More

    ಎಸ್‌ಸಿ-ಎಸ್‌ಟಿಗಳಿಗೆ ಶುಲ್ಕ ವಿನಾಯಿತಿ: ಯುಜಿಸಿ ಮಾರ್ಗಸೂಚಿ

    ಬೆಂಗಳೂರು: ವಿಶ್ವವಿದ್ಯಾಲಯ ಧನಸಹಾಯ ಆಯೋಗದಡಿ (ಯುಜಿಸಿ) ಕಾರ್ಯನಿರ್ವಹಿಸುವ ಯಾವುದೇ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಹಾಗೂ ನೇಮಕಾತಿ ಪರೀಕ್ಷೆಗಳಿಗೆ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳು ಅರ್ಜಿಶುಲ್ಕ ಪಾವತಿಸಬೇಕಿಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದ್ದು, ಗೊಂದಲಗಳ ನಿವಾರಣೆಗೆ ಕರಡು ಮಾರ್ಗಸೂಚಿ ಹೊರಡಿಸಿದೆ.

    ಎಸ್‌ಸಿಗಳಿಗೆ ಶೇ.15, ಎಸ್‌ಟಿಗಳಿಗೆ ಶೇ.7.5, ಹಿಂದುಳಿದ ವರ್ಗಗಳಿಗೆ (ಕೆನೆಪದರವಲ್ಲದ) ಶೇ.27 ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ಒದಗಿಸಿದ್ದು, ಅಂಗವಿಕಲ ಅಭ್ಯರ್ಥಿಗಳಿಗೂ ಶುಲ್ಕ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ 2006ರಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಮಾರ್ಗಸೂಚಿ ನೀಡಿತ್ತು. ಆದರೂ ವಿವಿಗಳು ಮೀಸಲಾತಿಯಲ್ಲಿ ವಿಭಿನ್ನ ನಿಯಮಗಳನ್ನು ಅನುಸರಿಸುತ್ತಿವೆ. ಹಾಗಾಗಿ, 2019ರಲ್ಲಿ ಸಂಸತ್ತು ಅಂಗೀಕರಿಸಿದ ತಿದ್ದುಪಡಿ ಆಧರಿಸಿ ಮೀಸಲಾತಿ ನೀತಿಗೆ ಹೊಸ ನಿಬಂಧನೆಗಳನ್ನು ಸೇರಿಸಲಾಗಿದ್ದು, ಸ್ಟೇಕ್‌ಹೋಲ್ಡರ್‌ಗಳು ಪ್ರತಿಕ್ರಿಯೆ ಸಲ್ಲಿಸಲು ಜ.30ರವರೆಗೆ ಯುಜಿಸಿ ಅವಕಾಶ ಕಲ್ಪಿಸಿದೆ.

    ಮತಾಂತರವಾದರೆ ಮೀಸಲಾತಿ ಬಂದ್ 
    ಅಸ್ತಿತ್ವದಲ್ಲಿರುವ ನೀತಿಯ ಪ್ರಕಾರ, ದಲಿತರು ಹಿಂದು, ಸಿಖ್ ಅಥವಾ ಬೌದ್ಧ ಧರ್ಮ ಹೊರತುಪಡಿಸಿ ಅನ್ಯ ಧರ್ಮಗಳಿಗೆ ಮತಾಂತರಗೊಂಡರೆ ಅಂಥವರಿಗೆ ಸಿಗುವ ಮೀಸಲಾತಿ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಮತಾಂತರಗೊಂಡವರು ಮರಳಿ ಸ್ವ-ಧರ್ಮವನ್ನು ಸ್ವೀಕರಿಸಿದರೆ, ಅದನ್ನು ಆಯಾ, ಜಾತಿಯ/ಧರ್ಮದವರು ಪುರಸ್ಕರಿಸಿ ಒಪ್ಪಿಕೊಂಡರೆ ಸೌಲಭ್ಯಗಳು ದೊರೆಯುತ್ತವೆ. 

    Jobs: ಆರ್‌ಪಿಎಫ್​​​​ನಲ್ಲಿ 2,250 ಕಾನ್‌ಸ್ಟೆಬಲ್, ಎಸ್‌ಐ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts