More

    ರಸ್ತೆ ವಿಸ್ತರಣೆಗೆ ಗ್ರಾಮಸ್ಥರ ಆಗ್ರಹ

    ಹಿರಿಯೂರು: ತಾಲೂಕಿನ ಕರೇಚಿಕ್ಕಯ್ಯನರೊಪ್ಪ (ಕೆ.ಸಿ.ರೊಪ್ಪ) ದಿಂದ ಗೋಗುದ್ದು ಗ್ರಾಮ ಮಾರ್ಗ ಮಧ್ಯೆ ಗುಡ್ಡಗಾಡು ಪ್ರದೇಶದಲ್ಲಿ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗೌನಹಳ್ಳಿ, ಗುಡಿಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಗೌನಹಳ್ಳಿ, ಗುಡಿಹಳ್ಳಿ, ಭೂತಯ್ಯನಹಟ್ಟಿ, ಕರ‌್ಲಹಟ್ಟಿ, ಗೊಲ್ಲರಹಟ್ಟಿ ಸೇರಿ ಅನೇಕ ಗ್ರಾಮಗಳ ಜನತೆ ಜಿಲ್ಲಾ ಕೇಂದ್ರಕ್ಕೆ ಹೋಗಿಬರಲು ಈ ಮಾರ್ಗವನ್ನು ಅವಲಂಬಿಸಿದ್ದಾರೆ.

    ಆದರೆ, ಬಹುದಿನಗಳ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಿ ಇದು ನಮ್ಮ ವ್ಯಾಪ್ತಿಯಲ್ಲಿದ್ದು, ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

    ಇದರಿಂದಾಗಿ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ ಎಂದು ದೂರಿದ್ದಾರೆ.

    ಈ ರಸ್ತೆಯೂ 12 ವರ್ಷದ ಹಿಂದೆಯೇ ಪಿಡಬ್ಲುೃಡಿ ವ್ಯಾಪ್ತಿಗೆ ಒಳಪಟ್ಟು ಮೇಲ್ದರ್ಜೆಗೆ ಏರಿದೆ. ಚುನಾವಣೆ ವೇಳೆ ವಿಸ್ತರಣೆ, 12 ಅಡಿ ತಗ್ಗಿಸಲು 4 ಕೋಟಿ ರೂ. ಮಂಜೂರಾಗಿದೆ.

    ಕಾಮಗಾರಿ ಸಂಬಂಧ ಗುತ್ತಿಗೆ ಪಡೆದವರು ಕಾರ್ಯಾರಂಭ ಕೂಡ ಮಾಡಿದ್ದರು. ಆದರೆ, ಅಧಿಕಾರಿಗಳು ರಕ್ಷಿತಾರಣ್ಯ ಪ್ರದೇಶವೆಂದು ಕೆಲಸ ನಿಲ್ಲಿಸಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಮರು ಕೆಲಸ ಆರಂಭ ಮಾಡಿದ್ದರೂ ಹಿರಿಯೂರಿನ ವಲಯ ಅರಣ್ಯಾಧಿಕಾರಿ ಮತ್ತೊಮ್ಮೆ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

    ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ವಿವಿಧ ಗ್ರಾಮಗಳ ಗ್ರಾಮಸ್ಥರು ತಂದ ನಂತರ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ.

    ಸಚಿವರು ಸೂಚಿಸಿದ ನಂತರವೂ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ಸಂಚಾರಕ್ಕೆ

    ಯೋಗ್ಯವಾಗುವಂತೆ ಅನುಕೂಲ ಮಾಡಿಕೊಡದಿದ್ದರೆ, ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಗ್ರಾಮಸ್ಥರಾದ ಎಸ್.ಬಸವರಾಜ್, ಜೆ.ಕರಿಯಣ್ಣ, ತಿಮ್ಮಣ್ಣ, ರಂಗಪ್ಪ, ಹರ್ಷ, ಲಲಿತಮ್ಮ ಇತರರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts