More

    ಒತ್ತುವರಿ ಜಾಗ ವಶಕ್ಕೆ ಪಡೆಯುವಂತೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಆಗ್ರಹ

    ಗಂಗಾವತಿ: ಸರ್ಕಾರ ಆದೇಶದಂತೆ ಗ್ರಾಪಂ ವ್ಯಾಪ್ತಿಯ ಒತ್ತುವರಿ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ತಾಪಂ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ವ್ಯವಸ್ಥಾಪಕಿ ಉಷಾರಾಣಿಗೆ ಮನವಿ ಸಲ್ಲಿಸಿದರು.

    ಪಕ್ಷದ ತಾಲೂಕು ಅಧ್ಯಕ್ಷ ಶರಣಪ್ಪ ಸಜ್ಜಿಹೊಲ ಮಾತನಾಡಿ, ಒತ್ತುವರಿಯಾಗಿರುವ ಜಾಗವನ್ನು ವಶಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಸರ್ಕಾರವೂ ಸುತ್ತೋಲೆ ಹೊರಡಿಸಿದೆ. ಆದರೆ ಒತ್ತುವರಿ ಜಾಗ ವಶಪಡಿಸಿಕೊಳ್ಳುವಲ್ಲಿ ಗ್ರಾಪಂ ವಿಲವಾಗಿದ್ದು, ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಕೋಟ್ಯಂತರ ರೂ.ಬೆಲೆ ಬಾಳುವ ಸರ್ಕಾರದ ಆಸ್ತಿ ಪ್ರಭಾವಿಗಳ ಪಾಲಾಗಿದ್ದು, ತಾಲೂಕಿನ 18 ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸರ್ಕಾರಿ ಆಸ್ತಿ ಒತ್ತುವರಿಯಾಗಿದೆ. ಸರ್ಕಾರಿ ಆಸ್ತಿ ಪೂರ್ಣ ವಿವರವನ್ನು ಸಾರ್ವಜನಿಕ ಮಾಹಿತಿಗೆ ತರಬೇಕಿದ್ದು, ನಿರ್ಲಕ್ಷ್ಯಿಸುವ ಪಿಡಿಒ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

    ಜಿಲ್ಲಾ ಸಂಚಾಲಕ ಹುಸೇನ್‌ಸಾಬ್ ಗಂಗನಾಳ್, ಮುಖಂಡರಾದ ಚನ್ನಬಸವ ಜೇಕಿನ್, ಪರಶುರಾಂಒಡೆಯರ್, ಸಲ್ಮಾನ್, ಬಿ.ಪ್ರಕಾಶ, ಭೋಗೇಶ ಆನೆಗೊಂದಿ, ರವಿಚಂದ್ರ, ವಿರುಪಣ್ಣ, ಶಾರೂಕ್‌ಖಾನ್, ಬಸಮ್ಮ, ಗೌರಿ, ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts