More

    ಭರವಸೆ ಬೇಡ, ಸಮಸ್ಯೆ ಪರಿಹರಿಸಿ : ಆಶಾ ಕಾರ್ಯಕರ್ತೆಯರ ಪಟ್ಟು

    ಚಿಕ್ಕಬಳ್ಳಾಪುರ: ಗೌರವಧನ ಹೆಚ್ಚಳ ಮತ್ತು ವಿವಿಧ ಸವಲತ್ತುಗಳನ್ನು ಒದಗಿಸಲು ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಕೆಲಸದಿಂದ ದೂರ ಉಳಿದು ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು, ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದರು.ಗೌರವಧನ ಹೆಚ್ಚಳ, ವಿವಿಧ ಭತ್ಯೆ, ಉದ್ಯೋಗ ಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಜನವರಿಯಿಂದಲೇ ಗಮನ ಸೆಳೆಯಲಾಗುತ್ತಿದೆ. ಹಲವು ಬಾರಿ ಹೋರಾಟಗಳನ್ನು ಕೈಗೊಳ್ಳಲಾಗಿದೆ. ಆದರೆ ಭರವಸೆ ನೀಡಿ ನುಣುಚಿಕೊಳ್ಳಲಾಗಿದೆಯೋ ಹೊರತು ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕರೊನಾ ಜಾಗೃತಿ, ಸೋಂಕಿತರ ಸಮೀಕ್ಷೆ ಸೇರಿ ವಿವಿಧ ಕಾರ್ಯಗಳಲ್ಲಿ ಕಾರ್ಯಕರ್ತೆಯರು ತೊಡಗಿದ್ದಾರೆ, ಆದರೆ, ಸೂಕ್ತ ಸುರಕ್ಷತೆ ಕೊಟ್ಟಿಲ್ಲ. ಸೋಂಕು ತಗುಲುವ ಆತಂಕ ಹೆಚ್ಚಾಗಿದೆ. ಇದರ ನಡುವೆ ಅಲ್ಲಲ್ಲಿ ಹಲ್ಲೆಗಳೂ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಘಟನೆ ತಾಲೂಕು ಅಧ್ಯಕ್ಷ ಮಮತಾರೆಡ್ಡಿ, ಪದಾಧಿಕಾರಿಗಳಾದ ದೀಪಾ, ಸರಸ್ವತಮ್ಮ, ಲಕ್ಷ್ಮೀ, ಸುಜಾತಾ, ಪಂಕಜಾ, ಮಂಜುಳಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts