More

    ಬೀದಿ ದೀಪ ನಿರ್ವಹಣೆ ಗುತ್ತಿಗೆ! ಆರ್ಥಿಕ ಬಿಡ್ ತೆರೆಯುವ ಪೂರ್ವದಲ್ಲೇ ಗುತ್ತಿಗೆ ದರಕ್ಕೆ ಅನುಮೋದನೆ ನೀಡಿದ ನಗರಸಭೆ

    24 ಗಂಟೆ ಒಳಗಾಗಿ ಉತ್ತರಿಸಿದಿದ್ದರೆ ಕೆಸಿಎಸ್​ ನಿಯಮಗಳ ಪ್ರಕಾರ ಅಗತ್ಯ ಶಿಸ್ತು ಕ್ರಮ ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಡಳಿತ

    ಶಿವಾನಂದ ಹಿರೇಮಠ ಗದಗ
    ಬೀದಿ ದೀಪ ನಿರ್ವಹಣೆ ಗುತ್ತಿಗೆ ಆರ್ಥಿಕ ಬಿಡ್​ ತೆರೆಯುವ ಪೂರ್ವದಲ್ಲೇ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಮಂಡಿಸಿ ಗುತ್ತಿಗೆ ದರಕ್ಕೆ ನಗರಸಭೆ ಅನುಮೋದನೆ ನೀಡಿದನ್ನು ಜಿಲ್ಲಾಡಳಿತ ಪತ್ತೆ ಹಚ್ಚಿದೆ. ಗುತ್ತಿಗೆಯಲ್ಲಿ ನಡೆದ ಅಕ್ರಮ ಕುರಿತು ವಿಜಯವಾಣಿ ದಿನಪತ್ರಿಕೆ ನಿರಂತರ ವರದಿ ಬಿತ್ತರಿಸುತ್ತಿದ್ದಂತೆ, ಬೀದಿ ದೀಪ ನಿರ್ವಹಣೆ ಗುತ್ತಿಗೆ ನೀಡಿರುವ ದಾಖಲೆಗಳನ್ನು ಸಂಪೂರ್ಣ ಜಾಲಾಡಿರುವ ಜಿಲ್ಲಾಡಳಿತಕ್ಕೆ ಗುತ್ತಿಗೆ ಪ್ರಕ್ರಿಯೆಯಲ್ಲಿ ನಡೆದಿರುವ ಲೋಪದೋಷಗಳ ಸಂಪೂರ್ಣ ಮಾಹಿತಿ ಕಲೆ ಹಾಕಿದೆ. ಪೌರಸಭೆ ಅಧಿನಿಯಮ 1964ರ ಉಲ್ಲಂಘನೆ ಆಗಿರುವುದು ಕಂಡು ಬಂದಿದ್ದು ನಗರಸಭೆ ಪೌರಾಯುಕ್ತ ಗಂಗಪ್ಪ ಎಂ ಹಾಗೂ ಕಾರ್ಯಪಾಲಕ ಅಭಿಯಂತರ ಎಚ್​. ಬಂಡಿವಡ್ಡರ ಅವರಿಗೆ ಕಾರಣ ಕೇಳಿ ನೋಟೀಸ್​ ನೀಡುವುದರ ಮೂಲಕ ಚಾಟಿ ಬೀಸಿದೆ. ನೋಟಿಸ್​ಗೆ 24 ಗಂಟೆ ಒಳಗಾಗಿ ಸೂಕ್ತ ಉತ್ತರ ನೀಡಿದಿದ್ದರೆ ಕೆಸಿಎಸ್​ ನಿಯಮಗಳ ಪ್ರಕಾರ ಅಗತ್ಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

    ನೋಟೀಸ್​ ನಲ್ಲಿ ಏನಿದೆ?

