More

    ಕನಿಷ್ಠ ವೇತನ ಜಾರಿಗೆ ಬಿಸಿಯೂಟ ನೌಕರರ ಒತ್ತಾಯ

    ಹುಬ್ಬಳ್ಳಿ : ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕೆಲಸ ಮಾಡುವ ನೌಕರರ ವೇತನ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃದ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ನೂರಾರು ಸದಸ್ಯರು ಇಲ್ಲಿನ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಚೇರಿ ಸಮೀಪ ಮಂಗಳವಾರದಂದು ಪ್ರತಿಭಟನೆ ನಡೆಸಿದರು.

    ಕೇಂದ್ರ ಸರ್ಕಾರ ಮಕ್ಕಳು ಹಾಗೂ ಮಹಿಳೆಯರ ವಿರೋಧಿ ನೀತಿ ಅನಸುರಿಸುತ್ತಿದೆ. ಭಾರತೀಯ ಕಾರ್ವಿುಕ ಸಮ್ಮೇಳನದ ಶಿಪಾರಸ್ಸಿನಂತೆ ಯೋಜನಾ ಕಾರ್ವಿುಕರಿಗೆ ಕನಿಷ್ಟ ವೇತನ ಸೇವಾ ಸೌಲಭ್ಯ ಜಾರಿಮಾಡಬೇಕು. ನಿವೃತ್ತರಾಗುವ ನೌಕರರಿಗೆ ಇಡಿಗಂಟು ನೀಡಬೇಕು. ರಾಜ್ಯ ಸರ್ಕಾರ ನೀಡಿದ ಭರವಸೆಯಂತೆ ಆರನೇ ಗ್ಯಾರಂಟಿಯಾದ ಸ್ಕೀಂ ನೌಕರರ ವೇತನ ಹೆಚ್ಚಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.

    ರೈತ ಮುಖಂಡ ಬಿ.ಎಸ್. ಸೊಪ್ಪಿನ, ಅಮೃತ ಇಜಾರಿ, ವಿರೇಶ ಸೋಬರದಮಠ ಹಾಗೂ ಇತರರು ಮಾತನಾಡಿದರು.

    ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸಚಿವರ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಅಧ್ಯಕ್ಷ ಬಿ.ಐ. ಈಳಿಗೇರ, ಗುರುಸಿದ್ದಪ್ಪ ಅಂಬಿಗೇರ, ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಚನ್ನಮ್ಮ ಡೊಳ್ಳಿನ, ಸುನಂದಾ ಚಿಗರಿ, ಫಕ್ಕೀರವ್ವ ತೆಂಬದಮನಿ, ಯಮನವ್ವ ಮಾದರ, ಲಕ್ಷ್ಮೀ ಕರೆಬರಬಣ್ಣವರ, ವಿಮಲಾ ದೇಶಮುಖ, ಈರಮ್ಮ ಕುಲಕರ್ಣಿ, ಕಲಾವತಿ ಲಕಮಾಪೂರ, ಶೋಭಾ ನಾಗನೂರ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts