More

    ವಿದ್ಯಾರ್ಥಿಗಳೇ ಒತ್ತಡಕ್ಕೊಳಗಾಗಬೇಡಿ… ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಇಲ್ಲಿವೆ ಯುಜಿಸಿ ಸಲಹೆಗಳು

    ನವದೆಹಲಿ: ದೇಶಾದ್ಯಂತ ಲಾಕ್​ಡೌನ್​ ಆಗಿದೆ. ಏಪ್ರಿಲ್​ 14ರ ನಂತರ ದಿಗ್ಬಂಧನ ತೆರವಾಗುತ್ತೋ ಇಲ್ಲವೋ ಇನ್ನೂ ಖಚಿತವಾಗಿಲ್ಲ. ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಶೈಕ್ಷಣಿಕ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿವೆ. ಹೀಗಾಗಿ ಈ ಅವಧಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಒತ್ತಡ ನಿವಾರಿಸಲು ಹಾಗೂ ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಕೆಲ ನಿರ್ದೇಶನಗಳನ್ನು ನೀಡಿದೆ.
    ವಿದ್ಯಾರ್ಥಿ ಸಮುದಾಯದಲ್ಲಿ ಉಂಟಾಗುತ್ತಿರುವ ಒತ್ತಡ ಹಾಗೂ ಭೀತಿಯ ವಾತಾವರಣವನ್ನು ನಿವಾರಿಸಲು ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು ಕೆಲ ಕ್ರಮಗಳನ್ನು ಕೈಗೊಳ್ಳುವಂತೆ ಯುಜಿಸಿ ಸುತ್ತೋಲೆ ಹೊರಡಿಸಿದೆ.

    * ಸಹಾಯವಾಣಿ ಸ್ಥಾಪಿಸಿ
    ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಒತ್ತಡ ನಿವಾರಣೆ, ಮಾನಸಿಕ ಆರೋಗ್ಯ ಕಾಪಾಡಲು ಸಹಾಯವಾಣಿಗಳನ್ನು ಆರಂಭಿಸುವಂತೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ ಆಪ್ತ ಸಮಾಲೋಚಕರು ಹಾಗೂ ಬೋಧಕ ವರ್ಗದವರನ್ನು ನೇಮಿಸುವಂತೆ ಸೂಚಿಸಲಾಗಿದೆ.

    * ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ
    ವಿದ್ಯಾರ್ಥಿಗಳು ಒತ್ತಡಹಿತವಾಗಿ ಇರುವಂತೆ ಮನವಿ ಮಾಡಿಕೊಳ್ಳಬೇಕು. ಅವರೊಮದಿಗೆ ಸಂವಾದ ನಡೆಸಬೇಕು, ಪತ್ರಗಳನ್ನು ಬರೆಯುವುದು ಮೊದಲಾದ ಕಾರ್ಯಗಳನ್ನು ನಡೆಸುವುದು. ಇದಕ್ಕಾಗಿ ಇಮೇಲ್​, ಡಿಜಿಟಲ್​ ಹಾಗೂ ಸೋಷಿಯಲ್​ ಮಿಡಿಯಾಗಳನ್ನು ಬಳಕೆ ಮಾಡಿಕೊಳ್ಳುವುದು.

    * ಕೋವಿಡ್​-19 ಹೆಲ್ಪ್​ ಗ್ರೂಪ್​ ರಚನೆ
    ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್​ ವಾರ್ಡನ್​ ಅಥವಾ ಹಿರಿಯ ಬೋಧಕರ ನೇತೃತ್ವದಲ್ಲಿ ಕೋವಿಡ್​-19 ಹೆಲ್ಪ್​ ಗ್ರೂಪ್​ಗಳನ್ನು ರಚಿಸುವುದು. ಈ ಮೂಲಕ ಸಹಾಯ ಅಗತ್ಯವಿರುವ ವಿದ್ಯಾರ್ಥಿಗಳನ್ನು ಗುರುತಿಸುವುದು.

    * ವಿಡಿಯೋ ಶೇರ್​ ಮಾಡಿ
    ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೇಂದ್ರ ಆರೋಗ್ಯ ಸಚಿವಾಲಯದ ವೆಬ್​ಸೈಟ್​ www.mohfw.gov.in ನಲ್ಲಿರುವ ವಿಡಿಯೋಗಳನ್ನು ಕಾಲೇಜಿನ ವೆಬ್​ಸೈಟ್​ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡುವುದು. ಇದಲ್ಲದೇ ಮಾನಸಿಕ ಆರೋಗ್ಯ, ಒತ್ತಡ ನಿಭಾಯಿಸುವ ಕುರಿತು ವಿವಿಧ ವಲಯಗಳ ಪರಿಣತರುನಿಡಿರುವ ಸಲೆಹಗಳ ಕುರಿತಾದ ವಿಡಿಯೋಗಳ ಲಿಂಕ್​ಅನ್ನು ಯುಜಿಸಿ ಒದಗಿಸಿದೆ.

    ಎಸ್‌ಡಿಎ ಹುದ್ದೆಗೆ ಅರ್ಜಿ ಸಲ್ಲಿಸಿಲ್ವಾ?, ಬೇಜಾರ್​ ಮಾಡ್ಕೋಬೇಡಿ.. ಕೊನೇ ದಿನ ಏ.30 ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts