More

    ಭೂಮಿಗಾಗಿ ಹೋರಾಟ ಅನಿವಾರ್ಯ

    ಮೂಡಿಗೆರೆ: ಭೂ ಸಮಸ್ಯೆಗಳ ಪರಿಹಾರ ಹಾಗೂ ಅಕ್ರಮ ಖಾತೆ ರದ್ದು ಮಾಡುವಂತೆ ಆಗ್ರಹಿಸಿ ತಾಲೂಕು ಕಚೇರಿ ಆವರಣದಲ್ಲಿ ಭೂ ಸಂಘರ್ಷ ಸಮಿತಿ, ವಿವಿಧ ಪಕ್ಷಗಳ ಮುಖಂಡರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಶುಕ್ರವಾರವೂ ಮುಂದುವರಿಯಿತು.

    ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಹೈಕೋರ್ಟ್ ವಕೀಲ ಎಸ್.ಬಾಲನ್, ತುಳಿತಕ್ಕೊಳಗಾದ ಸಮುದಾಯದವರು ಭೂಮಿ ಹಕ್ಕು ಪಡೆಯಬೇಕೆಂದರೆ ದೇಶದ ಅಧಿಕಾರ ಚುಕ್ಕಾಣಿ ಶೂದ್ರರ ಕೈಗೆ ದಕ್ಕಬೇಕೆಂದು ಎಂದು ಆಗ್ರಹಿಸಿದರು.
    ರಾಮಾಯಣ, ಮಹಾಭಾರತ ಕಾಲದಿಂದ ಸ್ವಾತಂತ್ರೃ ಬರುವವರೆಗೂ ದಲಿತರು, ಶೂದ್ರರಿಗೆ ಒಂದಿಚೂ ಭೂಮಿ ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ದಲಿತರಿಗೆ ಕೆಲಸ ಮತ್ತು ಭೂಮಿ ಎರಡನ್ನೂ ಕೊಟ್ಟಿದ್ದ ಟಿಪ್ಪುವಿನ ಮೇಲೆ ಬಲಾಢ್ಯರು ಕೋಪ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿರುವ 27451 ಹಳ್ಳಿಗಳಲ್ಲಿ ದಲಿತ ಕೇರಿಗಳಿವೆ. ಅವರನ್ನು ಮೇಲ್ವರ್ಗದವರು ಊರಿನೊಳಗೆ ಬಿಟ್ಟುಕೊಳ್ಳುವುದಿಲ್ಲ. ದಲಿತರು ಕೂಲಿ ಮಾಡಿಕೊಂಡೇ ಇರಬೇಕೆಂಬುದು ಕೆಲವರ ಮೂಲ ಉದ್ದೇಶ. ಅಲ್ಲದೇ ಐಪಿಎಸ್, ಐಎಎಸ್ ಸೇರಿ ಉನ್ನತ ಹುದ್ದೆಗಳಲ್ಲಿ ಮೇಲ್ಜಾತಿಯವರೇ ಇದ್ದಾರೆ. ಇದರಿಂದ ದಲಿತರಿಗೆ ಭೂಮಿ ದೊರಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಆಡಳಿತ ನಡೆಸುವವರಿಗೆ ಬಡವರ ಮೇಲೆ ಕಿಂಚಿತ್ತೂ ಕರುಣೆ ಇಲ್ಲ. ಈಗಾಗಲೇ ನಮ್ಮ ದೇಶದ ರೈಲ್ವೇ, ಬ್ಯಾಂಕ್, ಏರ್‌ಪೋರ್ಟ್, ಇನ್ಶೂರೆನ್ಸ್, ವಿದ್ಯುತ್ ಸೇರಿ 9 ಕ್ಷೇತ್ರಗಳನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡಲಾಗಿದೆ. ಇರುವ ಭೂಮಿ ಕೂಡ ಉಳ್ಳವರ ಪಾಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ಭೂಮಿ ಹಕ್ಕು ಪಡೆಯಬೇಕೆಂದರೆ ಅಧಿಕಾರ ಪಡೆಯಬೇಕು. ಅದಕ್ಕಾಗಿ ವೋಟಿಗಾಗಿ ನೋಟು ಬೇಡುವುದನ್ನು ಬಿಡಬೇಕು ಎಂದು ಮನವರಿಕೆ ಮಾಡಿಕೊಟ್ಟರು.
    ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಮೀಸಲು ಕ್ಷೇತ್ರದಲ್ಲಿ ಗೆದ್ದಿದ್ದ ಮೂರೂ ಪಕ್ಷದ ಶಾಸಕರು ಶ್ರೀಮಂತರ ಪರ ಕೆಲಸ ಮಾಡಿದ್ದಾರೆ. ನಮ್ಮ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ನಮಗೆ ನ್ಯಾಯ ಸಿಗದಿದ್ದರೆ ಬೆಂಗಳೂರಿನಲ್ಲಿ ಕಂದಾಯ ಸಚಿವರ ಮನೆ ಎದುರು ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು. ಸಂಜೆವರೆಗೆ ಡಿಸಿ ಹಾಗೂ ಎಸಿ ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಧರಣಿ ನಿರತರು, ಎಸಿ ಮತ್ತು ಡಿಸಿ ಆಗಮನಕ್ಕೆ ರಾತ್ರಿಯಿಡೀ ಕಾಯುತ್ತೇವೆ. ಇಲ್ಲವಾದರರೆ ಶನಿವಾರವೂ ಧರಣಿ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದರು.
    ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಶೇಖರ್, ಸಿಪಿಐ ತಾಲೂಕು ಕಾರ್ಯದರ್ಶಿ ಕೆಳಗೂರು ರಮೇಶ್, ಬಿಎಸ್‌ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಭಾನುಪ್ರಕಾಶ್, ನವೀನ್, ಶಿವಪ್ರಸಾದ್, ಜಗದೀಶ್ ಕಾರ್‌ಬೈಲ್, ನಾಗೇಶ್, ಲಕ್ಷ್ಮಣ, ಗಿರೀಶ್, ಸಂದೀಪ್, ಕೆ.ಕೆ.ಕೃಷ್ಣಪ್ಪ, ಖಾಲಿದ್, ಹೆಡದಾಳು ಅಭಿಜಿತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts