More

    ಇದು ಹೃದಯದ ವಿಷ್ಯವೋ ಶಿಷ್ಯ, ಕೋವಿಡ್​-19ರಿಂದ ಏನಾಗ್ತಿದೆ ನೋಡೋ ಮನುಷ್ಯ!

    ನವದೆಹಲಿ: ಕೋವಿಡ್​-19 ಪಿಡುಗಿನಿಂದಾಗಿ ಸಾಯುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಈ ಪಿಡುಗಿನ ಸಂದರ್ಭದಲ್ಲಿ ಹೆಚ್ಚಿನದಾಗಿ ಕಾಡುತ್ತಿರುವ ಮತ್ತೊಂದು ಸಮಸ್ಯೆ ಒಡೆದ ಹೃದಯದ್ದಾಗಿದೆ!

    ಹೌದು. ಇದು ಒಡೆದ ಹೃದಯದ ಮಾತು. ಅಂದರೆ ಪ್ರೀತಿ-ಪ್ರೇಮ ವೈಫಲ್ಯವಾಗಿಯೋ ಅಥವಾ ವಿಚ್ಛೇದನ ಇಲ್ಲವೇ ಬ್ರೇಕ್​ಅಪ್​ಗಳಿಂದ ಒಡೆದ ಹೃದಯದ ಮಾತಲ್ಲ. ಇದನ್ನು ಇಂಗ್ಲಿಷ್​ನಲ್ಲಿ Broken Heart Syndrome ಎಂದು ಕರೆಯಲಾಗುತ್ತದೆ.

    ಸ್ಟ್ರೆಸ್​ ಕಾರ್ಡಿಯೋಮೈಯೋಪಥಿ (ಒಡೆದ ಹೃದಯ) ಸಮಸ್ಯೆಯು ಭೌತಿಕ ಅಥವಾ ಭಾವನಾತ್ಮಕ ಒತ್ತಡಗಳಿಂದ ಉಂಟಾಗುತ್ತದೆ. ಇದರಿಂದ ಹೃದಯದ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ ಇಲ್ಲವೇ ಸಮರ್ಪಕ ಕಾರ್ಯನಿರ್ವಹಣೆಯಲ್ಲಿ ವಿಫಲವಾಗುತ್ತವೆ. ಈ ಸಮಸ್ಯೆಗೆ ತುತ್ತಾದವರಲ್ಲಿ ಹೃದಯಾಘಾತದ ಲಕ್ಷಗಳು ಕಾಣುತ್ತವೆ. ಅಂದರೆ ಎದೆ ನೋವು ಮತ್ತು ಉಸಿರಾಟದ ಸಮಸ್ಯೆ. ಹಾಗೆಂದು ಕೊರೊನರಿ ಆರ್ಟರಿಗಳಲ್ಲಿ ಬ್ಲಾಕೇಜ್​ ಇರುವುದಿಲ್ಲ. ಎಡ ಹೃದಯ ಕುಹರ ಸ್ವಲ್ಪ ಹಿಗ್ಗಿದಂತಾಗಬಹುದು. ಅನಿಯಮಿತ ಹೃದಯ ಬಡಿತ, ಪ್ರಜ್ಞೆ ತಪ್ಪುವಿಕೆ, ಕಡಿಮೆ ರಕ್ತದೊತ್ತಡ ಮತ್ತು ಕಾರ್ಡಿಯೋಜೆನಿಕ್​ ಶಾಕ್​ (ಹೃದಯದ ಸ್ನಾಯುಗಳು ಸಂಕುಚಿತಗೊಂಡು ಗಡಸಾಗುವುದರಿಂದ ದೇಹದ ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ಹೃದಯ ರಕ್ತವನ್ನು ಪಂಪ್​ ಮಾಡದೇ ಹೋಗಬಹುದು) ಉಂಟಾಗಹುಬಹುದು.