    • ನಿರ್ವಹಣಾ ಗುತ್ತಿಗೆಯ ಆಥಿರ್ಕ ಬಿಡ್​ ತೆರೆಯುವ ಪೂರ್ವದಲ್ಲೆ ಗುತ್ತಿಗೆ ದರಕ್ಕೆ ಅನುಮೋದನೆ ನೀಡಲಾಗಿದೆ. ನ.15, 2023ರ ರಂದು ಆರ್ಥಿಕ ಬಿಡ್​ ತೆರೆದಿದ್ದು, ಅದಕ್ಕೂ ಪೂರ್ವದಲ್ಲಿ ನ.30, 2023 ರಂದು ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ, ನಿರ್ಣಯಿಸಿರುವುದು ಕಂಡು ಬಂದಿದೆ.
    • ಟೆಂಡರ್​ ಪ್ರಕ್ರಿಯೆಯಲ್ಲಿ ಕೆಟಿಪಿಪಿ ನಿಯಮ ಉಲ್ಲಂಘನೆ, ಪೌರಸಭೆ ಅಧಿನಿಯಮ 1964ರ ಅನ್ವಯ ನಗರಸಭೆಯಲ್ಲಿ ವ್ಯತಿರಿಕ್ತ ನಿರ್ಣಯ ಹಾಗೂ ಕೌನ್ಸಿಲ್​ ಸೆಕ್ರೆಟ್ರಿ ಆಗಿಯೂ ಸಕ್ಷಮ ಪ್ರಾಧಿಕಾರಕ್ಕೆ ನಿಯಮಾನುಸಾರ ವರದಿ ಸಲ್ಲಿಸಿಲ್ಲ.
    • ಟೆಂಡರ್​ ಪಾರದರ್ಶಕ ನಿಯಮ ಉಲ್ಲಂನೆ, ಟೆಂಡರ್​ ಅನುಮೋದನೆ ಮತ್ತು ಕಾರ್ಯಾದೇಶ ನೀಡುವಲ್ಲಿಯೂ ನಿಯಮ ಉಲ್ಲಂಘನೆ.
    • ಟೆಂಡರ್​ನಲ್ಲಿ ಅಳವಡಿಸದೇ ಇರುವ ಹೆಚ್ಚುವರಿ 2746 ಎಲ್​ಇಡಿ ಬಲ್ಬ್​ ಹಾಗೂ ಇತರೆ ಬಲ್ಬಗಳ ನಿರ್ವಹಣೆ ಮಾಡಲು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಟೆಂಡರ್​ ನಿಯಮಾವಳಿ ಅವಕಾಶ ಇರುವುದಿಲ್ಲ. ಹೆಚ್ಚವರಿ ಕೆಲಸ ನೀಡಿ ವ್ಯತ್ಯಾಸದ ಹಣವನ್ನು ಪಾವತಿಸಲು ನಿರ್ನಯಿಸಿರುವುವುದು ಕಂಡು ಬಂದಿರುತ್ತದೆ.
    • ಟೆಂಡರ್​ನಲ್ಲಿ ಭಾಗವಹಿಸಿ ಕಡಿಮೆ ಮೊತ್ತಕ್ಕೆ ಬಿಡ್​ ಮಾಡಿದ್ದ(ಎಲ್​1) ಕೈಬಿಟ್ಟು, ಅದಕ್ಕಿಂತಲೂ ಅಧಿಕ ಮೊತ್ತಕ್ಕೆ ಬಿಡ್​ ಮಾಡಿದ (ಎಲ್​2) ಬಿಡ್​ ದಾರರಿಗೆ ಗುತ್ತಿಗೆ ನೀಡಲಾಗಿದೆ. ಸರ್ಕಾರಿ ನೌಕರರಾಗಿಯೂ ಆರ್ಥಿಕ ಬಿಡ್​ ತುಲನಾತ್ಮಕ ಪಟ್ಟಿಯನ್ನು ಕಾರ್ಯಪಾಲಕ ಅಭಿಯಂತರರು ಪರಿಶೀಲಿಸದೇ ಇರುವುದು ಕಂಡು ಬಂದಿದೆ.
    • ನೀವು(ಪೌರಾಯುಕ್ತರು) ಜವಾಬ್ದಾರಿಯುತ ಅಧಿಕಾರಿಯಾಗಿ ಸಾರ್ವಜನಿಕ ತೆರಿಗೆ ಹಣದಲ್ಲಿ ಸಾರ್ವಜನಿಕರಿಗೆ ನೀಡುವ ಮೂಲಭೂತ ಸೌಲಬ್ಯವಾದ ಬೀದಿ ದೀಪ ಅಳವಡಿಕೆ, ನಿರ್ವಹಣೆ ಸಂಬಂಧಿಸಿದಂತೆ ನಗರಸಭೆಗೆ ಹೆಚ್ಚಿನ ಆಥಿರ್ಕ ಹೊರೆಯೊಂದಿಗೆ ಹಾಗೂ ಪಾರದರ್ಶಕ ನಿಯಮ ಉಲ್ಲಂಘಿಸಿರುವುದು ಕಂಡು ಬರುತ್ತದೆ.
    • ನೀವು (ಪೌರಾಯುಕ್ತರು) ಲಿಖಿತ ಹೇಳಿಕೆಯನ್ನು ಅಗತ್ಯ ದಾಖಲೆಗಳೊಂದಿಗೆ 24 ಗಂಟೆ ಒಳಗಾಗಿ ಸಲ್ಲಿಸಬೇಕು. ತಪ್ಪಿದಲ್ಲಿ ನಿಮ್ಮ ಹೇಳಿಕೆ ಏನೂ ಇಲ್ಲವೆಂದು ಪರಿಗಣಿಸಿ ಕೆಸಿಎಸ್​ ನಿಯಮಗಳ ಪ್ರಕಾರ ಅಗತ್ಯ ಶಿಸ್ತುಕ್ರಮಕ್ಕೆ ಶಿಾರಸ್ಸು ಮತ್ತು ಕ್ರಮ ಜರುಗಿಸಲಾಗುವುದು.

    ಏನಿದು ಪ್ರಕರಣ?
    ಜಿಲ್ಲಾಧಿಕಾರಿಗಳ ಅನುಮೋದನೆ ಇಲ್ಲದೇ 1 ಕೋಟಿಗೂ ಅಧಿಕ ಮೊತ್ತಕ್ಕೆ ಬೀದಿ ದೀಪಗಳ ನಿರ್ವಹಣೆಗೆ ಟೆಂಡರ್​ ನೀಡಿದ್ದಲ್ಲದೇ, ತಾಂತ್ರಿಕ ಮಂಜೂರಾತಿಯನ್ನು 98 ಲಕ್ಷ ರೂ. ಗೆ ಪಡೆದು 1.37 ಕೋಟಿ ರೂ.ಗೆ ವಾಷಿರ್ಕ ನಿರ್ವಹಣೆಗೆ ಕಾರ್ಯಾನುದೇಶ ನೀಡಿರುವ ಪ್ರಕರಣ ಇದಾಗಿದೆ. ಇದರಿಂದ ನಗರಸಭೆಗೆ ಆರ್ಥಿಕ ಹೊರೆ ಆಗುವುದಲ್ಲದೇ ನಗರಸಭೆ ಅಧಿಕಾರಿಗಳ ಕರ್ತವ್ಯ ಲೋಪವು ಬೆಳಕಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts