ಕರೊನಾ ಲಾಕ್​ಡೌನ್​ ನಿಯಮ ಉಲ್ಲಂಘಿಸಿದವರಿಗೆ ಬಿಗ್​ರಿಲೀಫ್​? ದೂರು ವಾಪಸ್​ ಪಡೆಯಲು ಸರ್ಕಾರ ಚಿಂತನೆ

madhuswamy
Published on

ತುಮಕೂರು: ಕರೊನಾ ಲಾಕ್​ಡೌನ್​ ಸಂದರ್ಭದಲ್ಲಿ ರಸ್ತೆಗಿಳಿದ ಸಾರ್ವಜನಿಕರ ಮೇಲೆ ದಾಖಲಾದ ದೂರುಗಳನ್ನು ವಾಪಸ್​ ಪಡೆಯಲು ಸರ್ಕಾರ ಚಿಂತನೆ ನಡೆಸಿದೆ.

ಈ ಕುರಿತು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಪೊಲೀಸ್​ ಠಾಣೆ ಕಟ್ಟಡ ಉದ್ಘಾಟಿಸಲು ಬುಧವಾರ ಆಗಮಿಸಿದ್ದ ಮಾಧುಸ್ವಾಮಿ, ಈ ವೇಳೆ ಮಾತನಾಡುತ್ತಾ ಕರೊನಾ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿರುವ ಸಾವಿರಾರು ಪ್ರಕರಣಗಳು ನ್ಯಾಯಾಲಯದಲ್ಲಿ ಒತ್ತಡಕ್ಕೆ ಕಾರಣವಾಗಿವೆ ಎಂದರು.

ಕರೊನಾ ನಿಬಂಧಗಳನ್ನು ಉಲ್ಲಂಘನೆ ಮಾಡಿದ ಸಾರ್ವಜನಿಕರ ವಿರುದ್ಧ ದಾಖಲಿಸಲಾಗಿದ್ದ ಮೊಕದ್ದಮೆಗಳನ್ನು ಹಿಂತೆಗೆಯುವ ಅಗತ್ಯವಿದೆ. ಇದರಿಂದ ಪೊಲೀಸ್​ ಇಲಾಖೆ, ಸಾರ್ವಜನಿಕರೂ ಮತ್ತು ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ದೂರುಗಳನ್ನು ವಾಪಸ್​ ಪಡೆಯಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net