    ಇದು ಒತ್ತಡದಿಂದ ಉಂಟಾಗುವುದರಿಂದ ವ್ಯಕ್ತಿ ಸಾಯುವ ಸಾಧ್ಯತೆಯೂ ಇರುತ್ತದೆ. ಆದರೆ, ಹಲವು ಪ್ರಕರಣಗಳಲ್ಲಿ ಜನರು ಒಂದೆರಡು ದಿನ ಅಥವಾ ವಾರದಲ್ಲಿ ಚೇತರಿಸಿಕೊಂಡ ಸಾಕಷ್ಟು ಉದಾಹರಣೆಯೂ ನಮ್ಮ ಮುಂದಿದೆ.

    ಜನರಲ್ಲಿ ಕರೊನಾ ಸೋಂಕು ಇಲ್ಲದೇ ಹೋದರೂ ಬಹುತೇಕರಲ್ಲಿ ಒಡೆದ ಹೃದಯದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಪಿಡುಗಿನಿಂದ ಉಂಟಾಗಿರುವ ಭೌತಿಕ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳೇ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

    ಇದನ್ನೂ ಓದಿ: ಭರವಸೆ ಬೇಡ, ಸಮಸ್ಯೆ ಪರಿಹರಿಸಿ : ಆಶಾ ಕಾರ್ಯಕರ್ತೆಯರ ಪಟ್ಟು

    ಅಮೆರಿಕದ ಒಹಿಯೋದಲ್ಲಿ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. 2020ರ ಮೊದಲ ಭಾಗದಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದವರು ಮಾಹಿತಿಯನ್ನು ಕಳೆದೆರಡು ವರ್ಷಗಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದವರ ವಿವರಗಳೊಂದಿಗೆ ತಾಳೆ ಹಾಕಿದಾಗ ಈ ಅಂಶ ದೃಢಪಟ್ಟಿದೆ. ಈ ಮಾಹಿತಿಯ ಪ್ರಕಾರ ಕೋವಿಡ್​ನಂಥ ಪಿಡುಗಿನ ಸಂದರ್ಭದಲ್ಲಿ ಒಡೆದ ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

    ಕೋವಿಡ್​ ಪಿಡುಗು ಒಂದು ರೀತಿಯಲ್ಲಿ ಸಮನಾಂತರವಾದ ಪರ್ಯಾಯ ಪರಿಸ್ಥಿತಿಗೆ ಕಾರಣವಾಗಿದೆ. ಆ ಪರಿಸ್ಥಿತಿ ಅಷ್ಟೊಂದು ಆರೋಗ್ಯಪೂರ್ಣವಾಗಿ ಕಾಣುತ್ತಿಲ್ಲ. ಭಾವಾನತ್ಮಕ ಅಂತರ ಮತ್ತು ಆರ್ಥಿಕ ಪರಿಣಾಮಗಳು ತುಂಬಾ ಅನಾರೋಗ್ಯಕರವಾಗಿದೆ. ಇದರಿಂದಾಗಿ ಕರೊನಾ ಸೋಂಕಿನ ಹೊರತಾಗಿ ಹೆಚ್ಚಿನ ಸಾವುಗಳಿಗೆ ಇದು ಕಾರಣವಾಗುತ್ತಿದೆ. ಅಂದರೆ, ಕೋವಿಡ್​ ಪಿಡುಗಿನಿಂದಾಗಿ ಒತ್ತಡದ ಕಾರ್ಡಿಯೋಮೈಯೋಪಥಿ (ಒಡೆದ ಹೃದಯ) ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ ಎಂದು ಈ ಅಧ್ಯಯನದ ತಂಡದಲ್ಲಿರುದ್ದ ಹೃದ್ರೋಗ ತಜ್ಞ ಡಾ. ಅಂಕುರ್​ ಕಾರ್ಲಾ ವಿವರಿಸಿದ್ದಾರೆ.

    ಚೀನಾ ಮೇಲೆ ಕಣ್ಣು; ಭಾರತ, ಅಮೆರಿಕ ಮತ್ತು ಜಪಾನ್​ ಜತೆ ಆಸ್ಟ್ರೇಲಿಯಾದ ನೌಕಾ ಸಮರಾಭ್ಯಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts