More

    ರಸ್ತೆ ಬದಿಯ ಫುಡ್​ ಸ್ಟಾಲ್​ಗಳನ್ನು ಬ್ಯಾನ್​ ಮಾಡಲಿದೆಯಾ ಬಿಬಿಎಂಪಿ? ಇನ್ನು ಮುಂದೆ ತಿನ್ನೋಕೆ ಸಿಗಲ್ವಾ ಪಾನಿಪುರಿ-ಮಸಾಲಾಪುರಿ?

    ಬೆಂಗಳೂರು: ಪಾನಿಪುರಿ, ಮಸಾಲಪುರಿ, ಗೋಬಿ ಮಂಚೂರಿಯನ್​ ಮುಂತಾದ ಕಡಿಮೆ ಬೆಲೆಯ ತಿನಿಸುಗಳನ್ನು ಎಲ್ಲರೂ ಒಮ್ಮೆಯಾದರೂ ಚಪ್ಪರಿಸಿರುತ್ತಾರೆ. ಆದರೆ ಈಗ ಆ ಬಾಯಿರುಚಿ ಎಲ್ಲರಿಂದಲೂ ದೂರವಾಗುವ ಸಾಧ್ಯತೆ ಎದ್ದು ಕಾಣುತ್ತಿದೆ.

    ಬೃಹತ್​ ಬೆಂಗಳೂರು ಹೊಟೆಲ್​ ಒಕ್ಕೂಟ, ಬಿಬಿಎಂಪಿ ಕಮಿಷರ್​ಗೆ ರಸ್ತೆ ಬದಿಯ ತಿನಿಸು ವ್ಯಾಪಾರಿಗಳನ್ನು ನಿಯಂತ್ರಿಸಬೇಕು ಎಂದು ಪತ್ರ ಬರೆದಿದ್ದಾರೆ. ಹೊಟೆಲ್​ ಒಕ್ಕೂಟದ ಅಧ್ಯಕ್ಷ ಪಿಸಿ ರಾವ್​ ‘ಬಿಬಿಎಂಪಿ ರಸ್ತೆ ಬದಿ ವ್ಯಾಪಾರಿಗಳಿಗೆ ಫುಡ್ ಕೋರ್ಟ್ ಅಥವಾ ಇಂದಿರಾ ಕ್ಯಾಂಟೀನ್‌ನಲ್ಲಿ ಉದ್ಯೋಗ ಕೊಟ್ಟು ಪುನರ್ವಸತಿ ಕಲ್ಪಿಸಬೇಕೆಂದು ನಾವು ಬಯಸುತ್ತೇವೆ. ಬಿಬಿಎಂಪಿಯ ನಿರ್ಧಾರದಿಂದ ಅವರು ತೊಂದರೆ ಅನುಭವಿಸಬಾರದು. ಆದರೆ, ಸಾಮಾನ್ಯರ ಆರೋಗ್ಯ ಮತ್ತು ಸುರಕ್ಷತೆಯನ್ನು ಪರಿಗಣಿಸಿ ಅವರನ್ನು ಬೀದಿಯಲ್ಲಿ ವ್ಯಾಪಾರ ಮಾಡಲು ಬಿಡಬಾರದು. ಹಾಗೆಂದು ಅವರ ಹೊಟ್ಟೆ ಮೇಲೆ ಕಲ್ಲು ಹಾಕಲು ನಾವು ಬಯಸುವುದಿಲ್ಲ. ಈ ಬೀದಿ ವ್ಯಾಪಾರಿಗಳಲ್ಲಿ ಹೆಚ್ಚಿನವರು ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಮೊದಲು ನಮ್ಮ ಹೋಟೆಲ್‌ಗಳಲ್ಲಿ ಕೆಲಸ ಮಾಡಿದ್ದರು.’ ಎಂದು ಹೇಳಿದರು.

    ಕೆಲವು ತಿಂಗಳ ಹಿಂದೆ, ಬಿಬಿಎಂಪಿಯು ನಗರದಲ್ಲಿ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಸ್ತೆ ಬದಿ ಆಹಾರ ಮಾರಾಟ ಮಾಡುವ ವ್ಯಾಪಾರಿಗಳಿಗೆ ಕಡ್ಡಾಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. ಕಾರ್ಯಕ್ರಮದ ಪ್ರಕಾರ, ಆಹಾರ ಮಾರಾಟಗಾರರಿಗೆ ತರಬೇತಿ ನುಗುದ ಮೇಲೆ ಪ್ರಮಾಣಪತ್ರಗಳನ್ನು ನೀಡಬೇಕು. ಪ್ರಮಾನಪತ್ರಗಳನ್ನು ಅವರು ತಮ್ಮ ಗಾಡಿಗಳಲ್ಲಿ ಪ್ರದರ್ಶಿಸಬೇಕು ಎಂಬ ನಿಯಮ ಮಾಡಿತ್ತು. ಅದಷ್ಟೇ ಅಲ್ಲದೇ ಅವರಿಲ್ಲದೆ ಆಹಾರ ಮಾರಾಟ ಮಾಡಲು ಅನುಮತಿ ಇರುವುದಿಲ್ಲ.

    ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ರಸ್ತೆ ಬದಿ ವ್ಯಾಪಾರಿಗಳ ಅಧ್ಯಕ್ಷ ಮೊಹಮ್ಮದ್​ ಜಾವೇದ್​ ‘ನಗರದ ಬಹುತೇಕ ಬೀದಿಬದಿ ವ್ಯಾಪಾರಿಗಳಿಗೆ ಇದರ ಅರಿವಿಲ್ಲದೇ ಇದ್ದು ಅವರು ಬಿಬಿಎಂಪಿಯಿಂದ ತರಬೇತಿ ಪಡೆದಿಲ್ಲ’ ಎಂದು ಹೇಳಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts