More

    ಶೈಕ್ಷಣಿಕ ಕ್ಷೇತ್ರದ ಸಮಗ್ರ ಪ್ರಗತಿಗೆ ಶ್ರಮ; ಡಾ.ಅವಿನಾಶ ಜಾಧವ್​

    ಕಾಳಗಿ: ಶಿಕ್ಷಕ ನಮ್ಮ ಭವ್ಯ ಭಾರತದ ದಿವ್ಯ ಶಕ್ತಿ ಇದ್ದಂತೆ, ಈ ಶಕ್ತಿ ರಾಷ್ಟ್ರದ ರಕ್ಷಣೆಗೆ ಪ್ರಮುಖ ಪುಷ್ಟಿ ನೀಡುವುದರೊಂದಿಗೆ ಸದೃಢ ಸಮಾಜ ನಿರ್ಮಾಣಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು.

    ಶ್ರೀ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸರ್ಕಾರಿ ನೌಕರರ ಸಂಘ ಹಾಗೂ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಬಡ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿ, ಅವರ ಬಾಳನ್ನು ಬೆಳಗುವ ನಂದಾದೀಪವಾಗಿದ್ದಾರೆ. ಕ್ಷೇತ್ರದ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಶ್ರಮಿಸಲಾಗುತ್ತಿದೆ. ಫಲಿತಾಂಶ ಸುಧಾರಣೆಗೆ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

    ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಮಾತನಾಡಿ, ಶಿಕ್ಷಕರು ಪರಸ್ಪರ ಕಚ್ಚಾಟ ಬಿಟ್ಟು, ವಿದ್ಯಾರ್ಜನೆಗೆ ಆದ್ಯತೆ ನೀಡಬೇಕು. ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ. ಹೀಗಾಗಿ ಗುರುಗಳು ಎಲ್ಲರಿಗೂ ಆದರ್ಶವಾಗಿರಬೇಕು ಎಂದು ಕಿವಿಮಾತು ಹೇಳಿದರು.

    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶರಣಗೌಡ ಪೊಲೀಸ್ ಪಾಟೀಲ್ ಮಾತನಾಡಿದರು. ಭರತನೂರಿನ ಶ್ರೀ ಚಿಕ್ಕ ಗುರುನಂಜೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ ಪಂಚಾಳ, ಪ್ರಧಾನ ಕಾರ್ಯದರ್ಶಿ ಸಂತೋಷ ಕಲ್ಮೂಡ, ಪ್ರಮುಖರಾದ ಮಹೇಶ ಹೂಗಾರ, ಶಿವುಕುಮಾರ ಶಾಸ್ತಿç, ರಮೇಶ ರಾಠೋಡ್, ಶಿವಲಿಂಗಪ್ಪ ಗೌಳಿ, ಅನೀಲ ರಾಠೋಡ್, ಮಹಾಂತಯ್ಯ ಕಂಠಿಮಠ, ಸಿದ್ರಾಮ ದಂಡಗುಲಕರ್, ಅಣ್ಣಾರಾವ ಪಾಟೀಲ್ ಇತರರಿದ್ದರು.
    ಉತ್ತಮ ಶಿಕ್ಷಕರಿಗೆ ಸೇವಾ ರತ್ನ ಪ್ರಶಸ್ತಿ ಹಾಗೂ ನಿವೃತ್ತ ಶಿಕ್ಷಕರನ್ನು ಸತ್ಕರಿಸಲಾಯಿತು.

    ಕ್ಲರ್ಕ್ ಹಿಡಿದು, ಕಸಗೂಡಿಸುವವರೆಗೂ ಎಲ್ಲ ಕೆಲಸವನ್ನು ಶಿಕ್ಷಕರಿಗೆ ವಹಿಸಲಾಗುತ್ತಿದೆ. ಇನ್ನು ಮಕ್ಕಳಿಗೆ ಬಾಳೆಹಣ್ಣು, ಚಕ್ಕಿ, ಮೊಟ್ಟೆ ವಿತರಣೆ ಮಾಡುವುದು, ಬಿಸಿಯೂಟ ಬಡಿಸುವ ಕೆಲಸವೂ ಮಾಡಬೇಕು. ಹೀಗಿದ್ದಾಗ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ ? ತಿಗಣೆ ತುಂಬಿದ ತೊಟ್ಟಿಲಲ್ಲಿ ಕೂಸನ್ನು ಮಲಗಿಸಿ ಜೋಗುಳ ಹಾಡಿದಂತಾಗಿದೆ ಶಿಕ್ಷಕರ ಸ್ಥಿತಿದೆ. ಮೊದಲು ಶಿಕ್ಷಕರ ಮೇಲಿನ ಒತ್ತಡ ಕಮ್ಮಿ ಮಾಡಬೇಕು.
    | ಮಲ್ಲಯ್ಯ ಗುತ್ತೇದಾರ್, ಜಿಲ್ಲಾಧ್ಯಕ್ಷ, ಪ್ರಾಥಮಿಕ ಶಾಲಾ ಶಿP್ಷÀಕರ ಸಂಘ, ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts