸಿದ್ದಾರೆ.

    ಸನ್‌ರೈಸರ್ಸ್‌ ವಿರುದ್ಧ 125 ರನ್‌ಗೆ ತೃಪ್ತಿಪಟ್ಟರೂ, ಬೌಲರ್‌ಗಳ ಸಾಹಸದಿಂದ ಗೆದ್ದಿರುವ ಕೆಎಲ್ ರಾಹುಲ್ ಪಡೆ, ಸ್ಟಾರ್ ಬ್ಯಾಟರ್‌ಗಳನ್ನು ಹೊಂದಿದ್ದರೂ ನಿರೀಕ್ಷಿತ ರೀತಿಯಲ್ಲಿ ರನ್‌ಪ್ರವಾಹ ಹರಿಸುತ್ತಿಲ್ಲ. ರಾಹುಲ್-ಮಯಾಂಕ್ ಜೋಡಿ ಮಿಂಚುತ್ತಿದ್ದರೂ ಪಂಜಾಬ್‌ಗೆ ಇತರ ಬ್ಯಾಟ್ಸ್‌ಮನ್‌ಗಳು ಕೈಕೊಡುತ್ತಿದ್ದಾರೆ. ಒಟ್ಟಾರೆ ಈ ಪಂದ್ಯದಲ್ಲಿ ಸೋತ ತಂಡದ ಪ್ಲೇಆಫ್​ ಕನಸು ಬಹುತೇಕ ಕ್ಷೀಣಿಸಲಿದೆ.

    ಮುಖಾಮುಖಿ: 27
    ಮುಂಬೈ: 14
    ಪಂಜಾಬ್: 13
    ಹಿಂದಿನ ಹಣಾಹಣಿ:
    ಚೆನ್ನೈನಲ್ಲಿ ಪಂಜಾಬ್‌ಗೆ 9 ವಿಕೆಟ್ ಜಯ.
    *ಆರಂಭ: ರಾತ್ರಿ 7.30
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಟೀಮ್ ನ್ಯೂಸ್:
    ಮುಂಬೈ: ಸತತ ಸೋಲಿನ ನಡುವೆ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಆದರೆ ಕೆಎಲ್ ರಾಹುಲ್, ಕ್ರಿಸ್ ಗೇಲ್ ವಿರುದ್ಧ ಉತ್ತಮ ದಾಖಲೆ ಹೊಂದಿರುವ ವೇಗಿ ಧವಳ್ ಕುಲಕರ್ಣಿ ಕಣಕ್ಕಿಳಿದರೆ ಅಚ್ಚರಿ ಇಲ್ಲ.
    ಪಂಜಾಬ್: ಮಧ್ಯಮ ಕ್ರಮಾಂಕದಲ್ಲಿ ವಿದೇಶಿ ಬ್ಯಾಟ್ಸ್‌ಮನ್‌ಗಳು ಕೈಕೊಡುತ್ತಿದ್ದಾರೆ. ಆದರೂ ಪೂರನ್, ಮಾರ್ಕ್ರಮ್, ಗೇಲ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ದೀಪಕ್ ಹೂಡಾ ಬದಲಿಗೆ ಶಾರೂಖ್ ಖಾನ್ ಕಣಕ್ಕಿಳಿಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

    ಅಮ್ಮನಾದ ಬಳಿಕ ಎರಡನೇ ಪ್ರಶಸ್ತಿ ಗೆದ್ದ ಸಾನಿಯಾ ಮಿರ್ಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts