More

    ನಾಟಕಗಳ ಉಳಿವಿಗೆ ಶ್ರಮಿಸಿ

    ಹುನಗುಂದ: ರಂಗ ಕಲೆ ಜೀವಂತಿಕೆಗೆ ಕಲಾವಿದರ ಕೊಡುಗೆ ಅಪಾರವಾಗಿದೆ. ನಾಟಕಗಳು ಸಮಾಜ ತಿದ್ದುವ ಕಾರ್ಯ ಮಾಡುತ್ತಿವೆ ಎಂದು ಇಳಕಲ್ಲ ಗುರುಮಹಾಂತ ಸ್ವಾಮಿಗಳು ಹೇಳಿದರು.

    ಪಟ್ಟಣದ ವಿ.ಮ. ಹೈಸ್ಕೂಲ್‌ನಲ್ಲಿ ಹೊನ್ನಗುಂದ ಸಾಹಿತ್ಯ ಸಂಸ್ಕೃತಿಕ ಬಳಗ, ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಗುರವಾರ ಆಯೋಜಿಸಿದ್ದ ಹೊಸಬ ನಾಟಕೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ನಾಟಕ ಕಲೆ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕಿದೆ. ನಮ್ಮ ಕಲೆ ಸಂಸ್ಕೃತಿ ಉಳಿಸಿ, ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಕಲೆ ಸಾಹಿತ್ಯ, ಸಂಸ್ಕೃತಿಗಳ ಪೋಷಿಸುವ ಕಾರ್ಯವಾಗಬೇಕಾಗಿದೆ ಎಂದರು.

    ವಿಮ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಸಬ ಅಧ್ಯಕ್ಷ ಮಹಾಂತೇಶ ಅಗಸಿಮುಂದಿನ, ತಾಪಂ ಇಒ ಮುರಳೀಧರ ದೇಶಪಾಂಡೆ, ಸಂಗಣ್ಣ ಚಲವಾದಿ, ಎಂ.ಎಸ್. ಮಠ, ಅರುಣ ದುದ್ದಗಿ, ಶ್ರೀಶೈಲ ಗೊಲಗೊಂಡ, ಇಮಾಬ್ ಕರಡಿ, ಶಾಮಸುಂದರ ಕುಲಕರ್ಣಿ, ಮಲ್ಲಿಕಾರ್ಜುನ ದರಗಾದ, ಕೃಷ್ಣ ಜಾಲಿಹಾಳ, ಎಂ.ಎಸ್. ಮಠ, ಬಸವರಾಜ ಕೆಂದೂರ ಇತರರಿದ್ದರು.

    ನಿನಾಸಂ ತಂಡದಿಂದ ಚಂದ್ರಶೇಖರ ಕಂಬಾರರ ಹುಲಿಯ ನೆರಳು ನಾಟಕ ಪ್ರದರ್ಶನ ನಡೆಯಿತು. ವಿಜಯ ಕುಲಕರ್ಣಿ ಸಂಗಡಿಗರು ರಂಗಗೀತೆ ಹಾಡಿದರು.
    ಇಬ್ರಾಹಿಂ ನಾಯಕ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts